ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೦, ಆಯೋಧ್ಯಾಕಾಂಡವು. Ve ದೇಹವಂಶದಲ್ಲಿ ಹುಟ್ಟಿ, ವಿಧಿಲಾಧಿಪತಿಯೆನಿಸಿಕೊಂಡಿರುವ ನನ್ನ ತಂದೆಯು, ಇಲ್ಲದ ನಿನ್ನನ್ನು (ಕಿಂ ಅಮನ್ನತ?) ಏನೆಂದು ತಿಳಿಯುವನು ? ಎಂದರೆ, ನಿನಗೆ ರಾಜ ಧರವು ತಿಳಿಯದೆಂದೂ ಹೇಳುವುದಕ್ಕಿಲ್ಲ! ಗುರುಕುಲವಾಸವನ್ನು ಮಾಡಿ ತಿಳಿಯದವ ನೆಂದೂ ಹೇಳುವುದಕ್ಕಿಲ್ಲ ! ಕುಲಪರಂಪರಾಗತವಾದ ಆಚಾರಸಂಪ್ರದಾಯಗಳನ್ನು ತಿಳಿಯದವನೆಂದೂ ಹೇಳುವುದಕ್ಕಿಲ್ಲ! ಕುಲಸ್ತ್ರೀಯರಿಗೆ ಪತಿಯೊಡಗೂಡಿರಬೇಕಾದುದೇ ಅತ್ಯವಶ್ಯಕವೆಂಬ ಥರ, ವನು ನೀನು ತಿಳಿಯದವನೆಂದೂ ಹೇಳುವುದಕ್ಕಿ! ನೀನು ಏಕ ಪವ್ರತದವನಲ್ಲವೆಂದೂ ಹೇಳುವುದಕ್ಕಿಲ್ಲ! ಈ ಅನುಷ್ಠಾನಗಳೆಲ್ಲವೂ ನಿನ್ನಲ್ಲಿ ತುಂಬಿ ದ್ದರೂ, ಹೀಗೆ ನೀನು ಅನುಚಿತವಾದ ಮಾರ್ಗಕ್ಕೆ ಪ್ರಯತ್ನಿಸಿ ಆತನನ್ನು ಸಂಕಟದಲ್ಲಿ ರಿಸಬೇಕಾದರೆ, ಆತನು ನಿನ್ನಲ್ಲಿ ಯಾವ ಅಭಿಪ್ರಾಯವನ್ನು ಇಡುವನೋ ತಿಳಿಯದೆಂದು ಭಾವವು, ಮತ್ತು. (ಕಿಂತ್ಯಾಮನ್ಯತ) ನಿನ್ನನ್ನು ಅವನು ಏನೆಂದು ತಿಳಿಯುವನು? ಮೊ ದಲುನನ್ನ ತಂದೆಯು ನನ್ನನ್ನು ನಿನ್ನ ಕೈಗೊಪ್ಪಿಸುವಾಗ ಅಯಂ ಸೀತಾ ಮಮ ಸುತಾ” ಇತ್ಯಾದಿವಾಕ್ಯಗಳನ್ನು ಹೇಳಿದಾಗಲೇ ಆತನ ಅಭಿಪ್ರಾಯಗಳೆಲ್ಲವೂ ನಿನಗೆ ತಿಳಿ ದಿರಬಹುದು, ಅಲ್ಲಿ 'ಪಾಣಿಂ ಗೃಹಪಾಣಿನಾ” ಎಂದು ಹೇಳಿದುದರ ಅಭಿಪ್ರಾ ಯವೇನೆಂದು ನೀನು ತಿಳಿಯೆಯಾಗಿ ವಿವಾಹಕಾಲದಲ್ಲಿ ವಧೂವರರು ಒಬ್ಬರಿಗೊಬ್ಬರು ಕೈಹಿಡಿಯಬೇಕೆಂಬುದು ಲೋಕವಿದಿತವಾಗಿಯೇ ಇರುವುದಿಲ್ಲವೇ? ಹೀಗಿದ್ದರೂ ನನ್ನ ತಂದೆಯು ಪುನ: ನಿನ್ನನ್ನು ಕುರಿತು ಕೈಯಿಂದ ಕೈಯನ್ನು ಹಿಡಿಯೆಂದು ಹೇಳಿದುದೇ ಕೆ? ಈ ತೈಲೋಕ್ಯವೂ ಬಂದು ಏಕಕಾಲದಲ್ಲಿ ಮರೆಹೊಕ್ಕರ ಕಾಪಾಡುವಷ್ಟು ನೀ ರವುಳ್ಳ ಈ ನಿನ್ನ ತೋಳುಗಳನ್ನು ನೋಡಿ, ಇವುಗಳ ವಶಕ್ಕೆ ನನ್ನ ನ್ನೊಪ್ಪಿಸಿದರೆ ನಿರ ಪಾಯವಾಗಿ ರಕ್ಷಿಸುವುವೆಂಬ ಆಶೋತ್ತರದಿಂದಲೇ ಆ ಮಾತನ್ನು ಬಾಯಿಂದ ಹೇಳಿ, ನನ್ನನ್ನೊಪ್ಪಿಸಿರುವನು, ಹೀಗಿರುವಾಗ ಇಷ್ಟು ವ್ಯಸನಾವಸ್ಥೆಯಲ್ಲಿರುವ ನನ್ನನ್ನು ನೀನು ನೋಡಿದಮೇಲೆ, ಸಂಗಡಕರೆದುಕೊಂಡು ಹೋಗುವುದು ಹಾಗಿರಲಿ! ಈ ನಿನ್ನ ತೋಳುಗೆ ಆರಡೂ ಬಲಾತ್ಕಾರದಿಂದ ನನ್ನನ್ನು ಹಿಡಿದು ಎತ್ತಿಕೊಂಡು ಹೋಗಬೇಕಾದುದೇ ನ್ಯಾ ಯವಲ್ಲವೆ?ಈ ಅಭಿಪ್ರಾಯದಿಂದಲೇ ನನ್ನ ತಂದೆಯು ಹಿಂದ ನಿನ್ನನ್ನು ಕು ಯಿಂದಲೇ ಹಿಡಿಯೆಂದು ಹೇಳಿರುವನೆಂದು ಭಾವವು, (ತನಿಶ್ಮೀಕಿ). ಅಥವಾ ಮೇಪಿತಾ ತ್ಯಾಂ ಕಮಮನ್ಯತ) ನನ್ನ ತಂದೆಯು ನಿನಗೆ ನನ್ನನ್ನು ಕೊಡು ವಾಗ ನಿನ್ನನು ಏನೆಂದು ತಿಳಿದುಕೊಂಡನೋ ಕಾಣೆನು.ನಿಜವಾಗಿ ನೀನು ಶುರುಷರೇಷ ಧಾರಿಯಾದ ಸ್ತ್ರೀಯೆಂಬುದನ್ನು ಅವನು ತಿಳಿದಿದ್ದರೆ, ನನ್ನನ್ನು ನಿನಗೆ ಕೊಡುತ್ತಲೇ ಇರ ಅಲ್ಲವೆಂದೂ ಭಾವವು,ಅಥವಾ, “ಸ ಏವ ವಾಸುದೇವೋಯಂ ಸಾಕ್ಷಾತ್ಪುರುಷews