ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೫ ಅಧ್ಯಾ. ೩೦.) ಏಕಾದಶಸ್ಕಂಧನು. ಅವರಲ್ಲಿ ಮಾತಿಗೆ ಮಾತು ಬೆಳೆದು ದೊಡ್ಡ ಕಲಹವುಂಟಾಯಿತು. ಒಬ್ಬರ ನ್ನೊಬ್ಬರು ಕೊಲ್ಲಬೇಕೆಂಬ ಹಟದಿಂದ, ಕತ್ತಿ, ಬಿಲ್ಲು, ಈಟಿ, ಗದೆ, ಮುಂ ತಾದ ಆಯುಧಗಳನ್ನು ಹಿಡಿದು, ಆಸಮುದ್ರತೀರದಲ್ಲಿಯೇ ಯುದ್ಧವ ನ್ಯಾ ರಂಭಿಸಿದರು. ಧ್ವಜಸಹಿತಗಳಾದ ರಥಗಳು, ಆನೆಗಳು, ಕುದುರೆಗಳು, ಕಾಲಾಳುಗಳು, ಒಂಟೆಗಳು,ಕತ್ತೆಗಳು,ಹೇಸರಗತ್ತೆಗಳು, ಎಮ್ಮೆಗಳು, ಎತ್ತು ಗಳು, ಮೊದಲಾದ ಎಲ್ಲಾ ಬಗೆಯ ಯುದ್ಧ ಸಾಧನಗಳನ್ನೂ ಸಂಗ್ರಹಿಸಿ ಕೊಂಡು, ಮದದಿಂದ ಒಬ್ಬರಿಗೊಬ್ಬರು ಮೇಲೆ ಬಿಳುತ್ತ, ಆನೆ ಗಳು ತಮ್ಮ ಕೊಂಬುಗಳಿಂದ ಕಾಡನ್ನು ನಾನಾ ಕಡೆಯಲ್ಲಿಯೂ ಮು ರಿದು ಕೆಡಹುವಂತೆ, ಅವರವರು ತಮ್ಮ ತಮ್ಮ ಕೈಗೆ ಸಿಕ್ಕಿದವರನ್ನು ಕೊಲ್ಲುತ್ತಬಂದರು. ಒಂದುಕಡೆಯಲ್ಲಿ ಪ್ರದ್ಯುಮ್ನ ನೂ, ಸಾಂಬವೂ ಒಬ್ಬರಿ ಗೊಬ್ಬರು ಹಟದಿಂದ ಕೈ ಕಲೆತು ಯುದ್ಧ ಮಾಡತೊಡಗಿದರು. ಮತ್ತೊಂ ದು ಕಡೆಯಲ್ಲಿ ಅಕ್ರೂರನೂ, ಭೋಜನೂ ಪರಸ್ಪರಯುದ್ಧಕ್ಕೆ ನಿಂತರು. ಇನ್ನೊಂದು ಕಡೆಯಲ್ಲಿ ಅನಿರುದ್ಧನೂ, ಸಾತ್ಯಕಿಯೂ ಜಗಳಕ್ಕೆ ನಿಂ ತರು. ಬೇರೊಂದುಕಡೆಯಲ್ಲಿ ಸುಭದ್ರನೂ, ಸಂಗ್ರಾಮಜಿತ್ತೂ ಯು ದ್ರೋದ್ಯುಕ್ಯರಾದರು. ಒಂದುಕಡೆಯಲ್ಲಿ ಸುಚಾರುವಿನೊಡನೆ ಗದನೂ, ಮತ್ತೊಂದು ಕಡೆಯಲ್ಲಿ ಸುಮಿತ್ರನೊಡನೆ ಸುರಥನೂ ಹೋರಾಡತೊಡಗಿ ದರು. ಹೀಗೆಯೇ ಅಲ್ಲಲ್ಲಿ, ನಿಶಠ, ಉಲ್ಕುಕ, ಸಹಸ್ರಜಿತ್ತು, ಶತಜಿತ್ತು, ಭಾನು, ಮುಂತಾದ ಯಾದವವೀರರೆಲ್ಲರೂ ಕೃಷ್ಣನ ಮಾಯೆಯಿಂದ ಮೋಹಗೊಂಡು, ಮದಾಂಧರಾಗಿ, ಒಬ್ಬರನ್ನೊಬ್ಬರು ಕೊಲ್ಲುತ್ತ ಬಂದರು. ಹೀಗೆ ದಾಶಾರ್ಹರು, ಅಂಧಕರು, ಭೋಜರು, ಸಾತ್ವತರು, ಮಧುಗಳು, ವೃಷ್ಟಿಗಳು, ಅರ್ಬುದರು, ಮಾಧುರರು, ಶೂರಸೇನರು, ವಿತರ್ಜನರು, ಕುಕುರರು, ಕುಂತಿಗಳು ಮುಂತಾದ ಯಾದವಕುಲದವರೆಲ್ಲರೂ ಸ್ವಜನಾಭಿಮಾನವನ್ನು ತೊರೆದು, ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದರು. ಮದ್ಯಮದದಿಂದ ಉನ್ಮತ್ತರಾದ ಆ ಯಾದವರೆಲ್ಲರೂ, ತಂದೆಯೆಂದೂ, ಮಗನೆಂದೂ, ಸಹೋದರರೆಂದೂ, ಭಾವನೆಂದೂ, ಮೈದುನನೆಂದೂ, ಅಳಿ ಯನೆಂದೂ, ಮಾವನೆಂದೂ, ಅಜ್ಜನೆಂದೂ, ಮುಮ್ಮಗನೆಂದೂ, ಮಿತ್ರನಂ