ಪುಟ:Banashankari.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨ ಬನಶಂಕರಿ ಯನ್ನು ಗೌರವಿಸಿದವರಲ್ಲ.. ಸಾಲದುದಕ್ಕೆ ಏಕವಚನದ ಸಂಬೋಧನೆ.. ಅಮ್ಮಿ ಮಾತ್ರ ಅವರು ಇವರು ಎಂದು ಮನ್ನಣೆಕೊಟ್ಟು ಮಾತನಾಡಬೇಕು. ಉದ್ದನೆ ಲಂಗೋಟಿಯ ಕೆದರಿದ ಜುಟ್ಟಿನ ಆ ಹುಡುಗರು ಕೀಟಲೆ ಕೊಟು ಅಮ್ಮಿ ಅಳುವಂತೆ ಮಾಡಿ ಓಡಿಹೋದ fರಂತೂ, ಅವರನ್ನು ಹಿಡಿಯುವವರೇ ಇಲ್ಲ - ಮೊದಲು ಮೊಗಸಾಲೆ ಬೆಳಗಿತು.ಬಳಿಕ ಬಾಗಿಲ ಹೊರಗಿನ ಸಾಲು ದೀಪ. ಕೈಗಳಲ್ಲಿ ಪಟಾಕಿಯ ಸರಮಾಲೆ ಹಿಡಿದು ನಾಣಿ-ರಂಗರು ಅರಚಿದರು: ಬೇಗ! ಹೂಂ-ಬೇಗ! ಅವರ ತಂದೆಯ ಸ್ವರ ಮೃದುವಾಗಿ, ಆದರೆ ದೃಢವಾಗಿ, ಕೇಳಿಸಿತು: "ಯಾಕೋ–ಗಲಾಟೆ?ಸುಮ್ನಿರ್ಬಾದೇನೋ ಒಂದ್ನಿಮಿಷ?" ಒಂದು ರೀತಿಯ ಸಂತೋಷ ಅಮ್ಮಿಗೆ.ತಾನು ಅಂಗಳದ ಸಾಲುದೀಪ ಹಚ್ಚಿದ ಮೇಲಲ್ಲವೆ ಅವರು ಪಟಾಕಿ ಹಾರಿಸಬೇಕು? ತನ್ನ ಹಿರಿಮೆಯನ್ನು ಆ ಹುಡುಗರು ಈಗಲಾದರೂ ಒಪ್ಪುವರೆಂದು ಅಮ್ಮಿಗೆ ಸಮಾಧಾನ. ಹೊಸ್ತಿಲು ದಾಟಿ ಅಂಗಳಕ್ಕಿಳಿದು ತುಳಸಿಕಟ್ಟೆಯ ಬಳಿ ಸಾರಿದಳು ఆచ్మి, ಕುಲುಕುಲು ನಗುತ್ತ, ರಂಗ-ನಾಣಿಯರಿಬ್ಬರಿಗೂ ಆ ಅತ್ತಿಗೆಯನ್ನು ಚೆನಾಗಿ ಥಳಿಸಬೇಕು ಎನ್ನುವಷ್ಟು ಸಿಟ್ಟು, ಆದರೆ ಆಗ ಅವರು ಅಸಹಾಯರು.. ಅ೦ಗಳದ ಸುತ್ತಲಿನ ಸಾಲುದೀಪಗಳು ಹತ್ತಿಕೊಂಡ ಮೇಲೆಯೇ ಮೊದಲ ಪಟಾಕಿ ಹಾರಬೇಕು. ಮನೆಯ ಸೊಸೆ ಬೇಕುಬೇಕೆಂದೇ ನಿಧಾನಿಸುತ್ತ, ಕೆಲಸ ಮಾಡಿದಳು. ತನ್ನ ತನ್ನ ಕೈಯಲ್ಲೂ ಪಟಾಕಿ ಚಟ್ ಚಟ್ ಎನ್ನಬೇಕೆಂಬ ಆಸೆ ಅವಳಿಗೆ. ಆದರೆ ಅವಳೀಗ ಬರಿಯ ಹುಡುಗಿಯಲ್ಲ. ಆಕೆ ಪಟಾಕಿ ಕೈಗೆತ್ತಿಕೊಂಡರೆ ಅತ್ರೆ ಮಾವ ಏನೆಂದಾರು? ಈಗ ಹುಡುಗರ ಆಟವನ್ನು ನೋಡುತ್ತ ಗಂಭೀರವಾಗಿ ನಿಲ್ಲುವುದೇ ಅವಳಿಗೆ ಭೂಷಣ. ಹತ್ತು ಹಣತೆಗಳನ್ನು ಹಚ್ಚಿಟ್ಟು, ಅಮ್ಮಿ ಮನೆಯೊಳಕ್ಕೆ ಓಡಬೇಕು. ಇಲ್ಲದೆ

ಹೋದರೆ ಆ ಮೈದುನಂದಿರು ಪಟಾಕಿ ಹಚ್ಚಿ ತನ್ನ ಮೇಲೆ ಎಸೆಯುವುದು ಖಂಡಿತ. ಕೊನೆಯ ದೀಪವೂ ಬೆಳಗಿದ ಮೇಲೆ. ಕೈಯಲ್ಲಿದ್ದ ದೊಡ್ಡ ಹಣತೆಯನ್ನು ఆచ్మి ತುಳಸಿ ಕಟ್ಟೆಯ ಮುಂದಿಟ್ಟళు.

ಕಿರಿಯವನು - ರಂಗ – ಅತ್ತಿಗೆಯನ್ನು ಆಟ್ಟಿಸಿಕೊಂಡೇ ಬಂದ. ಆದರೆ ಅಮ್ಮಿ ಇನ್ನೂ ಸುರಕ್ಷಿತಳು, ತಂದೆಯ ಸಮ್ಮತಿ ದೊರೆತ ಮೇಲಲ್ಲವೆ ಹುಡುಗರು ಪಟಾಕಿ ಹಚ್ಚುವುದು? ಆದರೆ ಅಮ್ಮಿ, ಹೆದರಿಕೊಂಡವಳಂತೆ ನಡಿಸುತ್ತಾ, ನೋಡಿ ಅತ್ತೇ ಎಂದು ದೂರುತ್ತಾ, ಮನೆಯೊಳಕ್ಕೆ ಧಾವಿಸಿದಳು. ಹಿರಿಯವನು -ನಾಣಿ- ಅಂಗೈಯ ಹಿಂಭಾಗದಿಂದ ಸಿಂಬಳ ಒರೆಸುತ್ತಾ ಅಸಹನೆಯ ಧ್ವನಿಯಿಂದ ಬಾರಿ ಬಾರಿಗೂ ಕೇಳಿದ: "ಅಪ್ಪಯ್ಯ, ಹಚ್ಚಲಾ ಅಪ್ಪಯ್ಯ ? ಅಪ್ಪಯ್ಯ..." ಮಧ್ಯ ವಯಸ್ಸಿನ ಆ ದಂಪತಿ ಬಾಗಿಲ ಹೊರಬಂದು ನಿಂತರು. ಅಮ್ಮಿ ಅತ್ತೆಯ ಅತ್ತೆಯ ಸೆರಗು ಹಿಡಿದು ಹಿಂಬದಿಯಿಂದ ಇಣಕಿ ಇಣಕಿ ನೋಡಿದಳು. “ಹುಷಾರಿ ರಂಗಾ, ಹುಷಾರಿ ನಾಣಿ, ಛಾವಣಿ ಹುಲ್ಲು ಹುಷಾರಿ, ಅಂಗ