ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Su0 ಶ್ರೀಮದ್ಭಾಗವತರ [ಅಧ್ಯಾ. ಕೆ. ಭಟಿಸತಕ್ಕವರಿಗೆ, ಶೋಕ, ಮೋಹ, ಭಯಾದಿಗಳನ್ನು ನೀಗಿಸಿ, ಮನಶ್ಯಾಂತಿ ಯನ್ನುಂಟುಮಾಡತಕ್ಕುದು. ಆದುದರಿಂದ ಶ್ರೇಯಸ್ಸನ್ನು ಕೋ ರತಕ್ಕ ವಿವೇಕಿಗಳು, ಸತ್ಯಮಯವಾದ ಆ ನಿನ್ನ ವೈವಸ್ವರೂಪವನ್ನೇ ತಮಗೆ ಪ್ರಿಯವೆಂದು ಭಾವಿಸಿ, ಅದನ್ನೇ ಭಜಿಸುವರು. ಪಾಂಚರಾತ್ರಸಿ ದ್ಧಾಂತಗಳನ್ನು ಬಲ್ಲವರೂ ಆಶುದ್ಧಸತ್ವಮೂರ್ತಿಯೇ ಉಪಾಸ್ಯವೆಂದು ನಿರ್ಣಯಿಸಿರುವರು.ಆ ಮೂರ್ತಿಯೇ ಸಂಸಾರಭಯವನ್ನು ನೀಗಿಸತಕ್ಕದು. ದುಃಖಭಯಾದಿಗಳಿಂದ ವಿಶ್ರವಲ್ಲದ ನಿರನಿಶಯಾನಂದರೂಪವಾದ ಆತ್ಮ ಸುಖವೂ ಅದರಿಂದಲೇ ಉಂಟಾಗುವುದು. ಇತರ! ದೇವತೆಗಳನ್ನು ಭಜಿಸುವು ದರಿಂದುಂಟಾಗುವ ಸುಖವಾದರೋ, ಅಂತದಲ್ಲ, ಅವು ಭಯಶಕಗಳಿಂದ ಮಿಶ್ರವಾಗಿಯೇ ಇರುವುದು. ಆದುದರಿಂದ ಓ ದೆವಾ : ಚತುರ್ವಿಧಪುರು ಪಾರ್ಥಪ್ರದನಾಗಿಯೂ, ಸರಾಂತರನಾಗಿಯೂ, ವಿಶಾತಕನಾಗಿ ಯೂ, ವಿಶ್ವಗುರುವಾಗಿಯೂ, ಶರದೇವತೆಯಾಗಿಯೂ, ನರನಾರಾಯಣರೆಂ ಬ ಋಷಿರೂಪದಿಂದ ಅವತರಿಸಿದವನಾಗಿಯೂ, ಆಶ್ರಿತರ ದೋಷವನ್ನು ನೀಗಿಸತಕ್ಕವನಾಗಿಯೂ, ಸಮಸ್ತ ವಾಕ್ಕುಗಳಿಗೂ ನಿಯಾಮಕನಾಗಿಯೂ ವೇದಾಚಾರನಾಗಿಯೂ ಇರುವ ನಿನಗೆ ನಮಸ್ಕಾರವು. ಓ ದೇವಾ ! ನಿನ್ನ ಮಾಯೆಯಿಂದಲೇ ಮೋಹಿತರಾಗಿ, ಶಬ್ದಾದಿ ವಿಷಯಗಳಲ್ಲಿ ನಿರತರಿಂದ ದೇಹಾತ್ಮಾಭಿಮಾನಿಗಳು, ತಮ್ಮ ಪ್ರಾಣೇಂದ್ರಿಯಹೃದಯಗಳಲ್ಲಿಯೇ ನೀನು ನೆಲೆಗೊಂಡಿದ್ದರೂ ನಿನ್ನನ್ನು ತಿಳಿದುಕೊಳ್ಳಲಾರರು. ಲೋಕಗುರು ವಾದ ನೀನು, ಮೊಟ್ಟಮೊದಲು ಉಪದೇಶಿಸಿದ ವೇದಗಳಲ್ಲಿ ವಿಶ್ವಾಸವುಳ್ಳ ವರೇ, ಆ ವೇದಾಂತವಿಹಿತವಾದ ಉಪಾಸನಾಬಲದಿಂದ ಮನಸ್ಸನ್ನು ಶು ಹೈಪಡಿಸಿಕೊಂಡು,ಶುದ್ಧವಾದ ಆ ಮನಸ್ಸಿನಿಂದ ನಿನ್ನನ್ನು ಸಾಕ್ಷಾತ್ಕರಿಸಬ ಇರು. ನಿನ್ನನ್ನು ಸಾಕ್ಷಾತ್ಕರಿಸುವುದಕ್ಕೆ ಉಪಾಯಭೂತವಾದುದೂ ಆ ವೇ ದವೇ!ಪರಮಾತ್ಮನಾದ ನಿನ್ನ ರಹಸ್ಯವನ್ನು ಪ್ರಕಾಶಗೊಳಿಸತಕ್ಕುದೂ ಆ ವೇದವೇ! ಮತ್ತು ಹಿರಣ್ಯಗರ್ಭ ಕಪಿಲಾಡಿಗಳು, ಯೋಗಸಾ ತತ್ರಕ ಳಿಂದ ನಿನ್ನ ಸ್ವರೂಪವನ್ನು ವಿಮರ್ಶಿಸಿ ತಿಳಿಯುವುದಕ್ಕಾಗಿ, ಎಷ್ಟೋ ವಿಧ ದಿಂದ ಪ್ರಯತ್ನಿಸಿದರೂ,ಅದರ ನಿಷ್ಕರ್ಷವನ್ನು ತಿಳಿಯದೆ ಕಳವಳಿಸುವರು