ಪುಟ:Khinnate banni nivarisoona.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತರ್ಕಿಸಿ ಚಿಂತಿತರಾಗುತ್ತಾರೆ. ಜೋತಿಷಿ, ಮಂತ್ರವಾದಿ, ದೇವಸ್ಥಾನ, ಮಸೀದಿ, ದರ್ಗಾ, ಚರ್ಚುಗಳಿಗೆ ಹೋಗುತ್ತಾರೆ. ಪೂಜೆ, ಹರಕೆ, ಕಾಣಿಕೆ, ಹೋಮ, ಹವನ, ತಾಯಿತ, ಚೀಟಿ ಕಟ್ಟಿಸುತ್ತಾರೆ. ತಮ್ಮ ಹಣ-ಶ್ರಮ, ಸಮಯವನ್ನು ವ್ಯರ್ಥ ಮಾಡುತ್ತಾರೆ. ಇದು ತಪ್ಪಬೇಕು. ಖಿನ್ನತೆ ರೋಗ ಒಂದು ಮೆದುಳಿನ- ಮನಸಿನ ಕಾಯಿಲೆ. ಮೆದುಳಿನಲ್ಲಿ ಡೋಪಮಿನ್-ಸೆರೊಟೊನಿನ್ ನರವಾಹಕ ತಗ್ಗುವುದು, ದೇಹದಲ್ಲಿ ಥೈರಾಕ್ಸಿನ್ ರಸದೂತ ಕಡಿಮೆಯಾಗುವುದು, ಕಷ್ಟ- ನಷ್ಟ-ಸೋಲು, ಅಪಮಾನ-ನಿರಾಶೆಗಳನ್ನು ಎದುರಿಸಲು ವ್ಯಕ್ತಿ ವಿಫಲನಾಗುವುದೇ ಖಿನ್ನತೆಗೆ ಕಾರಣ. ಖಿನ್ನತೆ ವಾಸಿಯಾಗುವ ರೋಗ ಎಂದು ತಿಳಿಯುವ ಅಗತ್ಯವಿದೆ. ಇದನ್ನು ಎಲ್ಲರೂ ಗಮನಿಸಬೇಕು.

ಖಿನ್ನತೆ ರೋಗವಿದೆಯೆಂದು ಗುರುತಿಸಲು ಮತ್ತು ಅದರ ತೀವ್ರತೆಯನ್ನು ಅಳೆಯಲು ಈ 15 ಪ್ರಶ್ನೆಗಳಿಗೆ ಹೌದು ಅಥವಾ ಇಲ್ಲ ಎಂದು ಉತ್ತರಿಸಿ, ಪ್ರತಿ ಹೌದು ಉತ್ತರ ನಿಮಗೆ ಖಿನ್ನತೆಯಿದೆ ಎಂಬುದನ್ನು ತಿಳಿಸಿದರೆ ಹೌದುಗಳು ಹೆಚ್ಚಿದಷ್ಟು ಖಿನ್ನತೆ ಹೆಚ್ಚು ತೀವ್ರವಾಗಿದೆಯೆಂದು ನಮಗೆ ಗೊತ್ತಾಗುತ್ತದೆ.

ಕ್ರ.ಸಂ ಪ್ರಶ್ನೆ ಹೌದು ಇಲ್ಲ
1. ದಿನದ ಹೆಚ್ಚಿನ ಸಮಯದಲ್ಲಿ ನಿಮಗೆ ದುಃಖವಾಗುತ್ತದೆ.ಕಣ್ಣೆಲ್ಲಾ ನೀರು ತುಂಬಿ ಅಳು ವಂತಾಗುತ್ತದೆಯೆ?
2. ಹಸಿವು ಕಡಿಮೆಯಾಗಿ ಊಟ ರುಚಿಸುತ್ತಿಲ್ಲವೆ?
3. ನಿದ್ರೆ ಬರಲು ಕಷ್ಟ, ಮಧ್ಯೆ ಮಧ್ಯೆ ಎಚ್ಚರವಾಗುವುದು, ಸರಿಯಾಗಿ ನಿದ್ರೆ ಮಾಡಲಾಗುತಿಲ್ಲವೆ?
4. ಮೈಕೈ ನೋವು ಸುಸ್ತು-ಆಯಾಸ-ತಲೆನೋವು-ಎದೆ ನೋವಿದೆ. ವೈದ್ಯಕೀಯ ಪರೀಕ್ಷೆಗಳಲ್ಲಿ ಎಲ್ಲವೂ ನಾರ್ಮಲ್ ಎಂದಿದೆಯಾ?

ಖಿನ್ನತೆ: ಬನ್ನಿ ನಿವಾರಿಸೋಣ / 11