ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೫೪ ಶ್ರೀಮದ್ಭಾಗವತವು [ಅಧ್ಯಾ. ೧೨೦ ಕಂಸಾಳ್ಮೆಯಿಂದ ಅಕ್ರನು ಬಂದು ಕರೆಯಲು, ರಾಮಕೃಷ್ಣ ರಿಬ್ಬರೂ ಮಧುರೆಗೆ ಪ್ರಯಾಣಮಾಡಿದುದು, ಗೋಪಿಯರ ವಿಲಾಪ, ಮಧುರಾದರ್ಶನ, ಅಲ್ಲಿ ಗಜ, ಮುತ್ಮಿಕ, ಚಾಣೂರ, ಕಂಸಾದಿಗಳ ವಧೆ, ಗುರುವಾದ ಸಾಂದೀಪನಿಯ ಮೃತಪುತ್ರನನ್ನು ಬದುಕಿಸಿದುದು, ಕೃಷ್ಣನು ಮಧುರೆಯಲ್ಲಿ ಉದ್ದವ ಬಲರಾಮರೊಡನೆ ವಾಸಮಾಡುತ್ತ ಬದುಗಳಿಗೆ ಪ್ರಿಯವನ್ನುಂಟುಮಾಡಿದುದು, ಜರಾಸಂಧನ ಸೇನೆಯನ್ನು ಜಯಿಸಿ ದುದು, ಕಾಲಯವನನನ್ನು ಕೊಂಡುದು, ಕುಶಸ್ಥಲಿಯನ್ನು ಪ್ರವೇ ತಿಸಿದುದು, ದೇವಲೋಕದಿಂದ ಪಾರಿಜಾತವನ್ನೂ, ಸುಧಾಸಭೆಯನ್ನೂ ಸಾಗಿಸಿತಂದುದು, ಶತ್ರುಗಳನ್ನು ಜಯಿಸಿ ಕೃಷ್ಣನು ರುಕ್ಕಿಣಿಯನ್ನು ಅಪಹರಿಸಿಕೊಂಡು ಹೋದುದು, ಬಾಣಾಸುರಯುದ್ಧ, ಕೃಷ್ಣನು ಬಾಣಾಸುರನ ಭುಜಗಳನ್ನು ಕತ್ತರಿಸಿದುದು, ಪ್ರಾಗೋತಿಷಪುರದಲ್ಲಿ ನರಕಾಸುರನನ್ನು ಕೊಂದು, ಅವನು ಸೆರೆಯಲ್ಲಿಟ್ಟಿದ್ದ ರಾಜಕಖ್ಯೆಯರನ್ನು ಕರೆತಂದುದು, ಶಿಶುಪಾಲ, ದಂತವಕ, ಪೌಂಡ್ರಕ, ಸಾಲ್ವ, ಶಂಬರ, ದ್ವಿವಿದ, ಪೀಠ, ಮುರಾಸುರ, ಪಂಚಜನರೇ ಮೊದಲಾದವರ ಮಹತ್ವ, ಅವರನ್ನು ಶ್ರೀಕೃಷ್ಣನು ವಧಿಸಿದುದು, ಕಾಶೀಪಟ್ಟಣವನ್ನು ದಹಿಸಿದು ದು, ಪಾಂಡವರನ್ನು ನೆನವಾಗಿಟ್ಟುಕೊಂಡು ಕುರುಕ್ಷೇತ್ರ ಯುದ್ಧದಲ್ಲಿ ಭೂ ಭಾರವನ್ನು ಕಡಿಮೆಮಾಡಿದುದು, ಇವೆಲ್ಲವೂ ವರ್ಣಿಸಲ್ಪಟ್ಟಿವೆ. ಅಲ್ಲಿಂದಾಚೆಗೆ ಹನ್ನೊಂದನೆಯ ಸ್ಕಂಧದಲ್ಲಿ, ಕೃಷ್ಣನು ಬ್ರಾಹ್ಮಣಶಾಪವನ್ನೇ ನೆವವಾಗಿ ಮಾಡಿಕೊಂಡು, ತನ್ನ ಕುಲವನ್ನು (ಯಾದವಕುಲದವರನ್ನು ಸಂಹರಿಸಿ ದುದೂ, ಉದ್ದವನೆಡನೆ ನಡೆಸಿದ ಅದ್ಭುತಸಂವಾದಗಳೂ, ಈ ಮೂಲಕ ವಾಗಿ ವರ್ಣಾಶ್ರಮಧಯ್ಯಗಳನ್ನು ನಿರ್ಣಯಿಸತಕ್ಕ ಆತ್ಮವಿದ್ಯೆಯೆಲ್ಲವನ್ನೂ ನಿರೂಪಿಸಿದುದೂ, ಆಮೇಲೆ ತನ್ನ ಯೋಗಪ್ರಭಾವದಿಂದ ಮನುಷ್ಯ ಲೋಕವನ್ನು ಬಿಟ್ಟು ತನ್ನ ನಿಜಸ್ಥಾನಕ್ಕೆ ತೆರಳಿದುದೂ ವರ್ಣಿಸಲ್ಪಟ್ಟಿವೆ. ಆಮೇಲೆ ಹನ್ನೆರಡನೆಯ ಸ್ಕಂಥದಲ್ಲಿ ಯುಗಭೇದಗಳೂ, ಅವುಗಳ ಲಕ್ಷಣ ಗಳೂ, ಆಯಾಯುಗಗಳಲ್ಲಿ ನಡೆಯತಕ್ಕ ವೃತ್ತಿಗಳ, ಕಲಿಯುಗದಲ್ಲಿ ಮನುಷ್ಯರಿಗುಂಟಾಗತಕ್ಕ ನಾನಾಬಗೆಯ ಉಪದ್ರವಗಳೂ, ಪ್ರಾಕೃತಿಕ,