ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wv ಶ್ರೀಮದ್ರಾಮಾಯಣವು [ಸರ್ಗ ೩೦. ವನ್ನೇ ಕೆಡಿಸುವಹಾಗಿದೆ ! ಮಹೇಂದ್ರನಂತೆ ಇತರರಿಂದ ಜಯಿಸಲಸಾಧ್ಯ ನಾಗಿಯೂ, ಪರತದಂತೆ ಕದಲಿಸಲಾರದವನಾಗಿಯೂ, ಮಹಾಸಾಗರ .ದಂತೆ ಇತರರಿಂದ ಭಹೊಂದಿಸುವುದಕ್ಕೆ ಅಸಾಧ್ಯನಾಗಿಯೂ ಇ ರುವ ಮಹಾಢೀರನಾದ ದಶರಥನನ್ನೇ ನೀನು ಹೀಗೆ ನಿನ್ನ ದುಷ್ಟಾಗ ಳಿಂದ ಸಂಕಟಪಡಿಸುವೆಯಲ್ಲವೆ ? ಇದು ನಿನಗೆ ಎಂದಿಗೂ ಉಚಿತವಲ್ಲ. ಕೋರಿದ ಕೋರಿಕೆಗಳೆಲ್ಲವನ್ನೂ ಆಗಾಗ ನಡೆಸಿಕೊಟ್ಟು, ನಿನ್ನನ್ನು ಎ ಜ್ಯೋಪ್ರೇಮದಿಂದ ಪೋಷಿಸುತ್ತಿರುವ ಪತಿಯಾದ ದಶರಥನಿಗೇ ನೀನು ಹೀಗೆ ಅವಮಾನವನ್ನು ತಂದಿಡುವದಕ್ಕೆ ಪ್ರಯತ್ನಿಸಬಹುದೆ ? ಲೋಕದಲ್ಲಿ ಸ್ತ್ರೀಯರಿಗೆ ತಮ್ಮ ತಮ್ಮ ಮಕ್ಕಳ ಮನಸ್ಸನ್ನನುವರ್ತಿಸಿ ನಡೆಯುವುದಕ್ಕಿಂ ತಲೂ ಪತಿಯ ಇಷ್ಟಾನುಸಾರವಾಗಿ ನಡೆಯುವುದೇ ವಿಶೇಷಶ್ರೇಯಸ್ಕರವು. ಕೋಟಿಕೋಟೆಪುತ್ರರಿದ್ದರೂ ಪತಿಯ ಪಾದಚ್ಛಾಯೆಯನ್ನನುಸರಿಸಿ ನಡೆ ಯುವುದೇ ಅವರಿಗೆ ಮೇಲಾದ ಧರವು, ರಾಜವಂಶಕ್ಕೆ ಕುಲಕ್ರಮಾಗತ ವಾಗಿ ಬಂದಿರುವ ಸಂಪ್ರದಾಯವನ್ನು ನೀನೂ ತಿಳಿದಿರುವೆ? ರಾಜನಾದವನು ರಾಜ್ಯವನ್ನು ಬಿಟ್ಟು ಹೋಗುವಾಗ, ತನ್ನ ಮಕ್ಕಳಲ್ಲಿ ವಯಸ್ತಾರತಮ್ಯವನ್ನು ನೋಡಿ ಹಿರಿಯನಾದವನಿಗೆ ರಾಜ್ಯವನ್ನು ಒಪ್ಪಿಸಬೇಕಾದುದು ನ್ಯಾಯ ವಲ್ಲವೆ ? ಈ ರಾಜಧರವನ್ನು ಲೋಕೋತ್ತರವಾದ ಈ ಇಕ್ಷಾಕುವಂಶದ ಅಯೇ ತಪ್ಪಿಸಬೇಕೆಂದೆಣಿಸಿರುವೆಯಾ ? ಅದರಲ್ಲಿಯೂ ಈಗ ನೀನು ನಿನ್ನ ಪತಿಯನ್ನೇ ಅಪವಾದಕ್ಕೆ ಈಡುಮಾಡಬೇಕೆಂದೆಣಿಸಿರುವಯಲ್ಲಾ ! ಹೇ ಗಾದರೂ ನೀನು ನಿನ್ನ ಹಟವನ್ನು ಬಿಡದೆ ಭರತನಿಗೇ ರಾಜ್ಯವನ್ನು ಕೊಡಿ ಸಬೇಕೆಂದು ನಿಶ್ಚಯಿಸಿರುವುದಾದರೆ,ಹಾಗೆಯೇ ಮಾಡು! ನಿನ್ನ ಮಗನಾದ ಭರತನೇ ರಾಜನಾಗಿರಲಿ ! ಆತನೇ ರಾಜ್ಯವನ್ನಾಳುತ್ತಿರಲಿ! ಆಗ ನಾವೊಬ್ಬ ರೂ ಇಲ್ಲಿ ನಿಲ್ಲುವವರಲ್ಲ. ರಾಮನು ಹೋದಕಡೆಗೆ ನಾವೂ ಹೋಗುವೆವು ! ನಮ್ಮ ವಿಷಯವೂ ಹಾಗಿರಲಿ ! ಈ ನಿನ್ನ ದೇಶದೊಳಗೆ ಒಬ್ಬ ಬ್ರಾಹ್ಮಣ ನನ್ನಾದರೂ ನೀನು ಕಾಣಲಾರೆ ! ಎಲೆ ಕೈಕೇಯಿ! ನೀನು ಮತ್ಯಾದೆಯನ್ನು ಯೋಚಿಸದೆ ಎಂತಹ ಕೂರಕಾರವನ್ನು ಆರಂಭಿಸಿದೆ ! ನಿನ್ನ ಈ ನಡತೆ ಯನ್ನು ನೋಡಿ ನನಗೆ ಪರಮಾಶ್ಚರ್ಯವುಂಟಾಗಿರುವುದು. ಇಂತಹ ಕ್ರೂ ರಸ್ವಭಾವೆಯಾದ ನಿನ್ನನ್ನು ಇನ್ನೂ ಈ ಭೂಮಿಯು ಬಾಯಿಬಿಟ್ಟು ನುಂಗಿ