ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೩.] ಅಯೋಧ್ಯಾಕಾಂಡವು. ೪೫ ಬುದ್ಧಿವಾದವನ್ನು ಹೇಳಿ ವಾನಪ್ರಸ್ಥಾಶ್ರಮವನ್ನoಗೀಕರಿಸಬೇಕೆಂಬುದೇ ಶಾಸವಿಥಿಯಲ್ಲವೆ ? ನಮ್ಮ ವಂಶದ ಪುರಾತನರಾಜರ್ಷಿಗಳೂ ಇದೇ ಮಾ ರ್ಗವನ್ನನುಸರಿಸಿ ನಡೆಸುತ್ತಿದ್ದರಲ್ಲವೆ ? ಎಲೆ ಧರಾತ್ಮನೆ ! ಈಗ ರಾಜನ ಮನಸ್ಸು ಚಂಚಲವಾಗಿರುವುದೆಂದೂ, ಹೀಗಿರುವಾಗಲೂ ನೀನು ಪ್ರಯತ್ನ ದಿಂದ ರಾಜ್ಯವನ್ನು ಸ್ವಾಧೀನಪಡಿಸಿಕೊಂಡರೆ, ಅನೇಕವಿಧದ ಭೇದಗಳುಂಟಾ ಗಿ ರಾಜ್ಯವನ್ನು ನಡೆಸುವುದಸಾಧ್ಯವಾಗುವುದೆಂದೂ ಶಂಕಿಸಿ, ನೀನು ಇದ ಸ್ವಂಗೀಕರಿಸುವುದಕ್ಕೆ ಇಷ್ಟಪಡದಿರುವುದಾದರೆ ಅದನ್ನಾದರೂ ಹೇಳು. ಅದಕ್ಕಾಗಿ ನೀನು ಚಿಂತಿಸಬೇಕಾದುದಿಲ್ಲ. ನೀನಾದರೋ ಮಹಾವೀರನು ನಾನೂ ನಿನಗೆ ಸಹಾಯನಾಗಿರುವೆನು. ಸಮುದ್ರವೇಲೆಯು ಉಕ್ಕಿಬರುವ ಸಮುದ್ರವನ್ನು ತಡೆದಿಡುವಂತೆ, ರಾಜ್ಯವನ್ನು ಸ್ವಾಧೀನದಲ್ಲಿರಿಸತಕ್ಕ ಭಾರ ವು ನನಗಿರಲಿ! ಬೇಕಾದರೆ ಈ ವಿಷಯದಲ್ಲಿ ನಾನು ನಿನಗೆ ಸತ್ಯವನ್ನು ಮಾಡಿ ಕೊಡುವೆನು. ನಾನು ಈ ಮಾತಿಗೆ ತಪ್ಪಿದರೆ, ನನಗೆ ಲಭಿಸಬೇಕಾದ ಪೀರ ಲೋಕಗಳೆಲ್ಲವೂ ತಪ್ಪಿಹೋಗಲಿ ! ಈಗಲೇ ವಸಿಷ್ಠ ಮಹರ್ಷಿಗಳ ನ್ನು ಕರೆಸಿ, ಮಂಗಳದ್ರವ್ಯಗಳನ್ನು ಸಿದ್ಧಪಡಿಸಿ, ಪಟ್ಟಾಭಿಷೇಕವನ್ನು ನಡೆಸಿ ಕೊಂಡು ಬಿಡು! ಇದಕ್ಕೆ ಯಾವ ರಾಜರಾದರೂ ವಿರೋಧಿಗಳಾಗಿ ನಿಂತರೆ, ಅವರನ್ನು ನಿಗ್ರಹಿಸುವ ಭಾರವನ್ನು ನಾನು ವಹಿಸುವೆನು. ಇದಕ್ಕೆ ನಾನೂ ಬೃನೇ ಸಾಕು!ಆಣ್ಣಾ! ಈ ನನ್ನ ಕೈಗಳೆರಡೂ ನನ್ನ ದೇಹಕ್ಕೆ ಕೇವಲ ಆಲಂಕಾ ರಪ್ರಾಯವಾದುವುಗಳೆಂದೆಣಿಸಬೇಡ! ಈ ನನ್ನ ಬಿಲ್ಲಾದರೂ ಕೇವಲ ಅಲಂ ಕಾರಾರವಾದುದಲ್ಲ! ಇನನ್ನ ಕತ್ತಿಯೂ ಕೇವಲವೀರಭೂಷಣವಾಗಿ ನಡುವಿ ಗೆಕಟ್ಟಿದುದಲ್ಲ.ನಾನು ಧರಿಸಿರುವ ಈ ಬಾಣಗಳನ್ನು ಕೇವಲ ಡಂಭಪ್ರದರ್ಶ ನಾರ್ಧವೆಂದು ತಿಳಿಯಬೇಡ! ಇವೆಲ್ಲವೂ ಶತ್ರುಗಳ ಕೊಬ್ಬನ್ನು ಮುರಿದಿಡು ವುದಕ್ಕಾಗಿಯೇ ಹೊರತು ಬೇರೆಯಲ್ಲ.ನನಗೆ ಯಾವನು ಶತ್ರುವೆಂದು ತೋ ರುವನೋ, ಅಂತವನನ್ನು ನಾನು ಹುಟ್ಟಡಗಿಸದೆ ಬಿಡುವವನಲ್ಲ! ನನ್ನನ್ನು ದ್ವೇಷಿಸುವವನು ಕೊನೆಗೆ ದೇವೇಂದ್ರನಾಗಿದ್ದರೂ, ಮಿಂಚಿನಂತೆ ಹೊಳೆ ಯುವ ಮಹಾತೀಕ್ಷವಾದ ಆಲಗುಳ್ಳ ಈ ನನ್ನ ಕತ್ತಿಯಿಂದ ಆತನನ್ನು ತುಂಡುಮಾಡದೆಬಿಡೆನು. ಒಂದುವೇಳೆ ಯುದ್ಧವು ಪ್ರಾಪ್ತವಾದರೆ, ನನಗಿ ದಿರಾಗಿ ಬಂದ ಆನೆ, ಕುದುರೆ, ಕಾಲಾಳುಗಳೆಂಬ ಸಮಸ್ತಸೈನ್ಯಗಳನ್ನೂ ಈ