ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು [ಸರ್ಗ, ೨೪. ಗೂ ಈ ವನವಾಸವು ಪ್ರಾಪ್ತವಾದಮೇಲೆ,ಇದು ದೈವಾಧೀನವಲ್ಲದೆ ಮತ್ತೇ ನು? ವತ್ರನೆ! ನನ್ನ ನಿಟ್ಟುಸಿರಿನ ಆಯಾಸದಿಂದುಂಟಾಗಿ, ಈಗ ನನ್ನಲ್ಲಿ ಅಡಗಿ ರುವ ಶೋಕಾಗ್ನಿಯು ಸುಮ್ಮನೆಹೋಗುತಕ್ಕುದಲ್ಲ! ನಿನ್ನನ್ನು ಕಾಣದುದರಿಂ ದ ಆಗಾಗ ಉಂಟಾಗತಕ್ಕ ಸಂಕಟವೇ ಗಾಳಿಯಂತೆ ಆ ಅಗ್ನಿ ಯನ್ನು ಹೆಚ್ಚಿ ಸುವುದಕ್ಕೆ ಸಹಕಾರಿಯಾಗುವುದು. ನನ್ನ ಪ್ರಲಾಪದಿಂದುಂಟಾದ ಈ ದುಃ ಖವೇ ಕಟ್ಟಿಗೆಯಾಗಿ, ನನ್ನ ಕಣ್ಣೀರುಗಳೇ ಆಜ್ಞಾಹುತಿಯಾಗಿ, ನನ್ನ ಮನ ಸ್ಸಿನ ಚಿಂತೆಯ ಬೇಗೆಯೆಂಬ ಹೊಗೆಯ ಪರಂಪರೆಯನ್ನು ಹೊರಡಿಸುತ್ತಾ, ನಿನ್ನಗಲಿಕೆಯಿಂದ ಮಹತ್ತಾಗಿ ಬೆಳೆದು, ನೀನಿಲ್ಲದ ಸಮಯದಲ್ಲಿ ನನ್ನನ್ನು ಕಂದಿಸಿ, ಶಿಶಿರಋತುವಿನಲ್ಲಿ ಒಣಗಿದ ಪೊದೆ ಯನ್ನು ಕಾಡುಗಿಚ್ಚು ಹೇಗೋಹಾ ಗೆ, ನನ್ನ ದೇಹವನ್ನು ಸಂಪೂಕ್ಷ್ಮವಾಗಿ ಸುಟ್ಟು ಬಿಡುವುದರಲ್ಲಿ ಸ್ಪಲ್ಪವೂ ಸಂ ದೇಹವಿಲ್ಲ; ವತ್ಸ ರಾಮಾ!ಹಸುವು ತನ್ನ ಕರುವು ಹೋದವಾರಿಯನ್ನೇ ಅನು ಸರಿಸಿ ಹೋಗುವಂತೆ, ನೀನು ಹೋಗುವಕಡೆಗೆ ನಾನೂ ಬರುವೆನು.”ಎಂದ ಳು. ಪರಮಶ್ರೇಷ್ಠನಾದ ರಾಮನು ತಾಯಿಯು ಹೇಳಿದ ಈ ಮಾತನ್ನು ಕೇಳಿ,ವ್ಯಸನದಿಂದ ಬಹಳವಾಗಿ ಕೊರಗುತ್ತಿರುವ ಆಕೆಯನ್ನು ನೋಡಿ ಎಲೆ ಮಾತೆ! ಮೊದಲೇ ಕೈಕೇಯಿಯು ತಂದೆಯಾದ ದಶರಥನನ್ನು ತನ್ನ ಮೋ ಹಪಾಶಕ್ಕೆ ಸಿಕ್ಕಿಸಿಕೊಂಡು ಮೋಸಗೊಳಿಸುತ್ತಿರುವಳು. ಈಗ ನಾನೂ ಕಾಡಿಗೆ ಹೊರಟುಹೋಗುವೆನು. ನೀನೂ ನನ್ನ ಹಿಂದೆ ಹೊರಟುಬಂದರೆ, ಆತನು ಬದುಕುವ ಬಗೆಯೇನು ? ನಿಜವಾಗಿ ಆತನು ಪ್ರಾಣವನ್ನೇ ಕಳೆದು ಕೊಳ್ಳಬೇಕಾಗುವುದು. ಗಂಡನನ್ನಗಲಿ ಹೋಗುವುದಕ್ಕಿಂತಲೂ, ಸ್ತ್ರೀಯ ರಿಗೆ ಬೇರೆ ಊರಕಾರವೇನುಂಟು? ನಿನ್ನಂತಹ ಪಾತಿವ್ರತ್ಯಪರಾಯಣ ರಾದ ಸ್ತ್ರೀಯರು ಎಂದಿಗೂ ಈ ಆಲೋಚನೆಯನ್ನು ಮಾಡಬಾರದು. ಇದ ನ್ನು ಮನಸ್ಸಿನಲ್ಲಿ ಯೋಚಿಸುವುದೂ ನ್ಯಾಯವಲ್ಲ. ಕಕುತೃವಂಶದಲ್ಲಿ ಹು ಜೈ ಭೂಮಿಗೆಲ್ಲಾ ಒಡೆಯನೆನಿಸಿಕೊಂಡಿರುವ ನಮ್ಮ ತಂದೆಯು, ಬದುಕಿರು ವವರೆಗೂ,ಆತನ ಶುಶೂಷೆಯನ್ನು ಮಾಡುತ್ತಿರಬೇಕಾದುದೇ ನಿನ್ನ ಕೃತ್ಯವು. ಸ್ತ್ರೀಯರಿಗೆ ಇದೇ ಶಾಶ್ವತಧಮ್ಮವು”ಎಂದನು. ಇದನ್ನು ಕೇಳಿ ಕೌಸಲ್ಯಯು ಯುಕ್ತಾಯಕ್ಕವನ್ನು ಚೆನ್ನಾಗಿ ವಿಚಾರಿಸಿ, ಆತನ ಧರ ಸಂಕಲ್ಪ ವನ್ನು ನೋಡಿ ಮನಸ್ಸಿನಲ್ಲಿ ಸಂತೋಷಗೊಂಡು, ತನಗೆ ದುಃಖ