ಪುಟ:Vimoochane.pdf/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಗಿದ್ದ ನನಗೆ ಎಚ್ಚರವಾಯಿತು.

"ಕಂಠಿ ! ಏನಾಯ್ತು? ಏನು?"

"ಕುಶಾಲು ತೋಫು ಹಾರಿಸಿದರು ಕಣೋ. ಸ್ವಾತಂತ್ರ್ಯ ಬಂದು ಆಗಲೇ ಒಂದು ನಿಮಿಷವಾಯ್ತು. ಸ್ವಾತಂತ್ರ್ಯ ಬಂದ ಶುಭ ಘಳಿಗೇಲೆ ನಿದ್ದೆ ಹೋದೆಯಲ್ಲೊ ಭೂಪ!"

ನಾನು ಆಕಳಿಸಿದೆ.

"ಬಾ ಚಂದ್ರೂ.........ಡಾನ್ಸಿಂಗ್ ಹಾಲ್ನಲ್ಲಿ ವಂದೇ ಮಾತರಂ ಹಾಡ್ತಿದಾರೆ ಬಾ....."

ನಾನು ಅವನನ್ನು ಹಿಂಬಾಲಿಸಿದೆ.

"ಸಸ್ಯ ಶ್ಯಾಮಲಾ ಮಾತರಂ-ವಂದೇ ಮಾತರಂ...... ........

ನಾವು ಬೀದಿಗಿಳಿದೆವು. ಜನ ಹುಚ್ಚೆದ್ದು ಕುಣಿದಾಡುತಿದ್ದರು. ಅವರೊಡನೆ ಬೆರೆಯಬೇಕೆಂಬ ಆಸೆಯಾಯಿತು ನನಗೆ. ಆ ಪ್ರವಾಹ ದೊಡನೆ ತೇಲಿಹೋಗುವುದೇ ಜೀವನವೋ ಏನೊ! ಜನರ ಅಳುವಿ ನೊಡನೆ ನಗುವಿನೊಡನೆ ಸಹಭಾಗಿಯಾಗುವುದು........ಜನರು ಇದು ಸ್ವಾತಂತ್ರ್ಯವೆಂದು ನಂಬಿ ಸಂತೋಷಪಡುತ್ತಿರುವಾಗ ನಾನೂ ಸಂ ತೋಷ ಪಡಬೇಕು. ಅದು ಕ್ಷೆಣಿಕವಾದರೆ ಕ್ಷಣಿಕವಾಗಲಿ. ತಪ್ಪೇನು ಅದರಲ್ಲಿ?

"ಕಂಠಿ....ಇಲ್ನೋಡು, ಎಷ್ಟೊಂದು ಜನ ಸಂತೋಷ ದಿಂದಿದಾರೆ"

"ಎಲ್ಲಿ?"

"ಈ ಬೀದೀಲಿ"

"ಇವರ್ನ ಜನರೂಂತ ಕರೀತಿಯೇನು?...........ಹುಂ. ಇನ್ನು ಇವರ್ಜತೇಲಿ ಕುಣಿಯೋಣ ಅಂತ ಬೇರೆ ಹೇಳ್ಬೇಡ."

ನನ್ನ ಉಸಿರು ಕಟ್ಟಿಹೋಯಿತು.

"ಚಂದ್ರೂ, ಯಾಕೋ ಮೈಭಾರವಾಗ್ತಿದೆ. ಡ್ರೈವ್ ಮಾಡೋ ಸ್ಠಿತೀಲಿ ಇದೀಯೊ?"