ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೧.? ಅಯೋಧ್ಯಾಕಾಂಡವು. ೪೧ ತವಲ್ಲ. ನಾವು ಈ ಲೋಕದಲ್ಲಿ ಬದುಕಿರಬೇಕಾದುದೇ ಸ್ವಲ್ಪ ಕಾಲವಲ್ಲವೆ? ಇಷ್ಟರಲ್ಲಿ ಅಧರಕ್ಕೆ ಪ್ರವರ್ತಿಸಿ, ತುಚ್ಛವಾದ ಭೂಮಿಯನ್ನು ಸಂಪಾ ದಿಸುವುದಕ್ಕೆ ಎಂದಿಗೂ ನಾನು ಇಷ್ಟಪಡನು.” ಎಂದನು. ಹೀಗೆ ರಾಮನು ತಾಯಿಗೆ ಸಮಾಧಾನವನ್ನು ಹೇಳಿ, ಹಿಂದೆ ಕೈಕೇಯಿಯು ತನ್ನನ್ನು ಕಾಡಿಗೆ ಹೋಗಬೇಕೆಂದು ತ್ವರಪಡಿಸಿದ ಮಾತನ್ನು ಸ್ಮರಣೆಗೆ ತಂದುಕೊಂಡು, ದಂಡಕಾರಣ್ಯಕ್ಕೆ ಹೊರಡುವುದಾಗಿ ನಿಶ್ಚಯಿಸಿ, ತನ್ನ ತಮ್ಮನಾದ ಲಕ್ಷ ಣನಿಗೂ ನಾನಾವಿಧದಲ್ಲಿ ಹಿತವನ್ನು ಹೇಳಿ, ಮನಸ್ಸಿನಲ್ಲಿ ಭಕ್ತಿಯಿಂದ ತಾಯಿಯನ್ನು ಪ್ರದಕ್ಷಿಣಮಾಡುವುದಕ್ಕಾಗಿ ಸಂಕಲ್ಪಿಸಿಕೊಂಡನು. ಇಲ್ಲಿಗೆ ಇಪ್ಪತ್ತೊಂದನೆಯ ಸರ್ಗವು. ಟಾಗಬಹುದಲ್ಲವೆ?ಇದಕ್ಕೆ ಆತ್ಮಾರದಲ್ಲಿ ಬಹುವಚನವು ಉಪಯೋಗಿಸಲ್ಪಟ್ಟಿರಬಹು ದೆಂದು ಸಮಾಧಾನವನ್ನು ಹೇಳಬಹುದಾದರೂ, ಇಲ್ಲಿ ರಾಮನ ಅಭಿಪ್ರಾಯವು ಹಾಗ ೪. ಲಕ್ಷ್ಮಣನನ್ನೂ ತನ್ನೊಡನೆ ಸೇರಿಸಿ, ತಮ್ಮಿಬ್ಬರಿಗೂ ಹೇಳಿಕೊಂಡತೆಯೇ ಗ್ರಹಿಸ ಬೇಕು (ಅಸ್ಕ ದೋ ದೃಶ್ಯ” ಎಂಬ ಸೂತ್ರಾನುಸಾರವಾಗಿ ದ್ವಿವಚನಕ್ಕೂ ಬ ಹುವಚನವನ್ನು ಪಯೋಗಿಸಬಹುದು. ಸೀತೆಯು ತನ್ನೊಡನೆ ಬರುವ ವಿಷಯವು ರಾಮ ನಿಗೆ ನಿರ್ಧರವಿಲ್ಲದಿದ್ದರೂ, ಲಕ್ಷಣನು ತನ್ನನ್ನು ಹಿಂಬಾಲಿಸಿ ಬಾರದಿರನೆಂದು, ರಾ ಮನಿಗೆ ಮೊದಲೇ ನಿಶ್ಚಯವಿತ್ತೆಂದೂ ಗ್ರಹಿಸಬೇಕು. ದೀಪ್ತಮಗ್ನಿ ಮರಕ್ಕಂ ವಾಯ ದಿ ರಾಮ: ಪ್ರವೇಕ್ಷಕಿ 1 ಪ್ರವಿಷ್ಟಂ ತತ್ರ ಮಾಂ ದೇವಿ ತ್ವಂ ಪೂರೈಮವಧಾರಯ” ಎಂದು ಲಕ್ಷಸನು ದೃಢಸಂಕಲ್ಪ ಮಾಡಿರುವುದರಿಂದ, ಅವನು ತನ್ನೊಡನೆ ಬಂದೇಬರು ವನೆಂದು ರಾಮನು ಮೊದಲೇ ನಿಶ್ಚಯಿಸಿಕೊಂಡು ಈ ಮಾತನ್ನು ಹೇಳಿರುವನು,

  • ಇಲ್ಲಿ 'ಸ್ವದರ್ಶನಂ ಎಂದು ಮೂಲವು, ದರ್ಶನವೆಂದರೆ ಮತವೆಂದರು. ತನ್ನ ಮತವಾದ ಧರಹಸ್ಯವನ್ನು ಬೋಧಿಸಿದುದಾಗಿ ತಿಳಿಯಬೇಕು. ಲೋಕದಲ್ಲಿ ಧಾರ ಕಾಮಗಳೆಂಬ ಮೂರು ಪುರುಷಾರಗಳೂ ಪ್ರಸಿದ್ದಗಳಾಗಿವೆ. ಅವುಗಳಲ್ಲಿಧರ ವೇ ಎಲ್ಲಕ್ಕೂ ಮೂಲಭೂತವಾಗಿರುವುದರಿಂದ, ಕೇವಲಧರವನ್ನೇ ಆಶ್ರಯಿಸಬೇ ಕಂದೂ, ಉಳಿದವೆರಡೂ ಅಪಾಯಹೇತುಗಳೆಂದೂ ರಾಮನ ಮತವು.