ಪುಟ:Abhaya.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೦೬ ಅಭಯ

ದೊಡ್ಡಮ್ಮನ ಪ್ರಸ್ತಾಪವೂ ತುಂಗಮ್ಮನ ಆತ್ಮೀಯತೆಯ ಧ್ವನಿಯೂ ಕಾವೇರಿಯ ಮೇಲೆ ಒಳ್ಳೆಯ ಪರಿಣಾಮವನ್ನುಂಟುಮಾಡಿದುವು. ಹಿಂದೆ, ಸರಸಮ್ಮ ಜಲಜೆಯ ದೊಡ್ಡಮ್ಮನೇ ಇರಬೇಕೆಂದು ತಾನು ಭಾವಿಸಿದ್ದ ಹಾಗೆ, ಈಗ ಈ ಹುಡುಗಿ, ಮೇಟ್ರನ್ ತನ್ನ ದೊಡ್ಡಮ್ಮನೆಂದು ಭಾವಿಸಿರ ಬಹುದೆಂದು ತುಂಗಮ್ಮ ಊಹಿಸಿಕೊಂಡು ಮನಸಿನಲ್ಲೆ ನಕ್ಕಳು.

"ಹ್ಯಾಗಾದರೂ ಮಾಡಿ ನನ್ನ ಬಿಡಿಸಿ, ನಿಮಗೆ ಈ ಬಳೆ ಕೊಡ್ತೀನಿ. ನಿಮಗೆ ಏನು ಬೇಕಾದರೂ ಕೊಡ್ತೀನಿ ನೀವು ಹೇಳಿದ್ಹಾಗೆ ಕೇಳ್ತೀನಿ.” ತುಂಗಮ್ಮನಿಗೆ ನಗು ತಡೆಯಲಾಗಲಿಲ್ಲ. ಲಂಚ ಗಿ೦ಚ ಏನೂ ಕೊಡೋಕಾದ್ದಿಲ್ಲವನ್ನು ನೀನು !” ಕಾವೇರಿಗೆ, ತಾನು ಹಾಗೆ ಹೇಳಿದುದು ತಪ್ಪಾಯಿತೆಂದು ಮನವರಿಕೆ ಯಾಯಿತು.

ಸುಲಭವಾಗಿ ಆ ಹುಡುಗಿಯ ವಿಶ್ವಾಸಕ್ಕೆ ಪಾತ್ರಳಾದ ತುಂಗಮ್ಮ ಮತ್ತೊಂದು ಪ್ರಶ್ನೆ ಕೇಳಿದಳು: "ನೀವು ಯಾರ್ಯಾರಿದೀರಾ ಮನೇಲಿ ”? ನಮ್ತಂದೆ - ತಾಯಿ, ಅಕ್ಕ - ಅಣ್ಣ, ಇಬ್ಬರು ತಮ್ಮಂದಿರು. ಮುಂದಿನ ತಿಂಗಳು ನಮ್ಮಕ್ಕನಿಗೆ ಮದುವೆ ಬೇರೆ ಗೊತ್ತಾಗಿದೆ.” ಆ ಮಾತಿನ ಜತೆಯಲ್ಲಿ ಅಳು....

ತುಂಗಮ್ಮ ನಿಟ್ಟುಸಿರು ಬಿಟ್ಟು, ಸರನಮ್ಮನ ಕೊಠಡಿಗೆ ನಡೆದಳು. ಜಲಜೆ ಬರುವವರೆಗೆ ಕಾಯುವುದಕ್ಕೂ ಆಕೆ ಸಿದ್ಧಳಿರಲಿಲ್ಲ. ತುಂಗಮ್ಮನ ಮಾತಿಗೆ ಕಿವಿಗೊಟ್ಟ ಬಳಿಕ ಸರಸಮ್ಮ ಮೃದುವಾಗಿ ಹೇಳಿದರು : "ನನಗೂ ಹಾಗೆ ತೋರಿತ್ತು ತುಂಗ. ಏನಾದರೂ ಮಾಡೋಣ. ಇಷ್ಟು ಹೊತ್ತಿಗಾಗಲೇ ಆ ಹುಡುಗಿ ತಂದೆ ಪೋಲೀಸರಿಗೆ ದೂರು ಕೊಟ್ಟಿರ್ತಾರೆ.” “ ತಂದೆಗೆ ತಿಳಿದ ಹಾಗೇನೆ ಆಕೆ ಮನೆಗೆ ಹೋಗೋಕೆ ಆಗಲ್ವೆ ದೊಡ್ಡಮ್ಮ ?”” ಆ ಪ್ರಶ್ನೆ ಸರಸಮ್ಮನಿಗೆ ಹಿಡಿಸಲಿಲ್ಲ.