ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೦.] . ಅಯೋಧ್ಯಾಕಾಂಡವು. ೪೨೧ ಳ್ಳುವುದಕ್ಕಾಗಿ, ನೆಲದಮೇಲೆ ಮೈಯನ್ನು ಹೊರಳಿಸಿ,ಮೇಲೆದ್ದು ನಿಂ ತಿರುವ ಹೆಣ್ಣು ಕುದುರೆಯಂತೆ, ಆ ಕೌಸಲ್ಯಯ ಮೈಯೆಲ್ಲವೂ ಧೂಳಿ ನಿಂದ ತುಂಬಿಹೋಗಿರಲು, ರಾಮನು ಅದೆಲ್ಲವನ್ನೂ ತನ್ನ ಕೈಯಿಂದ ಒರೆಸಿ ಸಮೀಪದಲ್ಲಿಯೇ ಕುಳಿತಿದ್ದನು. ಯಾವಾಗಲೂ ರಾಜಭೋಗದಲ್ಲಿ ಯೇ ಬಳೆದು, ದುಃಖವೆಂಬುದನ್ನೇ ಕಂಡರಿಯದ ಆ ಕೌಸಲ್ಯಯು, ಮೆಲ್ಲಗೆ ಚೇತರಿಸಿಕೊಂಡು, ಮುಂದೆ ಕುಳಿತಿರುವ ರಾಮನನ್ನು ಕುರಿತು, ಲಕ್ಷಣನೂ ಕೇಳುವಂತೆ ಒಂದಾನೊಂದು ಮಾತನ್ನು ಹೇಳುವಳು. ವತ್ಸ 14 ರಾಮಾ ! ಇದೇನು ? ಭರತನಿಗೆ ಪಟ್ಟಾಭಿಷೇಕವೆ? ನೀನು ಕಾಡಿನಲ್ಲಿರಬೇಕೆ ? ನನಗೆ ಇಂತಹ ದುಃಖಪ್ರಾಪ್ತಿಗಾಗಿಯೇ ನೀನು ಹುಟ್ಟಿದಂತಿದೆ ! ನೀನು ನನ್ನ ಹೊಟ್ಟೆಯಲ್ಲಿ ಹುಟ್ಟದೆಯೇ ಇದ್ದಿದ್ದರೆ, ಮಹಾಘೋರವಾದ ಪತ್ರ ವಿರಹವೆಂಬ ಈದುಃಖವನ್ನು ನಾನು ಅನುಭವಿಸದಿರಬಹುದಾಗಿತ್ತು. ನಾನು ಮಕ್ಕಳಿಲ್ಲದ ಬಂಜೆಯಾಗಿದ್ದಿದ್ದರೂ ಸಮ್ಮತವಾಗಿತ್ತು. ಬಂಜೆಯರಿಗೆ ಮಕ್ಕ ಇಲ್ಲವೆಂಬುದೊಂದೇ ಚಿಂತೆಯೇ ಹೊರತು, ಈ ವಿಧವಾದ ಬೇರೆ ದುಃಖ ಗಳಿಗೆ ಅವಕಾಶವಿಲ್ಲ. ನನ್ನ ಪತಿಯಾದ ದಶರಥನು, ತನ್ನ ಕೈಸಾಗುವಾಗಲೂ ಕೂಡ, ಜೈಷ್ಪ ಯೆಂಬ ಗೌರವದಿಂದ, ನನ್ನನ್ನು ಒಂದು ದಿವಸವಾ ದರೂ ಸತ್ಕರಿಸಿದವನಲ್ಲ. ನಾನು ಹೆಸರಿಗೆ ಪಟ್ಟದ ರಾಣಿಯೆನಿಸಿಕೊಂಡಿದ್ದ ರೂ, ಇದುವರೆಗೆ ರಾಜಮಹಿಷಿಯರಿಗೆ ಯೋಗ್ಯವಾದ ಯಾವ ಸುಖವನ್ನ ಕಂಡವಳಲ್ಲ! ಅದು ಹೋಗಲಿ! ಮಕ್ಕಳಾದರೂ ಹುಟ್ಟಿದರೆ, ಅದರ ಬಲದಿಂದ ಲಾದರೂ ಪತಿಯ ಪ್ರೀತಿಯನ್ನು ಸಂಪಾದಿಸಿ ಸರಿಯಾದ ಸ್ಥಿತಿಯಲ್ಲಿರಬ ಹುದೆಂದು ಎಣಿಸಿದ್ದನು. ಹಾ! ದೈವವೆ! ಈಗ ಆದೂ ಇಲ್ಲದೆ ಹೋಯಿತು.. *ನಾನು ರಾಜನಿಗೆ ಹಿರಿಯಹೆಂಡಿತಿಯಾಗಿ, ಪಟ್ಟದ ರಾಣಿಯೆನಿಸಿಕೊಂಡಿದ್ದ -~- ~.....-..------------------------------ -------


  • ಇಲ್ಲಿ ಸಾ ಬಹೂನ್ಯಮನೋಜ್ಞಾನಿ ವಾಕ್ಕಾನಿ ಹೃದಯಚ್ಚಿದಾಂ | ಅಹಂಶೋ

ಸಪನಾಮವರಾಣಾಂ ವರಾಸಶೀಗಿ” ಎಂಬುದೇ ಮೂಲವು. (ಸಾ ಅಹಂ) ಹುಟ್ಟಿ ದುದುಮೊದಲು ಹೀಗೆ ಕಷ್ಟವನ್ನೇ ಅನುಭವಿಸುತ್ತಿದ್ದ ನಾನು, ಇನ್ನು ಮುಂದೆ (ಹೃದ ಯಚ್ಚಿದಾಂ) ನನ್ನ ಪತಿಯ ಮನಸ್ಸನ್ನು ಭೇದಿಸಿ, ನನ್ನಲ್ಲಿ ವಿರೋಧವನ್ನು ಹುಟ್ಟಿಸ ತಕ್ಕ, ಮತ್ತು (ಅವರಾಣಾಂ) ನನಗಿಂತಲೂ ನಿಕೃಷ್ಟರಾದ, ಪಟ್ಟದ ರಾಣಿಯಾಗಿ