ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪ ಅಭ್ಯಾ. ೧೬. ಏಕಾದಶಸ್ಕಂಧನ, ಈ ಮೇಲೆ ಹೇಳಿದ ನಾಲ್ಕು ವರ್ಣಗಳ ಸ್ವಭಾವಧಗಳಾವುವೆಂದರೆ, ಶಮ, ದಮ, ತಪಸ್ಸು, ಶೌಚ, ಸಂತೋಷ, ತಾಳ್ಮೆ, ಋಜುತ್ವ, ಭಗವ ದೃಕ್ಕಿ, ದಯೆ, ಸತ್ಯ, ಇವೆಲ್ಲವೂ ಬ್ರಾಹ್ಮಣರಿಗಿರಬೇಕಾದ ಸ್ಪಭಾವಧರ ಗಳು. ತೇಜಸ್ಸು, ಬಲ, ಧೈಶ್ಯ, ಶಲ್ಯ, ಕಷ್ಟಸಹಿಷ್ಣುತೆ, ಔದಾರ್, ಉದ್ಯಮ,ಸ್ತ್ರ, ಬ್ರಾಹ್ಮಣರಲ್ಲಿ ಪ್ರೀತಿ, ಅಧಿಕಾರಶಕ್ತಿಯೆಂಬಿವು ಕ್ಷತ್ರಿಯ ರ ಸ್ವಭಾವವು. ಆಸ್ತಿಕತೆ, ದಾನಶೀಲತೆ, ವಂಚನೆಯಿಲ್ಲದಿರುವಿಕೆ, ಬ್ರಾಹ್ಮ ಣರನ್ನು ಸಂತೋಷಪಡಿಸುವುದು, ಎಷ್ಮೆ ಧನವು ಕೈಗೂಡಿ ಬರುತ್ತಿದ್ದ ರೂ ಅದರಲ್ಲಿ ತೃಪ್ತಿ ಹೊಂದದಿರುವುದು, ಇವೆಲ್ಲವೂ ವೈಶ್ಯರಲ್ಲಿರಬೇಕಾದ ಸ್ವಭಾವಗಳು. ದೇವತೆಗಳಿಗೂ ಗೋಬ್ರಾಹ್ಮಣರಿಗೂ ನಿಷ್ಕಪಟವಾಗಿ ಸೇವೆ ಮಾಡುವುದು, ಅದರಿಂದ ತನಗೆ ಲಭಿಸಿದುದರಲ್ಲಿ ತೃಪ್ತನಾಗಿರುವುದು, ಇವೆರಡೂ ಶೂದ್ರರಲ್ಲಿರಬೇಕಾದ ಸ್ವಭಾವಗಳು. ಅಶುಚಿಯಾಗಿರುವುದು, ಸುಳ್ಳು, ಕಳವು, ನಾಸ್ತಿಕತೆ, ನಿಷ್ಕಾರಣವಾದ ಕಲಹವನ್ನು ತೆಗೆಯುವುದು, ಕಾಮಕ್ರೋಧಗಳು, ಹಣದಾಸೆ, ಇವೆಲ್ಲವೂ ಮೇಲೆ ಹೇಳಿದ ನಾಲ್ಕುವ ರ್ಣಾಶ್ರಮಗಳಿಂದಲೂ ಹೊರಗಾದ ಅಂತ್ಯಜರ ಸ್ವಭಾವಗಳು. ಅಹಿಂಸೆ, ಸತ್ಯ, ಕಳ್ಳತನಮಾಡದಿರುವುದು, ಕಾಮಕ್ರೋಧಭಾದಿಗಳಿಗೆ ವಶ ನಾಗದಿರುವುದು, ಸಮಸ್ತಭೂತಗಳಿಗೂ ಹಿತವನ್ನುಂಟುಮಾಡುವುದರ ಕ್ಲಿಯೇ ಆಸಕ್ತಿ, ಇವೆಲ್ಲವೂ ಸತ್ವವರ್ಣದವರಲ್ಲಿಯೂ ಇರಬೇಕಾದ ಸಾ ಧಾರಣಸುಗುಣಗಳು. ಉದ್ದವಾ ! ಇನ್ನು ಆಯಾ ಆಶ್ರಮಗಳಲ್ಲಿ ನಡೆಸಬೇಕಾದ ಧರ ಗಳನ್ನು ತಿಳಿಸುವೆನು ಕೇಳು. ಬ್ರಹ್ಮಚಕ್ಕೆಯನ್ನು ನಡೆಸತಕ್ಕ ದ್ವಿಜನು, ಕ್ರಮ ವಾಗಿ ಗರ್ಭಾಧಾನ ಮೊದಲಾದ ಸಂಸ್ಕಾರಗಳು ನಡೆದು, ಉಪನಯನವೆಂಬ ಎರಡನೆಯ ಜನ್ಮವನ್ನು ಹೊಂದಿದಮೇಲೆ, ಗುರುಕುಲವನ್ನು ಸೇರಿ, ಅಲ್ಲಿ ಜಿತೇಂದ್ರಿಯನಾಗಿ, ವೇದವನ್ನು ಅಧ್ಯಯನಮಾಡುತ್ತಿರಬೇಕು. ಆಗ ತನ್ನ ಬ್ರಹ್ಮಚಯ್ಯಾಶ್ರಮಕ್ಕೆ ವಿಧಿಸಲ್ಪಟ್ಟ ವ್ರತಗಳನ್ನು ಎಚ್ಚರದಿಂದನುಸರಿ ಸುತ್ತಿರಬೇಕು. ಮುಂಜಿ, ಕೃಷ್ಣಾಜಿನ, ದಂಡ, ಕಮಂಡಲು,ಅಕ್ಷಮಾಲಿಕೆ, ಯಜ್ಯೋಪವೀತವೆಂಬಿವುಗಳನ್ನು ಧರಿಸಿ, ಅಭ್ಯಂಗನಾಡಿಸಂಸ್ಕಾರಗಳಿಲ್ಲದೆ