ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಗಣ, ೧೯.] ಅಯೋಧ್ಯಾಕಾಂಡ, ನ್ನು ಬಿಟ್ಟು ಹೊರಟನು, ತಾನು ಹಿಂತಿರುಗಿ ಬರುವುದನ್ನೇ ನಿರೀಕ್ಷಿಸುತ್ತ,ಬಾಗಿ, ಲಲ್ಲಿ ನಿಂತಿದ್ದ ತನ್ನ ಮಿತ್ರ ಮಂಡಲಿಯನ್ನು ನೋಡಿದನು. ಸುಮಿತ್ರಾದೇವಿಗೆ ಪ್ರಿಯಪುತ್ರನಾದ ಲಕ್ಷಣನಾದರೋ, ಅಲ್ಲಿ ನಡೆದ ವ್ಯಸನಕರವಾದ ವಿಷ ಯಗಳೆಲ್ಲವನ್ನೂ ತಾನೂ ಪ್ರತ್ಯಕ್ಷದಲ್ಲಿ ನಿಂತುನೋಡಿದ್ದುದರಿಂದ, ದುಃಖವ ನ್ನು ತಡೆಯಲಾರದೆ, ಧಾರೆಧಾರೆಯಾಗಿ ಕಣ್ಣಿನಲ್ಲಿ ನೀರನ್ನು ಸುರಿಸುತ್ತಾರಾ ಮನನ್ನು ಹಿಂಬಾಲಿಸಿಬರುತಿದ್ದನು. ಆದರೆ ಲಕ್ಷ ಣನ ಮುಖದಲ್ಲಿ ವ್ಯಸನ ದೊಡನೆ *ಕೋಪವೂ ಕಾಣಿಸುತಿತ್ತು. ಹೀಗೆ ಅವರಿಬ್ಬರೂ ಅಲ್ಲಿಂದ ಹೊರ ಟು ಬರುವಾಗ, ಅಲ್ಲಿ ಅಭಿಷೇಕಕ್ಕಾಗಿ ಸಿದ್ಧಪಡಿಸಲ್ಪಟ್ಟಿದ್ದ ಉಪಕರಣಸಾಮ ಗ್ರಿಗಳನ್ನು ಕಂಡರು. ರಾಮನು ಅವುಗಳನ್ನು ಪ್ರದಕ್ಷಿಣೆಮಾಡಿ, ಅವುಗಳಲ್ಲಿ ಸ್ವಲ್ಪವಾದರೂ ಅಪೇಕ್ಷೆಯನ್ನು ತೋರಿಸದೆ, ಅವುಗಳನ್ನು ಕಣ್ಣೆತ್ತಿಯೂ ನೋಡದೆ, ಭರತನ ಶ್ರೇಯೋಭಿವೃದ್ಧಿಯನ್ನೇ ಮನಸ್ಸಿನಲ್ಲಿ ಚಿಂತಿಸುತ್ತಾ ಮೆಲ್ಲಗೆ ಬರುತ್ತಿದ್ದನು. ಲೋಕೈಕನಾಥನಾದ ಆ ರಾಮನು ತೈಲೋಕ್ಯದ ರಾಜ್ಯಲಕ್ಷ್ಮಿಯನ್ನೇ ತನಗಧೀನವಾಗಿ ಮಾಡಿಕೊಂಡಿರುವಾಗ, ಅದರಲ್ಲಿ ಏಕ ದೇಶವಾದ ಕೋಸಲರಾಜ್ಯವು ತನಗೆ ತಪ್ಪಿಹೋದದಕ್ಕಾಗಿ ವ್ಯಸನಪಡು ವನೆ? ಲೋಕವೆಲ್ಲವನೂ ಆನಂದಪಡಿಸತಕ್ಕೆ ಸ್ವಾಭಾವಿಕವಾದ ಆತನ ಮು ಖಕಾಂತಿಯು, ರಾಜ್ಯಭ್ರಂಶವೆಂಬ ಈ ಸ್ವಲ್ಪ ಕಾರಣಕ್ಕಾಗಿ ಹೇಗೆ ಕುಂದು ವುದು?ಲೋಕವೆಲ್ಲವನ್ನೂ ಆಹ್ಲಾದಪಡಿಸತಕ್ಕ ಚಂದ್ರನ ಕಾಂತಿಯು, ಆಂಧ ಕಾರದಿಂದ ಕೂಡಿದ ರಾತ್ರಿಯಲ್ಲಿ ಮತ್ತಷ್ಟು ಹೆಚ್ಚಿಬರುವಂತೆ, ರಾಮನ ಮು ಖದಲ್ಲಿ ಉಲ್ಲಾಸವೇ ಉಕ್ಕುತಿತ್ತು. ರಾಜ್ಯವನ್ನು ಬಿಟ್ಟು ಕಾಡಿಗೆ ಹೊರಡು ವಾಗಲೂ, ಆತನ ಮುಖವು ಕಳೆಗುಂದಲಿಲ್ಲ. ಮಾ ನಾವಮಾನಗಳನ್ನು ಲಕ್ಷ ಮಾಡದೆ, ಲೋಕವ್ಯಾಪಾರವನ್ನೇ ಬಿಟ್ಟಿರುವ ಮಹಾಯೋಗಿಯಂತೆ ಜಿತೇಂ

  • ಇದರಿಂದ ರಾಮಲಕ್ಷಕರಿಗಿರುವ ಗಣತಾರತಮ್ಯವು ಸ್ವಲ್ಪಮಟ್ಟಿಗೆ ಸೂಚಿತ ವಾಗುವುದು, - + ಮಂಗಳವಸ್ತುಗಳನ್ನೂ, ದೇವಾಲಯಗಳನ್ನೂ, ಚತುಷ್ಪಥಗಳನೂ ಕಂಡಾ ಗ, ಅವುಗಳನ್ನು ಬಲಕ್ಕೆ ಬಿಟ್ಟುಕೊಂಡು, ಪ್ರದಕ್ಷಿಣವಾಗಿ ಹೋಗಬೇಕೆಂಬುದು ಶಾ ಇವಿಧಿಯು,

--