ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಅಧ್ಯ..] ದ್ವಾಪರಕ್ಕಂಧರ, ಮಹಾಪ್ರಳಯದಲದಲ್ಲಿ, ಆ ಸಣ್ಣ ಮಗುವೊಂದು ನಲಿದಾಡುತ್ತಿರುವುದನ್ನು ಕಂಡಾಗ, ಆ ಮಹರ್ಷಿಗೆ ಮಹತ್ತಾದ ಭಯಾರಗಳುಂಟಾಗಿ, ಕೈಕಾಲು ಗಳೇ ಆಡದಂತಿದ್ದರೂ, ಆ ಮಗುವನ್ನು ನೋಡಬೇಕೆಂಬ ಕುತೂಹಲದಿಂದ ಮೆಲ್ಲಗೆ ಮುಂದೆ ಹೋದನು. ಈ ಮಸಿಯು ಸಮೀಪಕ್ಕೆ ಬಂದೊಡನೆ, ಆ ಶಿಶುವಿನ ಉಸಿರಿನ ಗಾಳಿಯಿಂದ ಆಕರ್ಷಿಸಲ್ಪಟ್ಟು, ಸೊಳ್ಳೆಯಂತೆ ಅದರ ಹದೊಳಗೆ ಸೇರಿದನು. ಆ ಶಿಶುವಿನ ಗರ್ಭವನ್ನು ಪ್ರವೇಶಿಸಿದಮೇಲೆ ಅಲ್ಲಿ ಮೊದಲಿನಂತೆ ಮತ್ತೊಂದು ಶಿಶುವು ಕಾಣಿಸಿತು ಮತ್ತು ನಾನು ಮೊ ದಲು ನೋಡಿದ ಸಮಸ್ತವಿಶ್ವವೂ ಆ ಶಿಶುವಿನ ಶರೀರದೊಳಗೆ ಕಾಣಿ ಸಿತು. ಭೂಮ್ಯಾಕಾಶಗಳು ಅಂತರಿಕ್ಷದಲ್ಲಿ, ನಕ್ಷತ್ರ ಸಮೂಹಗಳು, ಪಕ್ಷ ತಗಳು, ಸಮುದ್ರಗಳು, ದ್ವೀಪಗಳು, ವರ್ಷ (ಭೂಖಂಡ) ಗಳು, ದಿಕ್ಕು ಗಳು, ದೇವಾಸುರವರ್ಗಗಳು, ನದಿಗಳು, ದೇಶಗಳು, ವನಗಳು, ಪಟ್ಟ ಣಗಳು, ಗ್ರಾಮಗಳು, ಗಣಿಗಳು, ವ್ಯವಸಾಯಗಾರರು ವಾಸಮಾರ ತಕ್ಕ ಗ್ರಾಮಗಳು, ಗೊಲ್ಲರ ಹಳ್ಳಿಗಳು, ಋಷ್ಯಾಶ್ರಮಗಳು, ಬ್ರಾಹ್ಮ ಣಾದಿಚತುರ್ವಣ್ರಗಳು, ಅವರ ಬೇರೆಬೇರೆ ವೃತ್ತಿಗಳು, ಆಕಾಶಾದಿ ಮಹಾ ಭೂತಗಳು ಆ ಪಾಂಚಭೌತಿಗಳಾದ ಶರೀರಗಳು, ಯುಗಭೇದಗಳುಳ್ಳ ಕಾಲವಿಭಾಗಗಳು, ಮತ್ತು ವ್ಯವಹಾರನಿಮಿತ್ತಗಳಾದ ಬೇರೆ ಯಾವಯಾವ ವಸ್ತುಗಳುಂಟೋ ಅವೆಲ್ಲವೂ ಅಲ್ಲಿ ಕಾಣಿಸಿದುವು. ಅಜ್ಞಾನಿಗಳಿಗೆ ನಿತ್ಯ ವೆಂದು ತೋರುವ ಸಮಸ್ಯಜಗತ್ತೂ, ಅಲ್ಲಿ ಕಾಣಿಸಿತು. ಮತ್ತು ಆ ಗರ್ಭ ದಲ್ಲಿಯೇ ಮಾರ್ಕಂಡೇಯನು,ಮೊದಲು ತಾನಿದ್ದ ಅದೇ ಹಿಮಾಲಯಪರತ ವನ್ನೂ ,ಅದೇ ಪುಷ್ಪವಹಾನದಿಯನ್ನೂ, ಅಲ್ಲಿ ತನ್ನ ಆಶ್ರಮವನ್ನೂ, ಅಲ್ಲಿ 1 ನ್ನೊಡನಿದ್ದ ಋಷಿಗಳನ್ನೂ ಕಂಡನು. ಹೀಗೆ ಆ ಶಿಶುವಿನ ಗರ್ಭದಲ್ಲಿ ಸಮ ವಿಶ್ವವನ್ನೂ ನೋಡಿದಮೇಲೆ, ಆ ಶಿಶುವು ಉಸಿರನ್ನು ಹೊರಕ್ಕೆ ಬಿಟ್ಟಾಗ, ಆ ಗಾಳಿಯೊಡನೆ ಹೂರಕ್ಕಬಂದು,ತಿರುಗಿ ಮೊದಲಿನಂತೆ ಆ ಪ್ರಳಯಸಮು ದ್ರದಲ್ಲಿ ಬಿದ್ದನು.ಮೊದಲಿನಂತೆ ಆ ಜಲಮಧ್ಯದ ತಿಟ್ಟಿನಲ್ಲಿ ಬೆಳೆದಿದ್ದ ಆಲದ ಮರವನ್ನೂ, ಅದರ ಪತ್ರದಲ್ಲಿ ಮಲಗಿದ್ದ ಶಿಶುವನ್ನೂ,ಆ ಶಿಶುವು ಪ್ರೇಮ ಶಾಶ್ವತವಾದ ಮಂದಹಾಸದೊಡನೆ, ಪ್ರಸನ್ನ ದೃಷ್ಟಿಯಿಂದ ತನ್ನ ಕಡೆಗೆ