ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಸರ್ಗ. ೩೭.! ಅಯೋಧ್ಯಾಕಾಂಡವು. ಈಕಕುತ್ಸ ವಂಶದ ಮಯ್ಯಾದೆಯನ್ನು ಎಂದಿಗೂಬಿಟ್ಟು ಹೋಗಲಾರನು. ನೀನು ನಿನ್ನ ಮಗನಲ್ಲಿರುವ ವಿಶೇಷವಾತ್ಸಲ್ಯದಿಂದ ರಾಮನನ್ನು ಹೊರಡಿಸಿ, ಭರತ ನಿಗೆ ರಾಜ್ಯವನ್ನು ಕೊಡಿಸುವ ಪ್ರಯತ್ನವನ್ನು ಮಾಡಿದರೂ,ಭರತನು ಎಂ ದಿಗೂ ತನ್ನ ಅಣ್ಣನನ್ನು ಅನುವರಿಸದಿರಲಾರನು. ಭರತನ ಮಾತು ಹಾಗಿ ರಲಿ! ಈ ಲೋಕದಲ್ಲಿ ನೀನೊಬ್ಬಳುಹೊರತು ರಾಮನನ್ನ ನವರಿಸಿ ನಡೆಯ ದಿರುವವರು ಯಾರೂ ಇಲ್ಲವೆಂದೇ ತಿಳಿ! ನೀನು ಭರತನ ಹಿತಕ್ಕಾಗಿ ಈಗ ಯಾವ ಪ್ರಯತ್ನವನ್ನು ಮಾಡಿರುವೆಯೋ, ಅವೆಲ್ಲವೂ ಆತನಿಗೆ ಆಪ್ರಿಯ ವಾಗುವುದೆಂಬುದರಲ್ಲಿ ಸಂದೇಹವಿಲ್ಲ. ಎಲೆ ಕೈಕೇಯಿ! ಹೆಚ್ಚಾಗಿ ಹೇಳಿದುದ ರಿಂದೇನು? ಈ ಪಟ್ಟಣದಲ್ಲಿರತಕ್ಕ ಮನುಷ್ಯವರ್ಗವು ಮಾತ್ರವೇ ಅಲ್ಲ ! ಅಜ್ಞಾನಿಜಂತುಗಳಾದ ಪಶುಪಕ್ಷಿ ಮೃಗಾದಿಗಳೂ, ಆ ರಾಮನನ್ನೇ ಹಿಂಬಾ ಶಿಸಿಹೋಗುವುದನ್ನು ಈಗಲೇ ನೀನು ನೋಡುವೆ.ಕೊನೆಗೆ ಅಚೇತನಗಳಾದ ವೃಕ್ಷಗಳೂ ಕೂಡ, ತಮಗೆ ಸಂಚಾರಶಕ್ತಿಯಿಲ್ಲದಿದ್ದರೂ, ಆತನು ಹೋಗು ತಿರುವಕಡೆಗೆ ಅಭಿಮುಖಗಳಾಗಿ, ಆತನಲ್ಲಿ ತಮಗಿರುವ ಅನುರಾಗವನ್ನು ತೋ ರಿಸದೆಬಿಡವು, ಎಲೆ ದೇವಿ! ಆದುದರಿಂದ ಈ ನಿನ್ನ ಕೌರವನ್ನು ಇಷ್ಟಕ್ಕೇ ನಿಲ್ಲಿಸು! ಈಗ ನಿನ್ನ ಸೊಸೆಗೆ ಉಡಿಸುತ್ತಿರುವ ನಾರುಮಡಿಯನ್ನು ತೆಗೆದು. ಉತ್ತಮವಾದ ಆಭರಣಗಳನ್ನು ಕೊಡು! ಈಕೆಗೆ ನಾರುಮಡಿಯು ಎಂದಿಗೂ ಉಚಿತವಲ್ಲ”ಎಂದು ಬಹಳವಾಗಿ ನಿಷೇಧಿಸಿ ಪುನಃ ಕೈಕೇಯಿಯನ್ನು ನೋಡಿ, ಎಲೆ ಕೈಕೇಯಿ! ನೀನು ಕಾಡಿನಲ್ಲಿರಿಸಬೇಕೆಂದು ಅಪೇಕ್ಷಿಸಿದುದು ರಾಮ ನೊಬ್ಬನನ್ನೇ ಅಲ್ಲವೆ?ಸೀತೆಯು ಹಾಗಿರಬೇಕಾದ ನಿರ್ಬಂಥವೇನೂಇಲ್ಲವಷ್ಟೆ? ಆದುದರಿಂದ ಪ್ರತಿನಿತ್ಯವೂ ಆಭರಣಾದಿಗಳಿಂದ ಅಲಂಕರಿಸಲ್ಪಡುವುದಕ್ಕೆ ಯೋಗ್ಯಳಾದ ಈಕೆಯು, ರಾಜಯೋಗ್ಯಗಳಾದ ಆಭರಣಗಳೊಡನೆಯೇ ರಾಮನನ್ನು ಹಿಂಬಾಲಿಸಿಹೋಗಲಿ!ಮತ್ತು ಈ ರಾಜಕುಮಾರಿಯು ಉತ್ತಮ ವಾಹನಗಳನ್ನೂ, ಪರಿಜನರುಗಳನ್ನೂ , ವಿಚಿತ್ರವಸ್ತ್ರಗಳನ್ನೂ, ಇನ್ನೂ ಬೇ ಕಾದ ಉಪಕರಣಗಳನ್ನೂ ಸಂಗಡ ತೆಗೆದುಕೊಂಡು ಹೋಗುವಂತೆ ಅನು ಗ್ರಹಿಸು, ನೀನು ವರಗಳನ್ನು ಕೇಳುವಾಗ ಸೀತೆಯನ್ನು ಕಳುಹಿಸಬೇಕೆಂದು ಕೇಳಿಲ್ಲವಷ್ಟೆ? ಆದುದರಿಂದ ಇವಳನ್ನು ಯಾವವಿಷಯದಲ್ಲಿಯೂ ನೀನು ನಿರ್ಬಂಥಿಸಕೂಡದು” ಎಂದನು. ದಶರಥನಿಗೆ ಕುಲಗುರುವಾಗಿ, ಎಣೆಯಿಲ್ಲದ