ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೦.] ಅಯೋಧ್ಯಾಕಾಂಡವು.

ರಿಸುತ್ತಿದ್ದರು. ನೀನೂ ಹೊರಟುಹೋದಮೇಲೆ ನನಗೆ ಉಳಿಗಾಲವೆಲ್ಲಿಯ ದು? ಪತಿಯಾದ ದಶರಥನೇ ನನ್ನನ್ನು ಅಲಕ್ಷಭಾವದಿಂದ ಕಾಣುವನು. ಕೈಕೇಯಿಯ ಗೌಡಿಯನ್ನು ಹೇಗೋ ಹಾಗೆ ನನ್ನನ್ನು ನೋಡುವನು. ಕೆಲ ವು ಸಂದಶ್ಯಗಳಲ್ಲಿ ಆ ಗೌಡಿಯರಿಗಿಂತಲೂ ಕೀಳಾಗಿ ಎಣಿಸುವನು. ರಾಮಾ ! ಇದುವರೆಗೆ ಆರಮನೆಯ ಪರಿಜನರಲ್ಲಿ ಒಬ್ಬರಿಬ್ಬರಾದರೂ ಬಂದು ನನ್ನನ್ನು ಸೇವೆಮಾಡುತ್ತ ಅನುವರಿಸಿಕೊಂಡಿದ್ದರು. ಇನ್ನು ಮೇಲೆ ಭರತನಿಗೆ ರಾಜ್ಯವು ಸೇರಿದರೆ, ಅವರು ಕೈಕೇಯಿಯ ಭಯಕ್ಕಾಗಿ ನನ್ನೊಡನೆ ಮಾತ ನ್ನೇ ಆಡುವುದಿಲ್ಲ. ಹಾ! ಕಷ್ಟವೆ! ಆ ಕೈಕೇಯಿಯ ಬಾಯಿಯಲ್ಲಿ ಮೃದುವಾ ದ ಮಾತೆಂಬುದೇ ಇಲ್ಲ.ಇದರಮೇಲೆ ಆಕೆಗೆ ನನ್ನಲ್ಲಿ ನಿತ್ಯದೋಷವೂ ಇರುವು ದರಿಂದ, ನನ್ನನ್ನು ನೋಡಿದಾಗಲೆಲ್ಲಾ ಸಿಡಿಗುಟ್ಟುತ್ತಾ ಕೂರವಾಕ್ಯವ ನಾಡತೊಡಗುವಳು. ಹೀಗೆ ಅವಳು ಬಾಯಿಗೆ ಬಂದಂತೆ ಮಾತುಗಳನ್ನಾಡಿ. ತಿರಸ್ಕರಿಸಿ, ಮುಖವನ್ನು ಗಂಟುಹಾಕುತ್ತಿದ್ದರೆ, ಅದನ್ನು ನೋಡಿ ನಾನು ಹೇಗೆ ಸಹಿಸಲಿ ? ದಿಕ್ಕಿಲ್ಲದ ನಾನು ಯಾರೊಡನೆ ಹೇಳಿಕೊಳ್ಳಲಿ ? ನೀನಾದರೂ ವೃದ್ಧಿಗೆ ಬಂದಮೇಲೆ ನನ್ನ ಕಷ್ಟವನ್ನು ನೀಗಿಸಿಕೊಳ್ಳಬೇಕೆಂದು, ನೀನು ಹುಟ್ಟಿದುದುಮೊದಲು ಕಳೆದ * ಹದಿನೇಳುವರ್ಷಗಳಿಂದ ಆಶೋತ್ತರವನ್ನಿ

  • ಇಲ್ಲಿ 'ದಶ ಸಪ್ತಚ ವರ್ಷಾಣಿ ತವ ಜಾತಸ್ಯ ರಾಘವ”ಎಂದು ಮೂಲವು. ರಾಮ ನ ವಯಸ್ಸನ್ನು ಸ್ವಲ್ಪಮಟ್ಟಿಗೆ ಇಲ್ಲಿ ವಿಚಾರಿಸಬೇಕಾಗಿದೆ ಕಾಡಿಗೆ ಹೋಗುವಕಾಲದಲ್ಲಿ ಹದಿನೇಳುವರ್ಷಗಳಾಗಿದ್ದು ಎಂದು ಈ ವಾಕ್ಯದಿಂದ ಸ್ಪಷ್ಟವಾಗುವುದು. ವಿಶ್ವಾಮಿತ್ರ ನು ಹಿಂದೆ ರಾಮನನ್ನು ಕಳುಹಿಸಿಕೊಡಬೇಕೆಂದು ದಶರಥನನ್ನು ಕೇಳಿದಾಗ, ದಶರಥನು “ಊನಷೋಡಶವರ್ಷೆ ಮೇ ರಾಮ:"ರಾಮನಿಗೆ ಇನ್ನೂ ಹದಿನಾರುವರ್ಷಗಳ ತುಂ ಬಿಲ್ಲವೆಂದು ಹೇಳಿರುವನು. ಆ ಸಂವತ್ಸರದಲ್ಲಿಯೇ ರಾಮನಿಗೆ ವಿವಾಹವು ನಡೆಯಿತು. ಮುಂದೆ ಸೀತೆಯು ರಾವಣನೊಡನೆ ಉಮಿತ್ರಾದ್ಯಾದಶ ಸಮಾಇಕ್ಷಾಕಣಾಂ ನಿವೇಶ ನೇ” ಇಕ್ಷಾಕುಗೃಹದಲ್ಲಿ ಹನ್ನೆರಡುವರಗಳವರೆಗೆ ವಾಸಮಾಡಿದುದಾಗಿ ಹೇಳಿರುವಳು. ಹೀಗೆ ರಾಮನಿಗೆ ವಿಶ್ವಾಮಿತ್ರನೊಡನೆ ಹೋಗುವಾಗ ಹದಿನಾರು ವರ್ಷಗಳಾಗಿದ್ದುವು. ಅದರಮೇಲೆ ವಿವಾಹಿತನಾಗಿ ಬಂದು, ಹನ್ನೆರಡು ವರ್ಷಗಳವರೆಗೆ ದಶರಥನ ಅರಮನೆಯ ಲ್ಲಿದ್ದುದಾಗಿ ಹೇಳಲ್ಪಟ್ಟಿರುವುದರಿಂದ, ಆ ಹನ್ನೆರಡು ವರ್ಷಗಳೂ ಸೇರಿದರೆ, ರಾಮನು ಕಾಡಿಗೆ ಹೊರಡುವಾಗ ಇಪ್ಪತ್ತೆಂಟು ವರ್ಷಗಳಿಗೆ ಕಡಿಮೆಯಿಲ್ಲದೆ ವಯಸ್ಸಾಗಿರಬೇಕು.