ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ ಪರ್ಗ, ೨೫ || ಅಯೋಧ್ಯಾಕಾಂಡವು. ಸೂಚಕವಾದ ಮಾತುಗಳನ್ನು ನುಡಿಯುತ್ತಿದ್ದಳು. ಆದರೆ ಅವಳ ಮನಸ್ಸಿಗೆ ಸಂತೋಷವಿಲ್ಲದುದರಿಂದ ನಡುನಡುವೆ ಮಾತುಗಳು ತಡವರಿಸುತ್ತಿದ್ದುವು. ಹೀಗೆ ಅವಳು ರಾಮನನ್ನು ಸಮೀಪಕ್ಕೆ ಕರೆದು, ಆತನ ತಲೆಯನ್ನಾ ಫಾ ಣಿಸಿ, ಆತನನ್ನು ಬಿಗಿಯಾಗಿ ಅಪ್ಪಿ ಮುದ್ದಾಡುತ್ತ, ವತ್ಸ ರಾಮಾ ! ಇನ್ನು ನೀನು ಸುಖವಾಗಿ ಹೋಗಿ ಬಾ ! ಕೃತಾರನಾಗು ! ಯಾವ ರೋಗಬಾಧೆಯೂ ಇಲ್ಲದೆ, ಸಮಸ್ತ ಕಾವ್ಯಗಳಲ್ಲಿಯೂ ಪೂರ್ಣವಾದ ಸಿದ್ದಿಯನ್ನು ಪಡೆದು, ಅಯೋಧ್ಯೆಗೆ ಹಿಂತಿರುಗಿ ಬಂದು, ರಾಜವಂಶಕ್ಕೆ ಯೋಗ್ಯವಾದ ರಾಜ್ಯಭಾರವನ್ನು ಸ್ಥಿರವಾಗಿ ಕೈಕೊಂಡು ಸುಖಿಯಾಗಿರು ವುದನ್ನು ನಾನು ಕಣ್ಣಾರೆ ನೋಡಬೇಕು ! ಈಗ ನನಗುಂಟಾಗಿರುವ ದುಃ ಖವೆಲ್ಲವೂ ನೀಗಿ,ನೀನು ಕಾಡಿಗೆಹೋದಮೇಲೆ ಯಾವಾಗಲೂ ನಿನ್ನ ಸ್ಮರಣೆ ಯಿಂದಲೇ ಹಂಬಲಿಸುತ್ತಿರುವ ನನ್ನ ಚಿಂತಾಜ್ವರವು ಶಮನವಾಗುವಂತೆ ಸಂತೋಷದಿಂದ ಅರಳಿದ ಮುಖವುಳ್ಳವನಾಗಿ ಉದಿಸಿಬಂದ ಪೂರ್ಣಚಂದ್ರ ನಂತೆ ಕಾಡಿನಿಂದ ಹಿಂತಿರುಗಿ ಬಂದ ನಿನ್ನನ್ನು ನೋಡಿ ಆನಂದಿಸತಕ್ಕ ಭಾಗ್ಯವು ನನಗೆ ಲಭಿಸಬೇಕು ! ನೀನು ಪಿತೃವಾಕ್ಯ ಪರಿಪಾಲನವೆಂಬ ವ್ರತ ವನ್ನು ತೀರಿಸಿ, ಕೃತಾರನಾಗಿ, ಕಾಡಿನಿಂದ ಹಿಂತಿರುಗಿ ಬಂದು ಸಿಂಹಾಸನ ದಲ್ಲಿ ಕುಳಿತಿರುವುದನ್ನು ನಾನು ಕಣ್ಣಾರೆ ಕಂಡು ಆನಂದಿಸಬೇಕು. ನೀನು ಕಾಡಿನಿಂದ ಬಂದು, ರಾಜಯೋಗ್ಯವಾದ ವಸ್ತ್ರಾಭರಣಗಳನ್ನು ಧರಿಸಿ, ಮಂ ಗಳಾಲಂಕಾರಗಳನ್ನು ಮಾಡಿಕೊಂಡು, ನನಗೂ ನನ್ನ ಸೊಸೆಯಾದ ಸೀತೆಗೂ ಕೋರಿದ ಕೋರಿಕೆಗಳೆಲ್ಲವೂ ಕೈಗೂಡುವಂತೆ ಮಾಡಬೇಕು ! ಎಲೆ ವತ್ಸನೆ ! ಈಗ ನಾನು ಪೂಜಿಸಿದ ದೇವತೆಗಳೂ, ಮಹರ್ಷಿಗಳೂ, ಭೂತ ಗಳೂ, ಅಸುರರೂ, ಪನ್ನ ಗರೂ, ದಿಕ್ಕೇವತೆಗಳೂ ನನ್ನ ಪೂಜೆಗೆ ಪ್ರಸನ್ನ ರಾಗಿ, ವನಸಂಚಾರದಲ್ಲಿರುವ ನಿನಗೆ ಯಾವಾಗಲೂ ಕ್ಷೇಮವನ್ನುಂಟು ಮಾಡುತ್ತಿರಲಿ!” ಎಂದಳು. ಹೀಗೆ ಆಕೆಯು ದುಃಖದಿಂದ ಕಣ್ಣಿನಲ್ಲಿ ನೀರನ್ನು ತುಳುಕಿಸುತ್ತ, ಪುತ್ರನಾದ ರಾಮನಿಗೆ ವಿಧ್ಯುಕ್ತವಾದ ಮಂಗಳಾತೀ ಗ್ವಾದಗಳನ್ನು ಮಾಡಿ, ರಕ್ಷಾರವಾಗಿ ಆತನನ್ನು ಒಂದಾವರ್ತಿ ಸುತ್ತಿ ಬಂದು, ಬಾರಿಬಾರಿಗೂ ಪ್ರೇಮದಿಂದ ಆತನನ್ನು ಬಿಗಿದಪ್ಪಿಕೊಳ್ಳುತಿದ್ದಳು. ಹೀಗೆ ಕೌಸಲ್ಯಯ ಪತ್ರವಾತ್ಸಲ್ಯದಿಂದ ಆತನಿಗೆ ಪ್ರಯಾಣ ಕಾಲದಲ್ಲಿ ನಡೆಸ