ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೪.] ಅಯೋಧ್ಯಾಕಾಂಡವು. ಉತ್ತಮಸಿಯೆನಿಸಿಕೊಂಡಿದ್ದರೂ, ಯಾವಳು ತನ್ನ ಪತಿಯನ್ನ ನುಸರಿಸಿ ನಡಿಯದಿರುವಳೋ, ಅಂತವಳು ಪಾಪಗತಿಯನ್ನು ಹೊಂದುವಳೇಹೊರತು ಎಂದಿಗೂ ಸದ್ದತಿಯನ್ನು ಪಡೆಯಲಾರಳು, ಹೆಂಗಸರಿಗೆ ಪತಿಶುಶೂಷೆಯೊಂ ದೇ ಸ್ವರಪ್ರಾಪ್ತಿಗೆ ಮುಖ್ಯ ಸಾಧನವು. ಗುರುಹಿರಿಯರಿಗೆ ನಮಸ್ಕರಿಸದೆ, ದೈ ವಭಕ್ತಿಯಿಲ್ಲದೆ, ಕೇವಲನಾಸ್ತಿಕಳಾದ ಹೆಂಗಸೂಕೂಡ ಪತಿಶುಶೂಷೆಯ ನ್ನು ಮಾಡಿದಮಾತ್ರಕ್ಕೆ ಉತ್ತಮಗತಿಯನ್ನು ಪಡೆಯುವಳು.ಸೀಯಾದವಳು ಯಾವಾಗಲೂ ತನ್ನ ಪತಿಗೆ ಹಿತವಾಗಿಯೂ, ಇಷ್ಟವಾಗಿಯೂ ಇರತಕ್ಕ ಕಾ. ಕ್ಯಗಳನ್ನೇ ಮಾಡುತ್ತಿರಬೇಕು. ಲೋಕದಲ್ಲಿ ಬಹುಕಾಲದ ಶಿಷ್ಟಾಚಾರದಿಂದ ಬಂದ ಪುರಾತನಥರವೇ ಇದು. ವೇದಗಳಲ್ಲಿಯೂ ಇದೇ ಮುಖ್ಯವಶ್ಯವಾಗಿ, ವಿಧಿಸಲ್ಪಟ್ಟಿರುವುದು. ಶ್ರುತಿಸ್ಮತಿಗಳೂ ಇದನ್ನೇ ಪ್ರತಿಪಾದಿಸುವುವು. ಆ. ಮ್ಯಾ!ನೀನು ಇನ್ನು ಮೇಲೆ ನನಗಾಗಿ ಶಾಂತಿಕಪ ರಾಷ್ಟ್ರಕಹೋಮಗಳೇಮೊದ ಲಾದ ಅಗ್ನಿ ಕಾರಗಳಿಂದಲೂ, ಪುಷ್ಟಾದಿಗಳಿಂದಲೂ ದೇವತಾಪೂಜೆಯನ್ನು ಮಾಡುತ್ತಿರು. ಹಾಗೆಯೇ ವ್ರತನಿಷ್ಠರಾದ ಬ್ರಾಹ್ಮಣರನ್ನೂ ಆಗಾಗ ಪೂಜೆ ಸುತ್ತಿರು. ನಾನು ಸುಖವಾಗಿ ಹಿಂತಿರುಗಿಬರುವವರೆಗೂ, ನೀನುಹೀಗೆಯೇ ಕಾಲವನ್ನು ಕಳೆಯುತ್ತಿರು! ಮತ್ತು ಸ್ನಾನಾದಿನಿಯಮಗಳನ್ನು ಕೈಕೊಂಡು, ನಿಷಿದ ಪದಾರ್ಥಗಳನ್ನು ಭುಜಿಸದೆ, ನಿಯತವಾದ ಸಾತ್ವಿಕಾಹಾರಗಳನ್ನೇ ತೆಗೆದುಕೊಳ್ಳುತ್ತ,ಪತಿಶುಶೂಷೆಯನ್ನು ಮಾಡಿಕೊಂಡು, ನಾನು ಹಿಂತಿರು ಗಿಬರುವುದನ್ನೆ ಇದಿರುನೋಡುತ್ತಿರು. ಧಾಕರಲ್ಲಿ ಶ್ರೇಷ್ಠನೆನಿಸಿಕೊಂಡ ನನ್ನ ತಂದೆಯು, ನಾನು ಹಿಂತಿರುಗಿಬರುವವವರೆಗೂ ಬದುಕಿದ್ದ ಪಕ್ಷದಲ್ಲಿ, ಆ ಮೇಲೆ ನಿನ್ನ ಕೋರಿಕೆಗಳೆಲ್ಲವನ್ನೂ ಈಡೇರಿಸಿಕೊಳ್ಳಬಹುದು.” ಎಂದನು. ಈ ಮಾತನ್ನು ಕೇಳಿ ಕಸಿಯು, ಆಗಲೂ ಎಡಬಿಡದೆ ಕಣ್ಣೀರನ್ನು ' ಸುರಿಸು. ತಾ, ಪುತ್ರಶೋಕದಿಂದ ಪೀಡಿತಳಾಗಿ, ಪುನಃ ರಾಮನನ್ನು ಕುರಿತು “ಎಲೆ ವ ತೃನೆ ! ನೀನು ಕಾಡಿಗೆ ಹೊರಡುವುದರಲ್ಲಿಯೇ ದೃಢಸಂಕಲ್ಪವುಳ್ಳವನಾಗಿರು ವೆ. ಅದನ್ನು ತಪ್ಪಿಸುವುದು ಈಗ ನನ್ನಿಂದ ಸಾಧ್ಯವಲ್ಲ. ಕಾಲಗತಿಯು ಹೀಗೆ ಬಂದೊದಗಿರುವಾಗ ಯಾರೇನು ಮಾಡಬಲ್ಲರು? ಎಲೆ ಮಗನೇ! ಇನ್ನು ನೀನು. ಜಾಗರೂಕನಾಗಿ ಹೋಗಿ ಬಾ ! ನಿನಗೆ ಮಂಗಳವಾಗಲಿ! ನೀನು ಕಾಡಿನಿಂದ ಹಿಂತಿರುಗಿ ಬಂದಮೇಲೆಯೇ ನನ್ನ ಕಷ್ಟವೆಲ್ಲವೂ ನೀಗಬೇಕು.ಮಹಾತ್ಮನಾದ