ಪುಟ:Abhaya.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜತೆಯಲ್ಲಿದ್ದೆ. ಮೇಟ್ರನ್ ಒಳಗಿನಿಂದ ಬಾಗಿಲಿಗೆ ಹಾಕಿದ್ದ ಬೀಗ ತೆಗೆದು ನಮ್ಮನ್ನು ಬರಮಾಡಿಕೊಂಡರು ಒಳ ಜಗಲಿಯಲ್ಲಿ ನಿಂತಾಗ ಅಲ್ಲಿದ್ದ ದೊಡ್ಡ ಕಿಟಕಿ ನೋಡಿದೆ. ಹತ್ತಿಪ್ಪತ್ತು ಮುಖಗಳು-ಅದರ ಎರಡರಷ್ಟು ಕಣ್ಣುಗಳು. ಅಷ್ಟೊಂದು ಹುಡುಗಿಯರು ನಮ್ಮನ್ನು ಕಿಟಕಿಯ ಮೂಲಕ ನೋಡುತ್ತಿದ್ದರು. ಆ ಒಂದೊಂದು ಮುಖವೂ ಒಂದೊಂದು ಕತೆ ಹೇಳುತಿತ್ತು...ಹಾದಿ ತಪ್ಪಿದ ಹೆಣ್ಣು ಜೀವಗಳು.. ಆ ಆಶ್ರಮದಲ್ಲಿ ಅವರಿಗೆ ದೊರೆತಿದ್ದ ಅಭಯ...ಅಲ್ಲಿಂದ ಹಿಂತಿರುಗುತ್ತ ಸ್ನೇಹಿತರಿಗೆ ಹೇಳಿದೆ: 'ಈ ಹುಡುಗಿಯರ ವಿಷಯವಾಗಿ ನಾನು ಒಂದು ಕಾದಂಬರಿ ಬರೀಬೇಕು."

"ಹಾಗೇನು?"

"ಆದರೆ ಎಷ್ಟೋ ಹಿಂದಿನಿಂದಲೇ ಯೋಚಿಸಿರುವ ಇನ್ನೆಷ್ಟೋ ವಸ್ತು

ಗಳ ಹಾಗೆ ಅದುಕೂಡ ನೆನಪಿನ ಕೊಠಡಿಯಲ್ಲಿ ಮುದುರಿಕೊಂಡು ಬಿತ್ತು.'ಬನಶಂಕರಿ' ಕಾದಂಬರಿಯನ್ನು ಬರೆಯುತ್ತಿದ್ದಾಗ, ತಿವಟೂರಿನ ನನ್ನ ಸಾಹಿತ್ಯ ಮಿತ್ರರೂ ಪ್ರಕಾಶಕರೂ ಆದ ತಾ ರಾ ನಾಗರಾಜರು ಬಂದರು.'ಸುಲಭ ಬೆಲೆಯ ಕೈ ಹೊತ್ತಿಗೆಗಳನ್ನು ನಾನೂ ಹೊರಡಿಸಬೇಕೂಂತಿದ್ದೇನೆ. ನಿಮ್ಮದೊಂದು ಪುಸ್ತಕ ಕೊಡಿ' ಅಂದರು 'ಬರೆಯಬೇಕಷ್ಟೆ' ಎಂದೆ.'ಬರೆದಾಯಿತು.title ಹೇಳಿ' ಅಂದರು 'ಅಭಯ' ಎಂದೆ- ನೆನಪಿನ ಬುತ್ತಿಯಿಂದ ಹೊರಗೆ ಇಣಿಕಿ ನೋಡುತ್ತಿದ್ದ ಅಭಯಾಶ್ರಮದ ವಸ್ತುವನ್ನು ಸ್ಮರಿಸುತ್ತ. ಪ್ರಾಯಶಃ ನಾಗರಾಜರು ಆಗ ಬರದೇಹೋಗಿದ್ದರೆ ಈ ಕಾದಂಬರಿ ಇಷ್ಟು ಬೇಗನೆ ಪ್ರಕಟವಾಗುತ್ತಿತ್ತೋ ಇಲ್ಲವೋ!"

"ಹಾಗಾದರೆ ೧೯೫೦ರಲ್ಲಿ ನೋಡಿದ ಅಭಯಾಶ್ರಮವನ್ನು ಅವಲಂಭಿಸಿ

ಇದನ್ನು ಬರೆದಿದ್ದೀರಾ?"

"ಇಲ್ಲ. ಛಾಯಾಗ್ರಹಣದಲ್ಲಿ ನನಗೆ ನಂಬಿಕೆಯಿಲ್ಲ ಬೇರೆ ಎರಡು

ಊರಿನ ಅಭಯಾಶ್ರಮ-ಅಬಲಾಶ್ರಮಗಳನ್ನೂ ನೋಡಿದ್ದೇನೆ. 'ಆಶ್ರಮ ನಿವಾಸಿ'ಗಳ ಜೀವನವನ್ನು ಅಭ್ಯಾಸ ಮಾಡಿದ್ದೇನೆ ಆ ನಿರೀಕ್ಷಣೆಯ ಫಲವೇ 'ಅಭಯ'ದ ವಾತ್ರಗಳ ಸೃಷ್ಟಿ."

"ಇಲ್ಲಿರುವುದೆಲ್ಲ ತೀರ ವಾಸ್ತವವೂ ಅಲ್ಲ, ತೀರ ಕಾಲ್ಪನಿಕವೂ ಇಲ್ಲ,

ಎಂದ ಹಾಗಾಯಿತು."