ಪುಟ:Khinnate banni nivarisoona.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರ್ಮದಲ್ಲಿ ಅತಿರೇಕ ಸಂವೇದನೆ (ಉರಿ, ಜೋಮು, ಸೂಜಿಯಿಂದ ಚುಚ್ಚಿದ ಅನುಭವ) ಲೈಂಗಿಕ ದುರ್ಬಲತೆ, ಹಸಿವು ಕಡಿಮೆ, ನಿದ್ರಾಹೀನತೆ ಇತ್ಯಾದಿ ಲಕ್ಷಣಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಇದನ್ನು (MASKED DEPRESSION) ಎನ್ನಲಾಗುತ್ತದೆ. ಎಲ್ಲ ದೈಹಿಕ ಪರೀಕ್ಷೆಗಳು ನಾರ್ಮಲ್ ಆಗಿರುತ್ತವೆ. ವೈದ್ಯರು ಈ ಹಿನ್ನೆಲೆಯಲ್ಲಿ ಖಿನ್ನತೆ ಇರಬಹುದೆಂದು ನಿರ್ಧರಿಸಿ ಖಿನ್ನತೆ ನಿವಾರಕ ಔಷಧಿ ಕೊಟ್ಟರೆ ರೋಗಿ ಉತ್ತಮಗೊಳ್ಳುತ್ತಾನೆ. ಇಲ್ಲದಿದ್ದರೆ ವ್ಯಕ್ತಿ ತನಗೆ ದೈಹಿಕ ಕಾಯಿಲೆ ಇದೆಯೆಂದು ನಂಬಿ, ಹಲವಾರು ವೈದ್ಯರಲ್ಲಿಗೆ ಹೋಗಿ ಟೆಸ್ಟ್‌ಗಳನ್ನು ಮತ್ತೆ ಮತ್ತೆ ಮಾಡಿಸಿ ದಣಿಯುತ್ತಾನೆ.

■ ■
ಉಚಿತ ಆಪ್ತಸಮಾಲೋಚನೆ ಮತ್ತು ಮಾರ್ಗದರ್ಶನಕ್ಕಾಗಿ ಮಾನಸಿಕ ಕಾಯಿಲೆಗಳ ಚಿಕಿತ್ಸೆಗಾಗಿ ಸಂಪರ್ಕಿಸಿ:

ಸಮಾಧಾನ ಕೇಂದ್ರ
324, 6ನೇ ಕ್ರಾಸ್
ಅರಕೆರೆ ಮೈಕೋ ಲೇ ಔಟ್, ಮೊದಲ ಹಂತ
ಬನ್ನೇರುಘಟ್ಟ ರಸ್ತೆ, ಬೆಂಗಳೂರು - 76
ಫೋನ್: 080-26482929


ಖಿನ್ನತೆ: ಬನ್ನಿ ನಿವಾರಿಸೋಣ / 27