ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೧೦.) ದ್ವಾದಶಸ್ಕಂಧನು. ೨೭st ವಾಹನವಾದ ವೃಷಭವನ್ನೇರಿ, ಪ್ರಮಥಗಣಗಳೊಡನೆ ಆಕಾಶದಲ್ಲಿ ಬರು ತಿದ್ದನು. ಆಗ ಪಾಶ್ವತೀದೇವಿಯು ಸಮಾಧಿನಿಷ್ಠ ನಾಗಿದ್ದ ಈ ಬ್ರಾಹ್ಮಣ ನನ್ನು ಕಂಡು, ತನ್ನ ಪತಿಯನ್ನು ಕುರಿತು ಹೀಗೆಂದು ಹೇಳುವಳುಓ ನಾಥಾ! ಇದೋ ! ಈ ಮಹರ್ಷಿಯನ್ನು ನೋಡಿದೆಯಾ? ಬಿರುಗಾಳಿಯು ನಿಂತಮೇಲೆ ನಿಶ್ಚಲವಾದ ಮಹಾಸಮುದ್ರದಂತೆ, ಈ ಮುನಿಯು, ನಿಶ್ಚಲವಾದ ದೇಹೇಂ ದ್ರಿಯಗಳೂ ಮನಸೂ ಉಳ್ಳವನಾಗಿ ಸಮಾಧಿಯಲ್ಲಿರುವನು ನೋಡು ! ನಾವು ಮುಂದೆ ಹೋಗಿ ಇವನನ್ನು ನೋಡಿ ಬರುವೆವು ಬಾ ! ನೀನು ಸಿದ್ಧಿ ಪ್ರದನಲ್ಲವೆ ! ಇವನ ತಪಸ್ಸಿಗೆ ಫಲವನ್ನು ಅನುಗ್ರಹಿಸು ! ” ಎಂದಳು. ಅದಕ್ಕಾರುದ್ರನು. ದೇವಿ! ಈ ಮಹರ್ಷಿಯು ನಮ್ಮಿಂದ ಯಾವ ಕೋರಿಕೆ ಯನ್ನೂ ಬಯಸುವುಹಾಗಿಲ್ಲ! ಅಷ್ಟೇಕೆ ! ಈಗ ಅವನು ಮೋಕ್ಷವನ್ನೂ ಅಪೇಕ್ಷಿಸಲಾರನು. ಏಕೆಂದರೆ, ಈತನು ಪರಮಪುರುಷನಾದ ಶ್ರೀಮನ್ನಾರ ಯಣನಲ್ಲಿ ಅನನ್ಯಪ್ರಯೋಜನವಾದ ಭಕ್ತಿಯನ್ನು ಹಿಡಿದಿರುವನು. ಇಂತ ವರು ಬೇರೆಯಾರಿಂದಲೂ ಏನನ್ನೂ ಕೋರುವಹಾಗಿಲ್ಲ ! ಹಾಗಿದ್ದರೂ ನಾವು ಮುಂದೆ ಹೋಗಿ ಆ ಮಹಾತ್ಮನನ್ನು ಮಾತಾಡಿಸಿಬರುವೆವು. ಇಂತಹ ಸಾಧುಗಳ ಸಮಾಗಮವು ನಮಗೂ ಪರಮಲಾಭವು” ಎಂದನು ಹೀಗೆಂದು ಹೇಳಿ, ಸತ್ಪುರುಷರೆಲ್ಲರಿಗೂ ಉತ್ತಮಗತಿಯಾಗಿಯೂ, ಸರವಿದ್ಯೆಗಳಿಗೂ ಅಧಿಪತಿಯಾಗಿಯೂ, ಸಮಸ್ತ ದೇಹಿಗಳಿಗೂ ಪ್ರಭುವಾಗಿಯೂ ಇರುವ ರುದ್ರಮ, ಆ ಮಹರ್ಷಿಯಬಳಿಗೆ ಬಂದನು. ಸಕಲಜೀವೇಶ್ವರರಾಗಿ, ವಿಶ್ವಾ ಕರೆನಿಸಿದ ಉಮಾಮಹೇಶ್ವರರಿಬ್ಬರೂ ತನ್ನ ಮುಂದೆ ನಿಂತಿದ್ದರೂ, ಇತರಪ್ರಪಂಚವನ್ನಾಗಲಿ ಕೊನೆಗೆ ತನ್ನನ್ನೇ ಆಗಲಿ ಯದಹಾಗೆ ಅಂತಃಕರಣವನ್ನು ನಿರೋಧಿಸಿ ಸಮಾಧಿಸಿವೆಯಿಂದ ಅಮುನಿಗೆ ತಿಳಿ ಯದ ಹೋಯಿತು. ಆಗ ರುದ್ರನು ವಾಯುವು ರಂಧ್ರಗಗಲ್ಲಿ ಪ್ರವೇಶಿಸು ವಂತೆ ಯೋಗಮಾಯೆಯಿಂದ ಅವನ ಹೃದಯರಂಧ್ರದಲ್ಲಿ ತಾನಾಗಿಯೇ ಪ್ರವೇಶಿಸಿದನು. ಆಗ ಆ ಮಹರ್ಷಿಯ ಮನಸ್ಸಿನೊಳಗೆ ಮಿಂಚು ಹೊರ ದಂತಾಗಿ, ಅವನು ಕಣ್ಣು ಮುಚ್ಚಿದ್ದ ಹಾಗೆಯೇ ಹಿಂದಾನೊಂದು ದಿವ್ಯರೂ ಟ ತೋರಿತು. ಆ ದಿವ್ಯಾಕೃತಿಗ ಮಿಂಚಿನಂತೆ ಹೊಂಬಣ್ಣವಾದ ಜಲ !