ಪುಟ:Mysore-University-Encyclopaedia-Vol-1-Part-1.pdf/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಚಲಗಢ - ಅಚ್ಚಿನ ಧಾರಕ

ಎರಡು ಶಂಕುಜಗಳಾದರೆ, ಎಂಬುದು ಅವುಗಳ ಸಾಮಾನ್ಯ ಸ್ಪರ್ಶರೇಖೆಗಳ ಸಮೀಕರಣ. ಇಲ್ಲಿ ನಿರ್ದೇಶಕಗಳನ್ನು ಸರಳ ಪರಿವರ್ತನೆಯಿಂದ ಪರಿವರ್ತಿಸುವುದರಿಂದ ಎಂಬವು ಆದರೆ, ಸಾಮಾನ್ಯ ಸ್ಪರ್ಶರೇಖೆಗಳ ಸಮೀಕರಣ ಆಗುತ್ತದೆ ಎಂದು ನೋಡಬಹುದು.

ಮತ್ತು ಇವೆರಡೂ ಸಹಚರಗಳು. ಅಚರಗಳ ಹಾಗೂ ಸಹಚರಗಳ ಸ್ವರೂಪ ಒಂದೇ. ಅಕ್ಷರೇಖೆಗಳನನ್ನು ಅಥವಾ ನಿರ್ಧಾರಕಗಲಳನ್ನು ಬದಲಾಯಿಸುವುದರಿಂದ, ಇವುಗಳ ರೂಪ ವ್ಯತ್ಯಸ್ತವಾಗುವುದಿಲ್ಲ. ಅಚರಗಳಲ್ಲಿ ಗುಣಕಗಳು ಮಾತ್ರ ಸೇರಿರುತ್ತವೆ. ಸಹಚರಗಳಲ್ಲಿ ಚರಸಂಖ್ಯೆಗಳೂ ಸೇರಿರುತ್ತವೆ. ಕೊಟ್ಟಿರುವ ರೇಖೆಗಳಿಗೆ ಸಂಬಂಧಿಸುವ ಯಾವುದೇ ಪಥದ ಸಮೀಕರಣ ಆಗಿದ್ದರೆ, ನಿರ್ದೇಶಕಗಳನ್ನು ಬದಲಾಯಿಸುವುದರಿಂದ ಈ ಪಥ ಬದಲಾಯಿಸುವುದಿಲ್ಲವಾಗಿ, ಅದರ ಸಮೀಕರಣ ಮೊದಲ ರೂಪವನ್ನೇ ತಾಳಿರುತ್ತದೆ. ಆದ್ದರಿಂದ ಕೊಟ್ಟ ರೇಖೆಗಳು ಒಂದು ಸಹಚರ.(ಡಿ. ಎಂ)

ಅಚಲಗಢ: ರಾಜಸ್ತಾನದಲ್ಲಿ ಅಬೂಪರ್ವತದಿಂದ ಸು.೬ ಕಿಮೀ ದೂರದಲ್ಲಿರುವ ಒಂದು ಜೈನಕ್ಷೇತ್ರ ಇಲ್ಲಿ ಬಂಗಾರದ ಹಲವು ಜಿನಮೂರ್ತಿಗಳಿವೆ. (ಜೆ.ಬಿ)

ಅಚಲಪುರ : ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯಲ್ಲಿನ ತಾಲ್ಲೂಕು ಕೇಂದ್ರ ಮತ್ತು ಮುಖ್ಯ ಪಟ್ಟಣವಾಗಿದ್ದು ಅಮರಾವತಿಯಿಂದ ೪೮ಕಿಮೀ ದೂರದಲ್ಲಿದೆ. ಜನಸಂಖ್ಯೆ ೧೦೭,೩೦೪ (೨೦೦೧); ವಿಸ್ತೀರ್ಣ ೭ ಚ.ಕಿಮೀ ಸಮುದ್ರ ಮಟ್ಟಕ್ಕಿಂತ ೩೬೬ ಮೀ ಎತ್ತರದಲ್ಲಿರುವ ಇದರ ಸುತ್ತಮುತ್ತಲ ಪ್ರದೇಶ ಹತ್ತಿ ಬೆಳೆಗೆ ಪ್ರಾಮುಖ್ಯ ಪಡೆದಿದೆ. ಹತ್ತಿ, ರೇಷ್ಮೆ ಮತ್ತು ಅರಣ್ಯ ಸಂಪತ್ತಿನ ಪ್ರಮುಖ ವ್ಯಾಪಾರಕೇಂದ್ರ ಐತಿಹಾಸಿಕ ಮಹತ್ವ ಪಡೆದಿದ್ದು, ೧೩೧೮ರಲ್ಲಿ ಹಿಂದೂಗಳಿಂದ ಮುಸಲ್ಮಾನರ ಅಧೀನಕ್ಕೆ ಹೋಯಿತು. ೧೮೬೯ರಲ್ಲಿ ಪೌರಸಭೆ ಸ್ಥಾಪಿಸಲ್ಪಟ್ಟಿತು. ಸಾರಿಗೆ ಹೆದ್ದಾರಿಯ ಮೂಲಕ ಅಮರಾವತಿ ಮತ್ತು ಚಿಕಲಡಗಳಿಗೆ ಸಂಬಂಧ ಹೊಂದಿದೆ. (ಪಿ.ಡಿ.ಎಂ)

ಅಚಲಾನಂದದಾಸ : ಸು೧೫ನೆಯ ಶತಮಾನದಲ್ಲಿದ್ದ ಹರಿದಾಸರು. ದಾಸಸಾಹಿತ್ಯದ ಮೊದಲಿಗರೆಂದೂ ಕಾಲ ೯ನೆಯ ಶತಮಾನವೆಂದೂ ಪ್ರತೀತಿ ಇತ್ತು. ಇವರ ಒಂದು ಉಗಾಭೋಗದ 'ಕೇಳೂ ಜೀವವೆ ನೀ ಮಧ್ವಮತವನನುಸರಿಸಿ, ಶ್ರೀಲೋಲನಂಘ್ರಿಗಳ ನೆನೆದು ಸುಖಿಸೋ' ಎಂಬ ಒಂದು ಪಾದದಲ್ಲಿ ಮಧ್ವಮತದ ಉಲ್ಲೇಖವಿದೆ. ೧೩ನೆಯ ಶತಮಾನದಲ್ಲಿ ಪ್ರಚಾರಕ್ಕೆ ಬಂದ ಮಧ್ವಮತವನ್ನು ೯ನೆಯ ಶತಮಾನದಲ್ಲಿ ಉಗಾಭೋಗಗಳಿದ್ದ ಕುರುಹುಗಳಿಲ್ಲ ವಾದ್ದರಿಂದಲೂ ಇವರ ಕಾಲ ೧೫ನೆಯ ಶತಮಾನಕ್ಕಿಂತ ಹಿಂದೆ ಹೋಗುವುದಿಲ್ಲವೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇವರು ಆಚಲಾನಂದವಿಠಲ ಎಂಬ ಅಂಕಿತವನ್ನಿಟ್ಟುಕೊಂಡು ಪದಗಳನ್ನು ರಚಿಸಿದ್ದಾರೆ. ಪಾತಕರೊಳಗೆಲ್ಲ ನಾನೆ ವೆಗ್ಗಳನಯ್ಯ, ಪ್ರಾಯಶ್ಚಿತಕ್ಕೆ ನಿನ್ನ ನಾಮವೇ ಘನಯ್ಯ, ಪಾತಕವನು ಮಾಡಿದ್ದು ನಾನು, ಪಾತಕ ಪಾವನ ಎರಡೂ ನಿನ್ನಾಧೀನ, ಪಾತಕವೆನಗಿಲ್ಲ ಪ್ರಾಯಶ್ಚಿತ್ತವೆನಗಿಲ್ಲ, ಕೇಳಯ್ಯ ದೇವ ಅಚಲಾನಂದವಿಠಲ ಎಂಬ ಒಂದು ಉಗಾಭೋಗ, ವಚನಗಳ ಶೈಲಿಯನ್ನು ನೆನಪಿಗೆ ತರುತ್ತದೆ. (ಎಚ್. ಆರ್.ಡಿ)

ಅಚ್ಚಿನ ಧಾರಕ : ಚಲಿಸುತ್ತಿರುವ ಯಂತ್ರದ ಒಂದು ಭಾಗಕ್ಕೆ ಆಧಾರವಾಗಿರುವ ಮತ್ತೊಂದು ಯಂತ್ರಭಾಗಕ್ಕೆ ಧಾರಕವೆಂದು (ಬೇರಿಂಗ್) ಹೆಸರು. ಮಟ್ಟ ದಂಡಗಳಿಗೆ (ಹಾರಿಸಾಂಟಲ್ ಷಾಘ್ಟ್) ಆಧಾರವಾಗಿರಲು ಉಪಯೋಗಿಸುವ ಅಚ್ಚಿನ ಧಾರಕದಲ್ಲಿ (ಜರ್ನಲ್ ಬೇರಿಂಗ್) ಆಧಾರ ಒತ್ತಡ ದಂಡದ ಅಕ್ಷಕ್ಕೆ ಲಂಬವಾಗಿದ್ದು, ದಂಡ ಧಾರಕದ ಮೂಲಕ ಹಾದುಹೋಗುತ್ತದೆ. ಈ ಧಾರಕಗಳಲ್ಲಿ ಸರಳ ಅಚ್ಚಿನಧಾರಕ (ಸಿಂಪಲ್ ಜರ್ನಲ್ ಬೇರಿಂಗ್)