ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಕರ (ಸನ್, ೨೬.. ಕಾಡಿನಲ್ಲಿ ಅಲ್ಲಲ್ಲಿ ಹರಿಯುವ ನದೀನದಗಳನ್ನೂ, ಬೆಟ್ಟಗುಡ್ಡಗಳನ್ನೂ, ಕೆರೆ ತೊರೆಗಳನ್ನೂ, ಮಡುಗಳನ್ನೂ, ತೋಪುಗಳನ್ನೂ ನೋಡಬೇಕೆಂದು ನನಗೆ ಬಹಳ ಆಸೆಯಿರುವುದು. ನಾಥನಾದ ನೀನೇ ಈಗ ನನಗೆ ಬೆಂಬಲವಾಗಿ ಬರು ವುದರಿಂದ, ಆ ದುರ್ಗಮವಾದ ಕಾಡಿನಲ್ಲಿಯೂ ನಾನು ನಿರ್ಭಯಳಾಗಿ ಸಂಚ ರಿಸುತ್ತ, ಕಣ್ಣಿಗೆ ಬೇಕಾದುದೆಲ್ಲವನ್ನೂ ನೋಡಿ ಬರಬಹುದು.ಇದಕ್ಕಿಂತಲೂ ಒಳ್ಳೆಯ ಅವಕಾಶವು ಮುಂದೆ ಸಿಕ್ಕಲಾರದು. ಅಲ್ಲಲ್ಲಿ ಹಂಸಗಳು, ನೀರು ಕೋಳಿಗಳು, ಮೊದಲಾದ ಅನೇಕಜಲಚರಪಕ್ಷಿಗಳಿಂದ ಅತಿಮನೋಹರಗ ಳಾಗಿರುವ ತಾವರೆಕೊಳಗಳನ್ನು ನೋಡಿ ಬರಬೇಕೆಂದು ನನಗೆ ಬಹಳಕು. ತೂಹಲವುಂಟು. ರಮ್ಯಗಳಾದ ಆ ಕೊಳಗಳಲ್ಲಿ ವ್ರತನಿಯಮಗಳಿಗೆ ಬೇಕಾದ ಸ್ನಾನಾದಿಗಳನ್ನೂ ಮಾಡಬಹುದು. ಅದಕ್ಕಾಗಿ ನಾನು ಬಿಸಿನೀರು ಮುಂತಾದುವುಗಳಿಗೆ ಅಪೇಕ್ಷಿಸುವವಳಲ್ಲ. ಆ ತಾವರೆಕೊಳಗಳಲ್ಲಿ ನಿನ್ನೊಡ ಗೂಡಿ ಎಷ್ಟೋ ಸಂತೋಷದಿಂದ ವಿಹರಿಸುತ್ತಿರಬಹುದು. ನಾನು ಕಾಡಿನ ಲ್ಲಿ ನಿನ್ನೊಡನೆ ವಿಹರಿಸುತ್ತಿದ್ದರೆ, ಸಾವಿರಾರುವರ್ಷಗಳವರೆಗಾದರೂ ನಿಶ್ಚಿಂತಳಾಗಿರಬಲ್ಲೆನು. ಈ ಹದಿನಾಲ್ಕು ವರ್ಷಗಳನ್ನು ಕಳೆಯುವುದೊಂದ ಸಾಧ್ಯವೆ? ನಿನ್ನನ್ನು ಬಿಟ್ಟು ಸ್ವರ್ಗಸುಖವನ್ನಾದರೂ ನಾನೊಲ್ಲೆನು. ನಿನ್ನಿಂ ದಗಲಿಸಿ ನನ್ನನ್ನು ಇಂದ್ರಲೋಕದಲ್ಲಿರಿಸಿದರೂ ನಾನೂ ನಿಮಿಷಮಾತ್ರವೂ ಅಲ್ಲಿರತಕ್ಕವಳಲ್ಲ. * ಈಗ ನೀನು ಹೋಗಿ ವಾಸಮಾಡತಕ್ಕ ವನಪ್ರದೇಶವು

  • ಇದಕ್ಕೆ “ಅಹಂ ಗವಿಷ್ಯಾಮಿ ವನಂ ಸುದುರ್ಗಮಂ ಮೃಗಾಯತಂ ವಾನರ ವಾರಣೆರ್ಯುತಂ ವನೇ ನಿವಾಮಿ ಯಥಾಪಿತರ್ಗೃಹೇ ತವ ಪಾದಾವಶಗೃಹ ಸಂಯತಾ 1 ಅನ್ನಭಾವಾಮನುರಕ್ತಚೇತಸಂತಯಾ ವಿಯುಕ್ತಾಂಮರಣಾಯ ನಿಶ್ಚಿ ತಾಂ1ನಯ ಮಾಂ ಸಾಧು ಕುರುಪ್ಪಯಾಚನಾಂ ನತೇ ಮಯಾತೋ ಗುರುತಾ ಭವಿಷ್ಯತಿ ||” ಎಂಬುದೇ ಮೂಲವು, ಈ ವಾಕ್ಯಗಳಲ್ಲಿ ಅಂತರ್ಗತವಾದ ಕೆಲವು ರಹ ಸ್ಕಾರಗಳುಂಟು. ಹೇಗೆಂದರೆ:-(ಅಹಂ ಗಮಿಷ್ಯಾಮಿ ವನಂ ಸುದುರ್ಗಮಂ) ಎಷ್ಟೇ ದುರ್ಗಮವಾದ ವನಪ್ರದೇಶಕ್ಕಾದರೂ ನಾನು ನಿನ್ನೊಡನೆ ಬರುವೆನೆ೦ದರವು (ಮೃಗ ಯುತ೦) ಮೃಗದಿಂದ ಕೂಡಿದುದು, ಮಾರೀಚನು ಮಾಯಾಮೃಗವೇಷದಿಂದ ಬಂದು ನಮಗ ಏನೂಗವನ್ನುಂಟುಮಾಡತಕ್ಕ ವನಪ್ರದೇಶವೆಂದು ರಹಸ್ಕಾರವು (ವಾನರವಾರಕ್ತರ್ಯುತಂ) ವಾನರವರಣರೆಂದರೆ ವಾನರಶ್ರೇಷ ರು. ಅವರಿಂದ ಕೂಡಿದುದು.