ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಣ, ೧೯.] ಅಯೋಧ್ಯಾಕಾಂಡದ Mod ಕಶೆಯಿಂದ ಹೊಡೆಯಲ್ಪಟ್ಟ ಕುದುರೆಯಂತೆ ಬೆದರಿ, ಆ ಕ್ಷಣವೇ ಕಾಡಿಗೆ ಹೊ ರಡುವುಕ್ಕೆ ಯತ್ನಿಸಿದನು. ಆದರೆ ಕೈಕೇಯಿಯು ಹೇಳಿದ ವಾಕ್ಯವು ಅಷ್ಟಕ ಠೋರವಾಗಿದ್ದರೂ, ಮನಸ್ಸಿನಲ್ಲಿ ಸ್ವಲ್ಪವೂ ವ್ಯಥೆ ಯನ್ನು ಹೊಂದದೆ, ಅವ ಳನ್ನು ಕುರಿತು, ಎಲೆ ಜವನಿ ! ನನಗೆ *ನಿಜವಾಗಿಯೂ ರಾಜ್ಯದಲ್ಲಿ ಆಸೆಯಿಲ್ಲ! ಕೊನೆಗೆ ಈ ಲೋಕದಲ್ಲಿರಬೇಕೆಂಬ ಆಸೆಯೂ ನನಗಿಲ್ಲ ! ನನ್ನ ನ್ನು ಋಷಿಗ ಳಿಗೆ ಸಮಾನನೆಂದು ತಿಳಿ ! ನನಗೆ ಧಮ್ಮವೊಂದೇ ಉದ್ದೇಶ್ಯವೇಹೊರತು ಬೇರೊಂದರಲ್ಲಿಯೂ ದೃಷ್ಟಿಯಿಲ್ಲ! ಪೂಜ್ಯನಾದ ಈ ನನ್ನ ತಂದೆಗೆ ನನ್ನಿಂದ ನಡೆಯಬೇಕಾದ ಪ್ರಿಯಕಾವು ಯಾವುದಿದ್ದರೂ, ಅದನ್ನು ನಡೆಸುವುದಕ್ಕೆ ಸಿದ್ಧನಾಗಿರುವೆನು. ನನ್ನ ಪ್ರಾಣಹಾನಿಗೆ ಕಾರಣವಾಗಿದ್ದರೂ ಅದನ್ನು ನಡ ಸವುದರಲ್ಲಿ ಸಂದೇಹವಿಲ್ಲ. ತಂದೆಯನ್ನು ಉಪಚರಿಸುವುದು, ತಂದೆಯ ಆಜ್ಞೆಯನ್ನು ನಡೆಸುವುದು, ಇವೆರಡಕ್ಕಿಂತಲೂ ಉತ್ತಮವಾದ ಧರವು ಬೇರೊಂದಿಲ್ಲವೆಂದೇ ನನ್ನ ಅಭಿಪ್ರಾಯವು ತಂದೆಯು ತನ್ನ ಬಾಯಿಂದ ನನಗೆ ಹೇಳದಿದ್ದರೂ ಚಿಂತೆಯಿಲ್ಲ. ನಿನ್ನ ಮಾತಿನಂತೆ ನಾನು ಹದಿನಾಲ್ಕು ವರ್ಷಗಳವರೆಗೆ ನಿರ್ಜನವಾದ ವನದಲ್ಲಿಯೇ ವಾಸ ಮಾಡುತ್ತಿರುವೆನು. ಎಲೆ ಜನಸಿ ! ನನ್ನ ಸ್ವಭಾವವನ್ನು ನೀನು ಕಂಡಿಲ್ಲವೆ ? ಈ ನಿನ್ನ ಉದ್ದೇಶವನ್ನು ನೀನು ಮೊದಲು ನನ್ನೊಡನೆಯೇ ಹೇಳಬಹುದಾಗಿತ್ತಲ್ಲವೆ ! ನಿನ್ನ ಪುತ್ರ ನಾದ ನನಗೆ ಆಜ್ಞೆ ಮಾಡುವುದಕ್ಕೆ ನಿನಗೆ ಅಧಿಕಾರವಿಲ್ಲವೆ ? ನಿನ್ನ ಮಾತನ್ನು ನಾನು ಎಂದಾದರೂ ತಿರಸ್ಕರಿಸಿದ್ದೆನೆ ? ಇದೆಲ್ಲವನ್ನೂ ನೀನು ಸ್ಪಷ್ಟವಾಗಿ ತಿಳಿದಿದ್ದರೂ, ಭತಪಿಗೆ ಪಟ್ಟಾಭಿಷೇಕವನ್ನು ಮಾಡಬೇಕೆಂದೂ, ನನ್ನನ್ನು ಕಾಡಿಗೆ ಕಳುಹಿಸಬೇಕೆಂದೂ, ರಾಜನನ್ನು ನಿರ್ಬಂಧಿಸಿ ಕೇಳಬೇಕಾದ ಅವಶ್ಯ ಕವೇನಿತ್ತು ? ಇದಲ್ಲದೆ ಈ ಸ್ವಲ್ಪಕಾರಕ್ಕಾಗಿ ನೀನು ಬಹುಕಾಲದಿಂದ - -- * ಭರತನು ಬಂದುಬಿಟ್ಟರೆ, ಆತನೇ ರಾಜ್ಯವನ್ನು ತನಗೆ ಕೊಟ್ಟು ಬಿಡುವನೆಂದು ತಾನು ಅಶೋತ್ತರವನ್ನಿಟ್ಟುಕೊಂಡಿರುವುದಕ್ಕಾಗಿ ಕೈಕೇಯಿಯು ಶಂಕಿಸಬಹುದೆಂದ ಹಿಸಿ, ಈಗ ರಾಮನು ಈ ಮಾತನ್ನು ಹೇಳಿರುವನು. ಇದರಿಂದ, ಆತನಿಗೆ ಹಣದಲ್ಲಿ ಯಾಗಲಿ, ರಾಜ್ಯದಲ್ಲಿಯಾಗಲಿ, ಅಸೆಯೇ ಇಲ್ಲವೆಂದು ತಿಳಿದುಬಂದುದರಿಂದ, ಈಕೆ ಆಕೆಗೆ ಸಂಪೂರ್ಣವಾಗಿ ಆ ಶಂಕೆಯು ನಿವಾರಿತವಾಯಿತೆಂದು ತಿಳಿಯಬೇಕು. -