ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

a ಶ್ರೀಮದ್ರಾಮಾಯಣವು [ಸರ್ಗ, ಆ. ಹದಿಂದ ಬೀದಿಯೆಲ್ಲವೂ ಸುವಾಸಿತವಾಗಿತ್ತು.ಈ ಉತ್ಸವಕಾಲದಲ್ಲಿ ದೇಶದೇ ಶದ ವರಕರು ಬಂದು, ಅತ್ಯುತ್ತಮವಾದ ಸುಗಂಧಗಳನ್ನೂ, ಪಟ್ಟೆ ಮಡಿ ಮೊದಲಾದ ವಿಚಿತ್ರವಸ್ತ್ರಗಳನ್ನೂ,ವೆಹಾಕದ ಹೊಸಮುತ್ತುಗಳನ್ನೂ, ಬೇರೆಬೇರೆ ಜಾತೀಯಗಳಾದ ಸ್ಪಟಿಕದ ಕಲ್ಲುಗಳನ್ನೂ, ಇನ್ನೂ ಅಮ್ಮ ಲ್ಯಗಳಾದ ಅನೇಕವಸ್ತುಸಮೂಹಗಳನ್ನೂ ಮುಂದೆ ರಾಶಿಹಾಕಿಕೊಂಡಿ ಜ್ಞರು. ಅಲ್ಲಲ್ಲಿ ಭೋಜನಪವಾರಗಳೂ, ಉತ್ತಮಭಕ್ಷಗಳೂ ಸಿದ್ಧ ವಾಗಿ ಸೇರಿಸಿಡಲ್ಪಟ್ಟಿದ್ದುವು. ದೇವಲೋಕದ ರಾಜಬೀದಿಯಂತೆ ಸಕಲಸಂ ಪತ್ಸಮೃದ್ಧವಾದ ಅಬೀಟಗಳ ಅಂದವನ್ನು ನೋಡಿ ನೋಡಿ ಅನಂಹಿಸುತ್ತ ರಾಮನು, ಅದರ ನಡುವೆ ತು ರಥವನ್ನು ನಡೆಸಿಕೊಂಡು ಹೋದನು. ಅಲ್ಲಲ್ಲಿ ಮಂಗಳಾರವಾಗಿಟ್ಟೆದ್ಯ, ಮೊಸರು, ತುಪ್ಪ, ಅರಳು, ಅಕ್ಷತೆ, ಮುಂತಾದುವು ಗಳು ಕಾಣುತಿದ್ದುವು. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಬಾಗಿಲಲ್ಲಿ ಗಂಧದ ನೀರನ್ನು ಚೆಲ್ಲಿ,ಧೂಪಗಳನ್ನು ಹಾಕಿದ್ದರು. ಮನೆಯಮುಂದೆ ಹೂವಿನ ಕುಚ್ಚುಗಳನ್ನು ಬಿಟ್ಟಿದ್ದರು. ಇವೆಲ್ಲವನ್ನೂ ನೋಡುತ್ತ ಬೀದಿಯಲ್ಲಿ ಬರು ವಾಗ, ಆರಾಮನ ಪಿತ್ರರೆಲ್ಲರೂ ಮುಂದೆಬಂದು ಆತನಿಗೆ ಮಂಗಳಾಶಾಸ ಪನ್ನು ಮಾಡಿ ಹೋಗುತ್ತಿದ್ದರು. ಅವರ ಪ್ರಿಯವಾಕ್ಯಗಳೆಲ್ಲವನ್ನೂ ರಾಮನು ಪ್ರೀತಿಯಿಂದ ಸ್ವೀಕರಿಸಿ, ಅವರನ್ನು ಮನ್ನಿಸಿ, ಮುಂದೆ ಹೋಗುತ್ತಿದ್ದನು. ಆಗ ಕೆಲವರು ಮುಂದೆ ಬಂದು ರಾಮನನ್ನು ನೋಡಿ, ಎಲೈ ಶ್ರೀಮಂತ ನೆ! ನಿನ್ನ ತಾತಂದಿರೂ, ಮುತ್ತಾತಂದಿರೂ, ಈ ರಾಜ್ಯವನ್ನು ಹೇಗೆ ಪಾಲಿ ಸುತಿದ್ದರೋ, ಅದೇ ಮಾರ್ಗವನ್ನನುಸರಿಸಿ ನೀನೂ ರಾಜ್ಯವನ್ನು ರಕ್ಷಿ ಸು!” ಎಂದು ಆಶೀUಚನಗಳನ್ನು ಹೇಳಿ, ಆಮೇಲೆ ತಮ್ಮೊಳಗೆ ಒಬ್ಬರಿ ಗೊಬ್ಬರು ( ರಾಮನು ರಾಜ್ಯವನ್ನು ವಹಿಸಿದರೆ, ಇವನ ತಂದೆಯಾಗಿ ತಾತನಾಗಿ,ಮುತ್ತಾತನಾಗಲಿ ಹಿಂದೆ ನಮ್ಮನ್ನು ಆಳುತ್ತಿದ್ದುದಕ್ಕಿಂತಲೂ ಹೆಚ್ಚು ಸೌಖ್ಯದಿಂದ ಆಳುವುದರಲ್ಲಿ ಸಂದೇಹವಿಲ್ಲ ! ಈರಾಮನು ತನ್ನ ತಂದೆ ಯಬಳಿಗೆ ಹೋಗಿ, ರಾಜ್ಯಾಭಿಷಿಕ್ತನಾಗಿ ಹಿಂತಿರುಗಿ ಬರುವವರೆಗೂ ನಮ್ಮ * *ಊಟವೂ ಬೇಡ! ಉಪಚಾರವೂ ಬೇಡ! ನಿತ್ಯಾತ್ಮಿಕಗಳೂ ಬೇಡ! ಇದು

  • ಇಲ್ಲಿ 'ಅಲಮದ್ಯಹಿ ಭುಕ್ಕೇನ ಪರಮಾರರಲಂಹಿ ನ:” ಎಂದು ಮೂಲವು. ಇಲ್ಲಿ ವಿಶೇಷಾರವೇನೆಂದರೆ (ಅದ್ಯಭಕ್ತನ ಅಲಂ) ಈಗ ನಾವು ಅನುಭವಿಸಿದ ಐಹಿ

"

+