ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೦ ಶ್ರೀಮದ್ಭಾಗವತರು [ಅಧ್ಯಾ, ೨೯. ಹೇಳಲ್ಪಡುವ ಸಾಮಾದ್ಯುಪಾಯಗಳಿಂದಾಗಲಿ, ಹೊಂದಬಹುದಾದ ಯಾವಯಾವ ಪುರುಷಾರಗಳುಂಟೋ, ಧಾರ ಕಾಮಮೋಕ್ಷಗಳೆಂಬ ಆ ನಾಲ್ಕು ಬಗೆಯ ಪುರುಷಾರಗಳೂ ನಿನ್ನಂತಹ ಭಕ್ತರಿಗೆ ನಾನೇ ಆಗಿರು ವೆನು. ಅನನ್ಯಶರಣರಾಗಿ ನನ್ನನ್ನೇ ನಂಬಿದ ಭಕ್ತರನ್ನು ಅನು ಗ್ರಹಿಸಬೇಕೆಂಬುದೇ ನನ್ನ ಮುಖ್ಯಸಂಕಲ್ಪವು. ಆದುದರಿಂದ ಯಾವನು ತನ್ನ ರಕ್ಷಣಭಾರವೆಲ್ಲವನ್ನೂ ನನ್ನ ಮೇಲೆಯೇ ಹೊರಿಸಿ, ತಾನು ನಡೆಸತಕ್ಕೆ ವರ್ಣಾಶ್ರಮಧಮ್ಮಗಳೆಲ್ಲವನ್ನೂ ನನ್ನ ಆರಾಧನರೂಪವಾಗಿಯೇ ನಡೆಸುತ್ತ, ಬೇರೆ ವಿಧಗಳಾದ ಕಾಮ್ಯಕಮ್ಮಗಳೆಲ್ಲವನ್ನೂ 'ಹರಿತ್ಯಜಿಸುವನೋ, ಅಂತವನು ನನ್ನ ಪೂರ್ಣಾನುಗ್ರಹಕ್ಕೆ ಪಾತ್ರನಾಗಿ, ಪಾಪರಹಿತ್ಯವೇ ಮೊದಲಾದ ಸಹಜಗುಣಗಳುಳ್ಳ ಶುದ್ಧಾತ್ಮಸ್ವರೂಪದಿಂದ ನನ್ನೊಡನೆ ಸಮಾನಧಮ್ಮ ವನ್ನು ಹೊಂದಿ, ಮುಕ್ತಿಯನ್ನು ಪಡೆಯುವನು” ಎಂದನು. ಓ ಪರೀಕ್ಷಿದ್ರಾಜಾ! ಹೀಗೆ ಭಗವಂತನು ತನ್ನ ಉಪಾಸನಾರೂಪ ವಾದ ಯೋಗಮಾರ್ಗವನ್ನು ಉಪದೇಶಿಸಲು, ಉದ್ದವನು ಅದನ್ನು ಕೇಳಿ ಆನಂದಪರವಶನಾಗಿ, ಕಣ್ಣುಗಳಲ್ಲಿ ಆನಂದಬಾಷ್ಪವನ್ನು ತುಳುಕಿಸುತ್ತ, ಗದ್ಯದಕಂಠನಾಗಿ, ಯಾವ ಮಾತನ್ನೂ ಆಡಲಾರದೆ, ಆ ಶ್ರೀಕೃಷ್ಣನ ಮುಂದೆ ಬದ್ಧಾಂಜಲಿಯಾಗಿ ಸ್ವಲ್ಪ ಹೊತ್ತಿನವರೆಗೆ ಸುಮ್ಮನೆ ಸಭ್ಯನಾಗಿ ನಿಂತಿದ್ದನು. ಹೀಗೆ ಪ್ರೀತಿಪರವಶವಾದ ಮನಸ್ಸನ್ನು ಆಮೇಲೆ ಮೆಲ್ಲಗೆ ಸ್ಥಿರಪಡಿಸಿಕೊಂಡು, ಆ ಕೃಷ್ಣನ ಪಾದಗಳನ್ನ ಪ್ಪಿ ಸಾಷ್ಟಾಂಗವಾಗಿ ನಮ ಸ್ಕರಿಸಿ, ಮೇಲೆದ್ದು ನಿಂತು, ಕೈ ಮುಗಿದು ಹೀಗೆಂದು ವಿಜ್ಞಾಪಿಸುವನು, (ಕೃಷ್ಣಾ ! ಈಗ ನಿನ್ನ ಸನ್ನಿಧಾನ ಮಾತ್ರದಿಂದಲೇ, ನನ್ನಲ್ಲಿ ಬಹುಕಾಲ ದಿಂದ ನೆಲೆಗೊಂಡಿದ್ದ ಮೋಹವೆಂಬ ಮಹಾಂಧಕಾರವು ಬಿಟ್ಟುಹೋಯಿತು. ಸೂರಿನ ಸಮೀಪವನ್ನು ಸೇರಿಒವನಿಗೆ, ಅಂಧಕಾರಭಯವಾಗಲಿ, ಶೀತ ಭಯವಾಗಲಿ ಎಲ್ಲಿಯದು ? ಪರಮದಯಾಳುವಾದ ನೀನು, ನೃತ್ಯನಾದ ನನಗೆ ಮಹಾಮೋಹಾಂಧಕಾರವನ್ನು ನೀಗಿಸತಕ್ಕ ಜ್ಞಾನಪ್ರದೀಪವನ್ನು ಅನುಗ್ರಹಿಸಿದೆ ! ಹೀಗೆ ನೀನು ಆಶ್ರಿತರಿಗೆ ಪರಮೋಪಕಾರಿಯೆಂಬುದನ್ನು ತಿಳಿದವನು ಯಾವನು ತಾನೇ, ನಿನ್ನ ಪಾದಮೂಲವನ್ನು ಬಿಟ್ಟು ಬೇರೊಬ್ಬ