ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨efo ಶ್ರೀಮದ್ಭಾಗವತವು [ಅಣ್ಣಾ. ೨೨. ಆ ನಿನ್ನ ಮಾಯೆಯಿಂದಲೇ ಮೋಹಿತರಾದವರು ಅದನ್ನು ಹೇಗೆ ತಿಳಿಯ ಬಲ್ಲರು?” ಎಂದನು. ಅದಕ್ಕಾ ಭಗವಂತನು «« ಉದ್ದವಾ ! ಪ್ರಕೃತಿಪುರುಷರೆಂಬ ತತ್ವಗ ಳೆರಡೂ ಬೇರೆಬೇರೆಯಾದುವುಗಳೇ ಹೊರತು ಒಂದಲ್ಲ. ಪ್ರಪಂಚದಲ್ಲಿ ಸೃಜಿಸಲ್ಪಟ್ಟ ಭೂತಗಳೆಲ್ಲವೂ ಪ್ರಕೃತಿಯ ವಿಕಾರವೆನಿಸಿಕೊಂಡ ಅಹಂಕಾರ ತತ್ವದಿಂದ ಉಂಟಾಗಿರುವುವು. ಅದರಲ್ಲಿ 11 ಇಚ್ಛಿಸುವೆನು.” ದ್ವೇಷಿ ಸುವೆನು” ಎಂಬಿವೇ ಮೊದಲಾದ ಆತ್ಮಗುಣಗಳೂ, ದೊಡ್ಡದು ಸಣ್ಣ ದೆಂಬ ದೇಹಗುಣಗಳೂ ಒಂದಾಗಿ ಕಲೆತು, ಒಂದರ ಗುಣವು ಮತ್ತೊಂದ ರಲ್ಲಿ ತೋರುವುದು ಅಹಂಕಾರಕಾರವೆಂದೇ ತಿಳಿ! ಉದ್ಯವಾ! ಹೀಗೆ ಅಹಂ ಕಾರದ ಮೂಲಕವಾಗಿ ದೇಹಗುಣವನ್ನೂ , ಅತ್ಯಗುಣವನ್ನೂ ಕಲೆಸಿ, ಅವು ಗಳಿಗೆ ಭೇದವೇ ತಿಳಿಯದಂತೆ ಮಾಡಿರುವುದು ನನ್ನ ಮಾಯೆಯೇ ! ಮತ್ತು ಆ ಮಾಯೆಯೇ ಆತ್ಮನಲ್ಲಿ ಸತ್ತಾಗುಣಗಳ ಮೂಲಕವಾಗಿ ದೇವನೆಂ ದೂ, ಮನುಷ್ಯನೆಂದೂ, ತಾನೇ ಸ್ವತಂತ್ರನೆಂದೂ, ನಾನಾಬಗೆಯ ಭೇದ ಬುದ್ಧಿಯನ್ನೂ ಕಲ್ಪಿಸುತ್ತಿರುವುದು. ವೈ ಕಾರಿಕವೆಂಬ ಆ ಅಹಂಕಾರತತ್ವವು, * ಆಧ್ಯಾತ್ಮ, ಅಧಿದೈವ, ಅತಿಭೂತವೆಂಬ ಮೂರುವಿಧವುಳ್ಳದು ಇವುಗ ಇಲ್ಲಿ ದೃಕ್ಕು ಕಣ್ಣು) ಆಧ್ಯಾತ್ಮವು, ರೂಪವು ಅಧಿಭೂತವು ಸೂರ್

  • ಅಧ್ಯಾತ್ಮ, ಅಧಿಭೂತ, ಅಧಿದೈವಗಳೆಂಬುದರ ಅರ್ಥವೇನೆಂದರೆ, ಇಂದ್ರಿಯ ಗಳು ಆತ್ಮದಲಿ (ದೇಹದಲ್ಲಿ ) ಇರುವುದರಿಂದ ಅಧ್ಯಾತ್ಮವೆಂದೂ, ರೂಪಾದಿವಿಷಯ ಗಳು ತೇಜಸ್ಸು ಮೊದಲಾದ ಭೂತಗಳಲ್ಲಿರುವುದರಿಂದ ಅಧಿಭೂತವೆಂದೂ, ಆ ಇಂ

ಯಾಧಿಷ್ಟಾನದೇವತೆಗಳಾದ ಸೂಾದಿಗಳು ದೇವರೂಪಿಗಳಾದುದರಿಂದ ಅಧಿದೈವ ವೆಂದೂ ಕರೆಯಲ್ಪಡುವುವು. ಠಾಜಸಾಹಂಕಾರದೊಡಗೂಡಿದ ಸಾತ್ವಿಕ ತಾಮಸಾಹಂ ಕಾರಗಳೆರಡರಿಂದಲೂ,ಇಂದ್ರಿಯಗಳೂ, ರೂಪಾದಿ ವಿಷಯಗಳೂ, ಇಂದ್ರಿಯಾಧಿಷ್ಠಾ ತೃಗಳಾದ ದೇವತೆಗಳೂ ಸೃಜಿಸಲ್ಪಟ್ಟಂತೆ ಸೃಷ್ಟಿ ಪ್ರಕರಣದಲ್ಲಿ ಹೇಳಲ್ಪಡುವುವು. ಆದುದರಿಂದ ಅಧ್ಯಾತ್ಮಾದಿಗಗಳುಮೂರ ಅಹಂಕಾರಸೃಷ್ಟಿಯೆನಿಸುವುವು.ಈಮೂರ ರಲ್ಲಿ ಯಾವುದೊಂದರ ಸಹಾಯವಿಲ್ಲದಿದ್ದರೂ ಜ್ಞಾನವುಂಟಾಗಲಾರದು. ಆದುದ ರಿಂದ ಈ ಮೂರಕ್ಕೂ ಅನ್ನೋನ್ಯವಾಗಿ ಉಪಕಾರಪಕಾರತತ್ವವುಂಟೆಂದು ಗ್ರಾಹ್ಯವ.