ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಅಧ್ಯಾ, ೧೬.] ಏಕಾದಶಸ್ಕಂಧವ. ಗಿರುವೆನು. ದೇವತೆಗಳಲ್ಲಿ ಇಂದ್ರನೂ, ಅಷ್ಟವಸುಗಳಲ್ಲಿ ಹವ್ಯವಾಹನನೂ, ದ್ವಾದಶಾಹಿತ್ಯರಲ್ಲಿ ವಿಷ್ಣುವೂ, ಏಕಾದಶರುದ್ರರಲ್ಲಿ ನೀಲಲೋಹಿತನ, ಬ್ರಹ್ಮರ್ಷಿಗಳಲ್ಲಿ ಭ್ರಗುವೂ, ರಾಜರ್ಷಿಗಳಲ್ಲಿ ಮನುವೂ, ದೆ ವರ್ಷಿ ಗಳಲ್ಲಿ ನಾರದನೂ, ಧೇನುಗಳಲ್ಲಿ ಕಾಮಧೇನುವೂ ನಾನೇ ಆಗಿರುವೆನು. ಯೋಗಸಿದರಲ್ಲಿ ಕಪಿಲನೂ, ಪಕ್ಷಿಗಳಲ್ಲಿ ಗರುಡನೂ, ಪ್ರಜಾಪತಿಗಳಲ್ಲಿ ದಕ್ಷನೂ, ಪಿತೃಗಳಲ್ಲಿ ಅಧ್ಯಮನೂ ನಾನೇ ! ಉದ್ಧವಾ ' ದೈತ್ಯರಲ್ಲಿ ನನ್ನನ್ನೇ ಪ್ರಹ್ಲಾದನೆಂದು ತಿಳಿ ! ನಕ್ಷತ್ರಗಳಿಗೂ, ಓಷಧಿಗಳಿಗೂ ಅಧಿಪತಿಯಾದ ಚಂದ್ರನೂ, ಯಕ್ಷರಾಕ್ಷಸರಲ್ಲಿ ಕುಬೇರನೂ ನಾನೇಂ ! ಆನೆಗಳಲ್ಲಿ ಐರಾವ ತವೂ ನಾನೇ ! ಜಲಜಂತುಗಳಿಗೆ ಪ್ರಭುವಾದ ವರುಣನೂ ನಾನಾಗಿರು ವೆನು. ಕಾಂತಿಯುಳ್ಳ ಮತ್ತು ತಾಪಜನಕಗಳಾದ ವಸ್ತುಗಳಲ್ಲಿ ಸೂರನೂ, ಮನುಷ್ಯರಲ್ಲಿ ರಾಜ, ಕುದುರೆಗಳಲ್ಲಿ ಉ ಗ್ರವಸ, ಧಾತುಗಳಲ್ಲಿ ಬಂಗಾರವೂ ನಾನಾಗಿರುವೆನು ದಂಡಿಸತಕ್ಕವರಲ್ಲಿ ಯಮನ ೧, ಸರ್ಪಗೆ ಇಲ್ಲಿ ವಾಸುಕಿಯೂ ನಾನೇ ! ಅನೇಕಫಣೆಗಳುಳ್ಳ ನಾಗಿ ನಾನೇ ಆದಿಶೇಷನು. ಕೊಂಬುಗಳೂ, ಕೋರೆಹಗಳೂ ಉಳ್ಳ ಮೃಗಗಳಲ್ಲಿ ನಾನು ಸಿಹ್ಮವು ! ವರ್ಣಗಳಲ್ಲಿ ಗ್ರಾಹ್ಮಣವರ್ಣವೂ, ಆಶ್ರಮಗಳಲ್ಲಿ ಸನ್ಮಾ ಸಾಶ್ರಮವೂ ನಾನೇ ಆಗಿರುವೆನು ತೀರ ನದಿಗಳಲ್ಲಿ ಗಂಗೆಯೂ, ಮಡುಗ ಇಲ್ಲಿ ಸಮುದ್ರವೂ, ಆಯುಧಗಳಲ್ಲಿ ಧವನ್ನೂ, ಧನುಷಂತದಲ್ಲಿ ತ್ರಿಪುರ ಹರನೂ, ವಾಸಗೃಹಗಳಲ್ಲಿ ಮೇರುವೂ, ದುರ್ಗಮಸ್ಥಾನಗಳಲ್ಲಿ ಹಿಮಾಲ ಯವೂ, ವೃಕ್ಷಗಳಲ್ಲಿ ಅಶ್ವತವೂ, ಓಷಧಿಗಳಲ್ಲಿ ಯವವೂ ಜವೆಗೋಧಿ, ನಾನಾಗಿರುವನು. ಫರೋಹಿತರಲ್ಲಿ ವಸಿಷ್ಠನೂ, ವೇದಸಿಷ್ಠರಲ್ಲಿ ಬೃಹಸ್ಪ ತಿಯೂ, ಸೇನಾಪತಿಗಳ ಷಣ್ಮುಖನೂ, ಸನ್ಮಾರ್ಗಪ್ರವರ್ತಕರಲ್ಲಿ ಭಗ ವಂತನಾದ ಬ್ರಹ್ಮನೂ ನಾನೇ ! ಯಜ್ಞಗಳಲ್ಲಿ ಬ್ರಹ್ಮಯಜ್ಞವೂ, ವ್ರತಗ ಲಲ್ಲಿ ಅಹಿಂಸೆಯ ನಾನಾಗಿರುವೆನು. ಶುಕ್ಕಿಕಾವಸ್ತುಗಳಲ್ಲಿ, ಬೆಂಕಿಯೂ ನೀರೂ, ಗಾಳಿಯೂ, ಸೂರನ್ನೂ,ಆಕಾಶವೂ ನಾನೇ ಆಗಿರುವೆನು. ಆಷ್ಟಾಂ ಗಯೋಗಗಳಲ್ಲಿ ಸಮಾಧಿಯೆಂಬ ಯೋಗವೂ ನಾನೇ ! ಶತ್ರುಜಯಾ ಕಾಂಕ್ಷಿಗಳಲ್ಲಿ ಜಯೋಜಾಯಮಂತ್ರವೂ ನಾನೇ ! ವಿದ್ಯಾನೈಪುಣ್ಯದಲ್ಲಿ