ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೦.) ಅಯೋಧ್ಯಾಕಾಂಡವು. ಕೋಸ್ಕರವಾಗಿಯೇ ಹೊರತು ಬೇರೆಯಲ್ಲ. ಆದರೆ ನಮ್ಮ ತಂದೆಯಾದ ದಶರಥನೇ ಅವರಿಬ್ಬರನ್ನೂ ಭರಿಸಲಾರನೆ ?” ಎಂದು ನೀವು ಕೇಳಬಹುದು. ಮಳೆಯನ್ನು ಸುರಿಸುತ್ತಿರುವ ಪರ್ಜನ್ಯನಂತೆ ನಮ್ಮ ತಂದೆಯು ಆಿತರ ಕೋರಿಕೆಗಳೆಲ್ಲವನ್ನೂ ಈಡೇರಿಸಿ, ಅವರನ್ನು ಪ್ರೀತಿಯಿಂದ ಪೋಷಿಸುವ ನೆಂಬುದರಲ್ಲಿ ಸಂದೇಹವಿಲ್ಲ. ಇದರಮೇಲೆ ಆತನು ಮಹಾತೇಜಸ್ವಿಯೆಂಬುದ ರಲ್ಲಿಯೂ ಸಂಶಯವಿಲ್ಲ. ಆದರೆ ಆತನು ಕೈಕೇಯಿಯಿಂದ ಕಾಮಪಾಶ ದಲ್ಲಿ ಕಟ್ಟಲ್ಪಟ್ಟಿರುವನು. ಅಶ್ವಪತಿಯ ಮಗಳಾದ ಆಕೆಯಾದರೆ, ಈ ರಾಜ್ಯವೆಲ್ಲವನ್ನೂ ತನ್ನ ಮಗನ ವಶಕ್ಕೆ ಒಪ್ಪಿಸಿಬಿಟ್ಟಮೇಲೆ, ತಾನೇ ಸತ್ವ ಸ್ವಾತಂತ್ರ್ಯವನ್ನೂ ವಹಿಸುವಳು. ಆಕೆಯು ಸವತಿಯರನ್ನು ಪ್ರೇಮದಿಂದ ಪೋಷಿಸುವಳೆಂಬುದೇ ಅಸಂಭವವು!ನಮ್ಮಿಬ್ಬರ ಅಗಲಿಕೆಯಿಂದ ಎಡೆಬಿಡದೆ ಕೊರಗುತ್ತಿರುವ ನಮ್ಮ ಮಾತೆಯರಿಬ್ಬರನ್ನೂ ಆಕೆಯು ಮನಸ್ಸಿನಿಂದಲೂ ಸ್ಮರಿಸಲಾರಳು. ಭರತನು ರಾಜ್ಯಾಧಿಕಾರಕ್ಕೆ ಬಂದಮೇಲೆ ಅವನ ತಾಯಿಯ ಮನೋಭಿಪ್ರಾಯವನ್ನನುಸರಿಸಿಯೇ ನಡೆಯುವನು. ಆದುದರಿಂದ ನಮ್ಮ ಲಕ್ಷಣಾ! ನೀನು ಇಲ್ಲಿಯೇ ಇದ್ದುಕೊಂಡು, ರಾಜಾನುಗ್ರಹವನ್ನು ಸಂಪಾ ದಿಸಿ, ಪೂಜ್ಯರಾದ ನಮ್ಮ ಮಾತೆಯರಿಬ್ಬರನ್ನೂ ಪೋಷಿಸುವುದುತ್ತಮವ ಲ್ಲವೆ? ನೀನು ಇದಿರು ಮಾತನಾಡದೆ ನಾನು ಹೇಳಿದಂತೆ ನಡೆಸು. ನಿನ್ನ ಶುಕ್ರೂಷೆಯೊಂದನ್ನೇ ಅಪೇಕ್ಷಿಸುತ್ತಿರುವ ನನಗೆ ಇತರರ ಚಿಂತೆಯೇಕೆ?”ಎಂ ದು ನೀನು ಕೇಳಬಹುದು. ನೀನು ಸಮಸ್ತಧಗಳನ್ನೂ ತಿಳಿದವನು, ನನ್ನ ಮಾತಿನಂತೆ ನಡೆಯಬೇಕಾದುದೂ ನಿನ್ನ ಕೃತ್ಯವಲ್ಲವೆ? ಈಗ ನಾನು ಹೇಳುವ ಈ ಕೆಲಸವನ್ನು ನೀರು ಮಾಡುತಿದ್ದರೆ, ನನ್ನ ಶುಶೂಷೆಯನ್ನು ನಡೆಸಿ ದಂತೆಯೇ ಆಗುವುದಲ್ಲವೆ? ನನ್ನಲ್ಲಿರುವ ಭಕ್ತಿಗೆ ಇದೇ ಸಂಪೂವಾದ ನಿದ ರ್ಶನವು, ಮತ್ತು ಮಾತೃಶುಶೂಷೆಯೆಂಬುದಕ್ಕಿಂತಲೂ ಉತ್ತಮವಾದ ಧರವು ಲೋಕದಲ್ಲಿ ಬೇರೆ ಯಾವುದುಂಟು? ನೀನು ಈ ಕಾವ್ಯವನ್ನು ಮಾ ಡುವುದರಿಂದ ನನಗೆ ಮಾತ್ರವೇ ಅಲ್ಲದೆ, ನಮ್ಮ ರಘುವಂಶಕ್ಕೆ ಸಂತೋಷವ ನುಂಟುಮಾಡಿದಂತಾಗುವುದು. ನಾವಿಬ್ಬರೂ ಬಿಟ್ಟು ಹೋದಮೇಲೆ ನಮ್ಮ ಮಾತೆಯರಿಗೆ ಸುಖವೆಂಬುದನ್ನು ಕನಸಿನಲ್ಲಿಯ ಎಣಿಸಬೇಡ.” ಎಂದನು.