ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು [ಸರ್ಗ ೨೧ ಳು ಈಗ ಮಹಾವ್ಯಸನದಲ್ಲಿ ಮುಂದುಗಾಣದೆಮಾತಾಡುವುದೂ ಸಹಜವು. ಪ್ರಾಜ್ಞನಾದ ನೀನೂ ಹೀಗೆ ಹೇಳುವುದುಚಿತವೆ ? ಲೋಕದಲ್ಲಿರುವ ಸಮಸ್ತಪುರುಷಾರಗಳಲ್ಲಿಯೂ ಧರವೇ ಪ್ರಧಾನವು! ಥರದಲ್ಲಿಯೇ ಸತ್ಯ ವೆಂಬುದು ನೆಲೆಗೊಂಡಿರುವುದು.ಈ ಪಿತೃವಾಕ್ಯ ಪರಿಪಾಲನವೆಂಬುದೂಕೂಡ ಥರವನ್ನೇ ಆಶ್ರಯಿಸಿರುವುದು. ಧರದಲ್ಲಿಯೇ ನಿಂತು, ಆ ಥರದ ಫಲ ವನ್ನು ಪಡೆಯಬೇಕೆಂದಿರುವವನು, ತಂದೆಯ ವಿಷಯದಲ್ಲಿಯಾಗಲಿ, ತಾ ಯಿಯ ವಿಷಯದಲ್ಲಿಯಾಗಲಿ, ಅಥವಾ ಬ್ರಾಹ್ಮಣನ ವಿಷಯದಲ್ಲಿಯಾ ಗಲಿ, ಕೊಟ್ಟ ಮಾತಿಗೆ ತಪ್ಪಿನಡೆಯಬಾರದು. ಆದುದರಿಂದ ಎಲೈವತ್ಸನೆ ! ನಾನು ತಂದೆಯ ಆಜ್ಞೆಯನ್ನು ಅತಿಕ್ರಮಿಸುವುದಕ್ಕೆ ಶಕ್ತನಲ್ಲ. ತಂದೆಯು ನನ್ನನ್ನು ಕಾಡಿಗೆ ಹೋಗೆಂದು ತನ್ನ ಬಾಯಿಂದ ಹೇಳಲಿಲ್ಲವೆಂದು ನೀನು ಶಂಕಿಸಬೇಡ! ಆತನ ಆಜ್ಞೆಯನ್ನನುಸರಿಸಿಯೇ ಕೈಕೇಯಿಯು ನನಗೆ ಈ ಆಜ್ಞೆಯನ್ನು ಮಾಡಿರುವಳು. ಆದುದರಿಂದ ತಂದೆಯನ್ನಾದರೂ ಕೊಂದು ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಬೇಕೆಂಬ ಕ್ರೂರವಾದ ಈಕ್ಷತ್ರಿಯವರ ವನ್ನು ಬಿಟ್ಟುಬಿಡು. *ಧರವನ್ನಾಶ್ರಯಿಸು ! ಈ ವಿಧವಾದ ಬುದ್ಧಿಯನ್ನು ನಿಶ್ಲೇಷವಾಗಿ ತ್ಯಜಿಸು ! ನನ್ನ ಮಾರ್ಗವನ್ನನುಸರಿಸಿ ನನ್ನ ಬುದ್ಧನು ಸಾರವಾಗಿ ನಡೆಯುವುದೇ ನಿನಗೆ ಶ್ರೇಯಸ್ಕರವು.” ಎಂದು ಭಾತೃವಾತ್ಯ ಲ್ಯದಿಂದ ಲಕ್ಷ್ಮಣನಿಗೆ ವಿಶೇಷವಾದ ಬುದ್ಧಿವಾದವನ್ನು ಹೇಳಿ, ಪುನಃ ಕೌಸ ಲೈಯಕಡೆಗೆ ತಿರುಗಿ, ವಿನಯದಿಂದ ತಲೆಯನ್ನು ತಗ್ಗಿಸಿ, ಕೈಮುಗಿದು ನಿಂತು ಕೊಂಡು, ಅಮ್ಮಾ! ಇನ್ನು ನನಗೆ ಅನುಮತಿಯನ್ನು ಕೊಡು! ನಾನು ಕಾ ಡಿಗೆ ಹೊರಡುವೆನು. ಇನ್ನು ನನ್ನ ಮೇಲೆ ಆಣೆಯಿಟ್ಟು ಬೇಡುವೆನು, ನನ್ನ ಪ್ರ ಯಾಣಕ್ಕೆ ನೀನು ತಡೆಮಾಡಬೇಡ! ನನಗೆ ಮಂಗಳಾಶೀರ್ವಾದಗಳನ್ನು ಮಾಡಿ ಕಳುಹಿಸು. ಈ ನನ್ನ ಪ್ರತಿಜ್ಞೆಯು ತೀರಿದೊಡನೆಯೇ ಕಾಡಿನಿಂದ

  • ಕೇವಲನೀತಿಯನ್ನು ಮಾತ್ರವಲ್ಲದೆ, ಧಯುಕ್ತವಾದ ನೀತಿಯನ್ನೇ ಅನುಷ್ಠಿ ಸಬೇಕೆಂದು ಭಾವವು, ಧರವನ್ನು ಬಿಟ್ಟಾದರೂ ಕೇವಲನೀತಿಯನ್ನೇ ಅನುಸರಿಸಬೇಕೆಂ ಬುದು ಲೋಕಾಯತರ ಮತವು. ಈ ಶಾಸ್ತ್ರವು ಅದನ್ನು ಖಂಡಿಸಿ ಧರವನ್ನು ಸ್ಥಾಪಿ ಸುವುದು. ಆದುದರಿಂದ ಲಕ್ಷಣನು ಅಲ್ಲಲ್ಲಿ ಲೋಕಾಯತಮತವನ್ನು ಉಪನ್ಯಸಿಸಿದಾ ಗ, ರಾಮನು ಅದನ್ನು ಖಂಡಿಸಿ ಧರವನ್ನೇ ಸ್ಥಾಪಿಸುತ್ತಿದ್ದನೆಂದು ರಹಸ್ಯವು.