ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ಶ್ರೀಮದ್ರಾಮಾಂಕುರ [ಹರ್ಸ, ೩೪. ಮಿತ್ರರೆಲ್ಲರನ್ನೂ ನೋಡಿ, ವನಪ್ರಯಾಣಕ್ಕಾಗಿ ಅವರವರ ಅನುಮತಿಯ ನ್ಯೂ ಪಡೆದು ಇಲ್ಲಿಗೆ ಬಂದಿರುವನು. ಈಗಲೇ ಆತನು ವನಪ್ರಯಾಣ ಸಿದ್ಧನಾಗಿ ನಿಂತಿರುವುದರಿಂದ, ಸೂಯ್ಯನು ಕಿರಣಗಳಿಂದ ಕೂಡಿ ಪ್ರಕಾಶಿಸುವಂತೆ, ಸಮಸ್ತರಾಜಗುಣಗಳಿಂದಲೂ, ಪ್ರಕಾಶಿಸುತ್ತಿರುವ ಆತನನ್ನು ಕರೆಯಿಸಿ ನೋಡು” ಎಂದನು. ದಶರಥನಾದರೋ ಸತ್ಯವನ್ನು ಎಂದಿಗೂ ಮೀರತಕ್ಕವನಲ್ಲ. ಲೋಕದಲ್ಲಿ ತಾನೇ ಥರ ಸ್ವರೂಪನೆನಿ ಚಿಕೊಂಡಿರುವನು. ಗಾಂಭೀರದಲ್ಲಿ ಸಮುದ್ರದಂತಿರುವನು. ಅಕಾಶದಂ ತೆ ನಿರಲನಾಗಿರುವನು. ಹೀಗೆ ಗುಣಾಡ್ಯನಾದ ದಶರಥನು ಸುಮಂತ್ರ ನನ್ನು ಕುರಿತು, ಎಲೈ ಸೂತನೆ ! ನನ್ನ ಪತ್ನಿ ಯರೆಲ್ಲರನ್ನೂ ಇಲ್ಲಿಗೆ ಕರೆಸು. ಇನ್ನೂ ನನ್ನ ಸಂಬಂಧಿಗಳು ಯಾರುಂಟೋ ಅವರೆಲ್ಲರನ್ನೂ ಈಗಲೇ ಕರೆ ದುಕೊಂಡುಬಾ ! ಅವರೆಲ್ಲರೊಡಗೂಡಿಯೇ ರಾಮನನ್ನು ನೋಡಬೇಕೆಂದಿ ರುವೆನು.” ಎಂದನು. ಇದನ್ನು ಕೇಳಿದೊಡನೆ ಸುಮಂತ್ರನು ಅರಮನೆ ಯಿಂದ ಹೊರಟು, ಅಂತಃಪುರಕ್ಕೆ ಹೋಗಿ, ರಾಜಪತ್ತಿ ಯರನ್ನು ಕುರಿತು, ಅಮ್ಮಾ! ರಾಜನು ನಿಮ್ಮನ್ನು ಕರೆಯುವನು! ಈಗಲೇ ನೀವು ಅಲ್ಲಿಗೆ ಬರಬೇ ಕು!” ಎಂದನು.ಇದನ್ನು ಕೇಳಿ ಆ ರಾಜಸ್ತ್ರೀಯರೆಲ್ಲರೂ ರಾಜಾಜ್ಞೆಯನ್ನು ಗೌರವಿಸಿ, ಒಡನೆಯೇ ಅಲ್ಲಿಂದ ಹೊರಟು ದಶರಥನಿದ್ದ ಸ್ಥಳಕ್ಕೆ ಬಂದರು, ಮುನ್ನೂರೈವತ್ತು ಮಂದಿ ರಾಜಸ್ತ್ರೀಯರು' ಕೌಸಲೈಯನ್ನು ಮುಂದಿ ಟ್ಟುಕೊಂಡು ಮೆಲ್ಲಗೆ ಆ ರಾಜಗೃಹಕ್ಕೆ ಬಂದುಸೇರಿದರು. ತನ್ನ ಪತ್ನಿಯ .ರೆಲ್ಲರೂ ಬಂದು ಸೇರಿದಮೇಲೆ, ದಶರಧನು ರಾಮನನ್ನು ಒಳಕ್ಕೆ ಕರೆತರು ವಂತೆ ಸುಮಂತ್ರನಿಗೆ ಆಜ್ಞಾಪಿಸಿದನು ! ಅದರಂತೆಯೇ ಸುಮಂತ್ರನು ಸೀತಾಲಕ್ಷ್ಮಣರೊಡಗೂಡಿದ ರಾಮನನ್ನು ಸಂಗಡಕರೆದುಕೊಂಡು ಬಂದು ದಶರಥನ ಸಮೀಪದಲ್ಲಿ ಬಿಟ್ಟನು. ದೂರದಿಂದಲೇ ಕೈಮುಗಿದುಕೊಂಡು ತನ್ನ ಕಡೆಗೆ ಬರುತ್ತಿರುವ ರಾಮನನ್ನು ಕಂಡೊಡನೆ, ದಶರಥನು ಥಟ್ಟನೆ ತಾನು ಕುಳಿತಿದ್ದ ಅಸನದಿಂದ ಎದ್ದು ನಿಂತು, ಉಕ್ಕಿಬರುತ್ತಿರುವ ಮನಸ್ಸಿನ ಸಂಕಟ ದಿಂದ ಮೈತಿಳಿಯದವನಾಗಿ,ತನ್ನನ್ನು ಸುತ್ತಿದ್ದ ಪತ್ನಿಯರೊಡಗೂಡಿ ಮುಂ ಗೆ ಬಂದನು. ಹೀಗೆ ಅತಿವೇಗದಿಂದ ರಾಮನಿಗೆ ಅಭಿಮುಖವಾಗಿ ಓಡಿಬರುವು ಪ್ರಯತ್ನಿಸಿ, ಹಾಗೆಯೇ ವ್ಯಸನದಿಂದ ಮೂರ್ಛಯನ್ನು ಹೊಂದಿ