ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, .] ಅಯೋಧ್ಯಾಕಾಂಡ. ೩೮ ಹೊರದನು, ಕೈಕೇಯಿಯು ಕಾಲೋಚಿತವಾದ ತಂತ್ರವನ್ನು ಚೆನ್ನಾಗಿ ಬಲ್ಲವಳಾದುದರಿಂದ, ರಾಜನು ದುಃಖದಿಂದ ಪ್ರತ್ಯುತ್ತರಕೊಡಲಾರದೆ ಸುಮ್ಮನಿರುವುದನ್ನೂ, ಸುಮಂತ್ರನು ಹಿಂತಿರುಗಿ ಹೊರಡುತ್ತಿರುವುದನ್ನೂ ನೋಡಿ, ತಾನಾಗಿಯೇ ಆ ಸಾರಥಿಯನ್ನು ಕರೆದು ಎಲೈ ಸುಮಂ ತ್ರನೆ! ರಾಜನಿಗೆ ನಿನ್ನೆ ರಾತ್ರಿಯೆಲ್ಲವೂ ಸಿದ್ರೆ ! ರಾಮನಿಗೆ ಪಟ್ಟಿ ಮತ್ತು ಕಟ್ಟುವೆನೆಂಬ ಉತ್ಸಾಹದಿಂದ ಆತನಿಗೆ ನಿದ್ರೆಯೇ ಹತ್ತಲಿಲ್ಲ! ಈಗಲೇ ಸ್ವಲ್ಪ ಮಟ್ಟಿಗೆ ನಿದ್ರೆ ಹತ್ತಿರುವಂತಿದೆ! ಆತನು ರಾತ್ರಿ ಜಾಗರಣೆಯಿಂದ ಬಹಳವಾಗಿ ಬಳಲಿ ಈಗತಾನೇ ಮೈಮರೆತು ನಿದ್ರೆ ಹೋಗುತ್ತಿರುವನು. ಸೀನು ಈಗ ರಾಜ ನನ್ನ ಎಬ್ಬಿಸುವುದುಚಿತವಲ್ಲ ! ಬೇಗಹೋಗಿ ರಾಮನನ್ನೇ ಇಲ್ಲಿಗೆ ಕರೆದು ಕೊಂಡುಬಾ ! ಬೇರೆವಿಧವಾಗಿ ಚಿಂತಿಸಬೇಡ ? ಹೋಗು ! ನಿನಗೆ ಮಂಗಳವಾ ಗಲಿ!” ಎಂದು ಪ್ರತ್ಯುತ್ತರವನ್ನು ಕೊಟ್ಟಳು. ಕಪಟವನ್ನರಿಯದ ಆ ಸುಮಂ ತನು, ಕೈಕೇಯಿಯ ಮಾತನ್ನೇ ನಿಜವೆಂದು ನಂಬಿ, ಅದನ್ನೇ ರಾಜಶಾಸನವ ನಾಗಿ ಭಾವಿಸಿ, ಉಕ್ಕಿ ಬರುವ ಸಂತೋಷದಿಂದುಬ್ಬಿದವನಾಗಿ, ಒಡನೆ ಯೇ ಆಸ್ಲಿಂದ ಹೊರಟನು. ದಾರಿಯಲ್ಲಿ ಬರುತ್ತಿರುವಾಗ ತನ್ನಲ್ಲಿ ತಾನು 'ಆಹಾ' ಧ್ಯಜ್ಞನಾದ ನಮ್ಮ ರಾಜಸಿಗೆ, ರಾಮನ ಆಭಿಷೇಕವನ್ನು ನಡೆಸು ವುದರಲ್ಲಿ ಎಷ್ಟು ಉತ್ಸಾಹವು' ಆತನು ಬಹಳವಾಗಿಬರಲಿರುವುದೇನೋ ನಿಜವೇ ಎಂದು ದೃಢಪಡಿಸಿಕೊಂಡು, ಸಂತೋಷಪರವಶನಾಗಿ, ರಾಮನನ್ನು ನೋಡಬೇಕೆಂಬ ಆತುರದಿಂದ ಬೇಗನೆ ಹೊರಟು ಬರುತ್ತಿದ್ದನು. ಸಮುದ್ರ ದೊಳಗಿನ ಮಡುವಿನಂತೆ, ಪಟ್ಟಣದ ಮಧ್ಯದಲ್ಲಿ ಪ್ರಕಾಶಿಸುತ್ತಿರುವ ಆ ಅಂ ತಪುರಮುಂದೆ ನೆರೆದ ಜನಗಳ ಗುಂಪನ್ನು ಬಹುಪ್ರಯಾಸದಿಂದ ಬಾ ಟಿಕೊಂಡು ಬಂದನು. ಇವನು ದ್ವಾರಪ್ರದೇಶವನ್ನು ನೋಡುವ ರೊಳಗಾಗಿ, ಅಲ್ಲಿ ಅನೇಕರಾಜಾಧಿರಾಜರೂ, ಅನೇಕಪುರವಾಸಿಗಳೂ, ಧನಿಕ ರಾದ ವರ್ತಕರೂ, ರಾಜ್ಯಾಧಿಕಾರಿಗಳೂ ಕಾಣಿಕೆಗಳೊಡನೆ ಕಿಕ್ಕಿರಿಸಿ ತುಂ ಬಿದ್ದರು. ಇಲ್ಲಿಗೆ ಹದಿನಾಲ್ಕನೆಯ ಸರ್ಗವು. 25