ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

PAL ಹಗ, ೨೧] ಅಯೋಧ್ಯಾಕಾಂಡವು, ಪಿತೃವಾಕ್ಯ ಪರಿಪಾಲನಮಾಡುವುದದರಲ್ಲಿ ಮುಂದಾಗಿರುವೆನೆಂದೆಣಿಸಬೇಡ! ಇದುವರೆಗೆ ಹೇಳಿದ ಮಹಾತ್ಮರೆಲ್ಲರೂ ಇದಕ್ಕಾಗಿ ನಡೆಸಿರುವ ಅಸಾಧ್ಯ ಕಾರಗಳನ್ನು ನೋಡಿದರೆ, ನಾನು ಈಗ ಪ್ರಯತ್ನಿಸುವ ಕಾಠ್ಯವು ಎಷ್ಟು ಮಾತ್ರವಾದುದು? ನಾನು ನಿನಗೆ ದುಃಖವನ್ನುಂಟುಮಾಡಬೇಕೆಂಬ ಉದ್ದೇಶ ದಿಂದ, ಯಾವುದೋ ಒಂದು ಅಪೂಕಾವ್ಯದಲ್ಲಿ ಪ್ರವರ್ತಿಸುವೆನೆಂದೆಣಿಸು ವೆಯಾ ? ಮಹಾತ್ಮರಾದ ಪೂರಿಕರು ಸಮ್ಮತಿಸಿ ಅನುಸರಿಸಿರುವ ದಾರಿ ಯನ್ನೇ ಹಿಂಬಾಲಿಸಿರುವೆನು. ಲೋಕದಲ್ಲಿ ಪಿತೃವಾಕ್ಯ ಪರಿಪಾಲನವ ನ್ನು ಮಾಡಬೇಕೆಂಬುದು ನಿಯತಧವಾದುದರಿಂದ, ಅದಕ್ಕೆ ವ್ಯತಿರಿಕ್ತ ವಾಗಿ ನಡೆಯುವುದುಚಿತವಲ್ಲ! ಈ ಪಿತೃವಾಕ್ಯ ಪರಿಪಾಲನದಿಂದ ಯಾರಿಗೆ ಯಾವ ಅನಿಷ್ಟವುಂಟಾದರೂ, ಅದನ್ನು ನಡೆಸಿದವನಮೇಲೆ ದೋಷವಿಲ್ಲ” ಎಂದನು. ಸಮಯೋಚಿತವಾಕ್ಯಗಳನ್ನಾಡುವವರಲ್ಲಿಯೂ, ಧನುರ್ಧಾಂಗ ಳಲ್ಲಿಯೂ ಸರೋತ್ತಮನೆನಿಸಿಕೊಂಡ ರಾಮನು, ಹೀಗೆ ತಾಯಿಯನ್ನು ಕುರಿತು ಹೇಳಿದಮೇಲೆ, ಲಕ್ಷಣನಕಡೆಗೆ ತಿರುಗಿ, “ವ ಲಕ್ಷಣಾ! ನಿನಗೆ ನನ್ನಲ್ಲಿರುವ ಪ್ರೇಮಾತಿಶಯವನ್ನು ನಾನು ಚೆನ್ನಾಗಿ ಬಲ್ಲೆನು. ನಿನ್ನ ಪರಾಕ್ರ ಮವನ್ನೂ, ಶಕ್ತಿಯನ್ನೂ , ಇತರರಿಂದ ತಿರಸ್ಕರಿಸುವುದಕ್ಕಸಾಧ್ಯವಾದ ನಿನ್ನ ವೀರವನ್ನೂ ನಾನು ಬಲ್ಲೆನು. ಎಲೆ ಮಂಗಳಾಂಗನೆ! ನಮ್ಮ ತಾಯಿಯು ಸತ್ಯ, ಶಾಂತಿ, ಮೊದಲಾದ ಸದ್ಗುಣಗಳ ಸ್ವರೂಪವನ್ನು ಚೆನ್ನಾಗಿ ತಿಳಿದುಕೊಳ್ಳಲಾರಳು ಇದಲ್ಲದೆ, ಕೇವಲಸ್ಲಿಮಾತ್ರಳಾದುದರಿಂದ, ಅವ

  • ಪೂರೈಕರು ಸಮ್ಮತಿಸಿದುದೆಂದರೆ ಚಂದ್ರನು ತಾರೆಯನ್ನು ಪರಿಗ್ರಹಿಸಿದುದೇ ಮೊದಲಾಗಿ, ಅವರು ಸಮ್ಮತಿಸದ ಕೃತ್ಯಗಳೂ ಕೆಲವಿರುವುದರಿಂದ ಅವುಗಳನ್ನು

ನಡೆಸಕೂಡದೆಂದು ಭಾವವು, ಗೋವಧೆ ಮುಂತಾದುವು ಪೂರೈಕರು ನಡೆಸಿದ ಸಾಹಸಕೃತ್ಯಗಳಾದರೂ ಅಧರ್ ವಲ್ಲ. ಪಿತ್ರಾಜ್ಞೆಯಿಲ್ಲದೆ ನಡೆಸಿದ್ದ ಪಕ್ಷದಲ್ಲಿ ಅವು ಅಕೃತ್ಯಗಳಾಗುತ್ತಿದ್ದುವು “ ತತುಶೃತಗುಣಂ ಮಾತಾ ಗೌರವೇಣಾತಿರಿಚ್ಯತೇ " ಪೂಜ್ಯತೆಯಲ್ಲಿ ತಂದೆಗಿಂತಲೂ ತಾಯಿಯು ನೂರುಪಾಲು ಹೆಚ್ಚೆಂದು ಹೇಳಿಡುದು, ತುಶೂಷಾವಿಷಯದಲ್ಲಿಯೇ ಹೊರತು, ಆಜ್ಞೆಯನ್ನು ನಡೆಸುವ ವಿಷಯದಲ್ಲಂತಂ ದಯೇ ಎಲ್ಲಾ ಭಾಗಗಳಲ್ಲಿಯೂ ನಿಯಾಮಕನಾದುದರಿಂದ, ತಾಯಿಯ ಮಾತಿಗಿನ ಲೂ ತಂದೆಯ ಮಾತನ್ನು ಅತ್ಯವಶವಾಗಿ ನಡೆಸಬೇಕೆಂದು ಸೂಚಿತ