ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨l೯೨ ಶ್ರೀಮದ್ಭಾಗವತವು ಅಧ್ಯಾ. ೩. ಭಾಗ್ಯಹೀನರೂ, ವಿಶೇಷವಾಗಿ ಅರ್ಥಕಾಮಾಸಕ್ಕರೂ ಆಗುವರು. ಇವರಲ್ಲಿ ಶೂದ್ರರೂ, ಕೈವರ್ತಕಾದಿದಾಶಜಾತಿಯವರೂ ಪ್ರಧಾನರೆನಿಸಿಕೊಳ್ಳುವರು. ಓ ರಾಜೇಂದ್ರಾ ಹೀಗೆ ಯುಗಭೇದದಿಂದ ಮನುಷ್ಯರ ಸ್ವಭಾವಗ ಳಲ್ಲಿ ವ್ಯತ್ಯಾಸವುಂಟಾಗುವುದಕ್ಕೆ ಕಾರಣವೇನೆಂದು ಕೇಳುವೆಯಾ ? ಮನುಷ್ಯನಲ್ಲಿ ಸತ್ವ, ರಜಸ್ಸು, ತಮಸ್ಸೆಂಬ ಈ ಮೂರುಗುಣಗಳು ಕಲೆ ತಿರುವುವು. ಈ ಗುಣಗಳೇ ಕಾಲಪ್ರೇರಿತಗಳಾಗಿ ಹೆಚ್ಚುತ್ತಲೂ, ತಗ್ಗು ತಲೂ ಆಯಾಮನುಷ್ಯನ ಮನಸ್ಸಿನಲ್ಲಿ ತಮ್ಮ ಕಾವ್ಯಗಳನ್ನು ತೋರಿ ಸುವುವು. ಮನಸ್ಸು, ಬುದ್ಧಿ, ಇಂದ್ರಿಯಗಳು, ಇವೆಲ್ಲವೂ ಸತ್ವಗುಣ ಪ್ರಚುರವಾಗಿದ್ದಾಗ, ಜನರಿಗೆ ಜ್ಞಾನ ಮಾರ್ಗದಲ್ಲಿಯೂ, ತಪಸ್ಸಿನಲ್ಲಿಯೂ ಅಭಿರುಚಿಯು ಹೆಚ್ಚುವುದು. ಇದೇ ಕೃತಯುಗಲಕ್ಷಣವು. ಮನುಷ್ಯರಿಗೆ ಹೆಚ್ಚಾಗಿ ಕಾಮ್ಯಕ್‌ಗಳಲ್ಲಿ ಅಭಿರುಚಿಯು ಹೆಚ್ಚಿದಾಗ ರಜೋ ಗುಣಪ್ರಧಾನವಾದ ಪ್ರೇತಾಯುಗವೆಂದೂ, ಮನುಷ್ಯರಲ್ಲಿ ಕಾವ್ಯ ಕರಾಭಿರುಚಿಯೊಡನೆ, ಕಾಮ, ಅಸಂತುಷ್ಟಿ, ದಂಭ, ಅಹಂಭಾವ, ಮಾತ್ಸಲ್ಯ, ಮುಂತಾದ ದುರ್ಗುಣಗಳೂ ಕಲೆತಿರುವವೋ, ಆಗ ರ ಸ್ವಮೋಗುಣಗಳೆರಡರಿಂದಲೂ ಕಲೆತ ವ್ಯಾಪರಯುಗವೆಂದೂ, ಮಾಯೆ, ಅಮೃತ ಸೋಮಾರಿತನ, ನಿದ್ರೆ, ಹಿಂಸೆ, ಮಸಿ ವ್ಯಾಧಿ, ಶೋಕ, ಮೋಹ, ಭಯ, ಕಾರ್ಪಣ್ಯ, ಮುಂತಾದುವು ಜನರಲ್ಲಿ ಹೆಚ್ಚಿದಾಗ, ಕೇವಲ ತಮಪ್ರಚುರವಾದ ಕ- ಯುಗವೆಂದೂ ತಿಳಿಯಬೇಕು. ಈ ಕಲಿಯುಗದಲ್ಲಿ ವಿವೇಕ ಜ್ಞಾನವೂ ಕಡಿಮೆ' ಭಾಗ್ಯವೂ ಕಡಿಮೆ : ಆದರೆ, ತಿನ್ನುವುದೂ, ಕಾಮವೂ ಹೆಚ್ಚು ! ಭೋಗಸಾಧನವಾದ ಧನವು ಕಡಿಮೆ ! . ಸ್ತ್ರೀಯರೆಲ್ಲರೂ ಪ್ರಾಯಕವಾಗಿ ವ್ಯಭಿಚಾರಿಣಿಯರು. ದೇಶದಲ್ಲಿ ಕಳ್ಳರು ಹೆಚ್ಚುವರು. ಪಾಷಂಡಿಗಳ ಪ್ರಾಬಲ್ಯದಿಂದ ವೇದಗಳೆಲ್ಲವೂ ಕ್ಷಯಿಸುವು ವು. ರಾಜರು ಪ್ರಜೆಗಳನ್ನು ಬಲಾತ್ಕಾರದಿಂದ ಹಿಂಸಿಸಿ, ಹಣವನ್ನು ಸುಲಿ ಯುವರು. ಬ್ರಾಹ್ಮಣರೂ ಕೂಡ, ತಮ್ಮ ಕರಗಳಲ್ಲಿ ಶ್ರದ್ಧೆಯಿಲ್ಲದೆ, ಶಿ ಶ್ಲೋದರಪರಾಯಣರಾಗುವರು. ಬ್ರಹ್ಮಹತ್ಯೆಯಲ್ಲಿರುವವರು, ತಮ್ಮ ವ್ರತಗಳನ್ನೆಲ್ಲಾ ಬಿಟ್ಟು, ಆಚಾರಹೀನರಾಗುವರು. ಕುಟುಂಬಿಗಳೇ ಸ