ಪುಟ:Abhaya.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೦

ಅಭಯ

ವಾದ ಮಾತುಗಳು...ಅಭಯಧಾಮಕ್ಕೆ ಸರಕಾರವೂ ಸಾರ್ವಜನಿಕರೂ ನೀಡುತಿದ್ದ ನೆರವು...ಸಮಾಜದಲ್ಲಿ ಅಧೋಗತಿಗಿಳಿಯುತಿದ್ದ ನೀತಿಯ ಮಟ್ಟ.

ಏನನ್ನು ಮಾತನಾಡಿದರೂ ತಮ್ಮದೇ ಪ್ರಶ್ನೆ ಮತ್ತೆ ಮತ್ತೆ ತುಂಗಮ್ಮನ ತಂದೆಯ ಕಣ್ಣೆದುರು ಬಂದು ನಿಲ್ಲುತಿತ್ತು.

" ಹೀಗಾಗುತ್ತೇಂತ ನಾನು ಭಾವಿಸಿರ್‍ಲಿಲ್ಲ ಅಮ್ಮ..

ಆ ಹೆಣ್ಣಿನ ತಂದೆಗೆ ಮನಸ್ಸಮಾಧಾನವಾಗುವಂಶಹದೇನನ್ನಾದರೂ ಹೇಳಬೇಕೆಂದು ಸರಸಮ್ಮ ಅಪೇಕ್ಷೆ ಪಟ್ಟರು.

"ನೀವು ತಪ್ಪುತಿಳೀಬಾರ್‍ದು. ನಿಮ್ಮ ಮಗಳು ಒಳ್ಳೆಯವಳು. ಏನೋ ಅಚಾತುರ್ಯದಿಂದ ಹಾಗಾಯ್ತು ನಂಬಿಕೆ-ಮೋಸ. ಏನ್ಮಾಡೋದ ಕ್ಕಾಗತ್ತೆ ಹೇಳಿ?...ಆದರೆ ಇಷ್ಟು ಮಾತ್ರ ನಿಜ ಆಕೆ ಸದ್ಗುಣ ಸಂಪನ್ನೆ. ಆಕೆಯ ತಾಯ್ತಂದೆಯರು ಭಾಗ್ಯವಂತರು."

" ಒಳ್ಳೇ ಹೇಳಿದಿರಿ!"

__ಎಂದರು ತುಂಗಮ್ಮನತಂದೆ ಒಣನಗೆನಕ್ಕು.

ಸರಸಮ್ಮನ ಸ್ವಾಭಿಮಾನವನ್ನು ಕೆಣಕಿದಂತಾಯಿತು

"ಯಾಕೆ ಹಾಗಂತೀರಾ? ಸಭ್ಯ ಗೃಹಸ್ಥರು ಅನ್ನಿಸಿಕೊಂಡ ದೊಡ್ಡೋರ ನೂರು ಮನೆತನಗಳ ಸಾವಿರ ಹುಳುಕು ತೋರಿಸಿ ಕೊಡ್ಲೇನು? ದುಡ್ಡಿದೆ, ಪ್ರಭಾವ ಇದೆ, ಅಂತ ಮುಚ್ಚೊಂಡು ಹೋಗುತ್ತೆ!"

ತುಂಗಮ್ಮನ ತಂದೆ ತಲೆದೂಗಿದರು. ಸರಸಮ್ಮ ಆಡಿದ ಮಾತು ನಿಜವಾಗಿತ್ತು.

....ತನ್ನ ಮಗಳ ಬಾಳ್ವೆಯ ಆ ಪ್ರಕರಣವನ್ನೂ ಹಾಗೆಯೇ ಸುಲಭ ವಾಗಿ ಮುಚ್ಚಿಕೊಂಡು ಹೋಗುವುದು ಸಾಧ್ಯವಾಗಿದ್ದರೆ?

"ಅಮ್ಮ, ಏನೇನಾಯ್ತೂಂತ ತುಂಗ ಎಲ್ಲ ಹೇಳಿದಾಳಾ?"

"ಹೇಳಿದಾಳೆ. "

" ಹೆರಿಗೆ__"

" ಸುಲಭವಾಗಿರ್‍ಲಿಲ್ಲ. ಸಾಧ್ಯವಿರೋದನ್ನೆಲ್ಲಾ ಮಾಡಿದ್ವಿ....ಮಗೂನ ಉಳಿಸಿಕೊಳ್ಳೋದಕ್ಕಾಗ್ಲಿಲ್ಲ."