ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು [ಸರ್ಗ, ೪೦. ದನ್ನೂ ನೋಡಿದನು. ಹಗ್ಗದಿಂದ ಕಟ್ಟಿಹಾಕಲ್ಪಟ್ಟ ಕುದುರೆಯ ಮರಿಯು ದೂರದಲ್ಲಿರುವ ತನ್ನ ತಾಯಿಯನ್ನು ನೋಡಿ ತಿಳಿಸುವಂತೆ,ಧರ ಪಾಶದ ಲ್ಲಿ ಕಟ್ಟಲ್ಪಟ್ಟ ರಾಮನು, ದುಃಖಿತರಾಗಿ ತನ್ನ ರಥವನ್ನು ಹಿಂಬಾಲಿಸಿ ಬ ರುತ್ತಿರುವ ತನ್ನ ತಾಯಿತಂದೆಗಳನ್ನು ಕಡೆಗಣ್ಣಿನಿಂದ ನೋಡುತ್ತ ಮುಂದೆ ಸಾಗುತ್ತಿದ್ದನು. ಯಾವಾಗಲೂ ವಾಹನಾರೂಢರಾಗಿಯೇ ಹೊರ ಡುತಿದ್ದ ತನ್ನ ತಾಯಿತಂದೆಗಳು, ಹೀಗೆ ಕಾಲುನಡೆಯಿಂದಲೇ ಬೀದಿಯಲ್ಲಿ ಬರುತ್ತಿರುವುದನ್ನೂ, ಹುಟ್ಟಿದುದುಮೊದಲು ದುಃಖವೆಂಬುದನ್ನೇ ಕಂಡರಿ ಯಿದ ಅವರಿಬ್ಬರೂ ಈಗ ಮಹಾವ್ಯಸನದಿಂದ ಕೊರಗುತ್ತಿರುವುದನ್ನೂ ನೋಡಿ ಸಹಿಸಲಾರದೆ,ಸುಮಂತ್ರನನ್ನು ಬೇಗ ನಡೆ”ಯೆಂದು ಬಹಳವಾಗಿ ತ್ವರಪಡಿಸುತಿದ್ದನು. ರಾಮನು ಪುರುಷಶ್ರೇಷ್ಠನೆನಿಸಿಕೊಂಡು ಎಷ್ಟೇ ಗಂಭೀರಸ್ವಭಾವವುಳ್ಳವನಾಗಿದ್ದರೂ, ತನ್ನ ತಾಯಿತಂದೆಗಳ ದುಃಖವನ್ನು ನೋಡಿ ತಾನೂ ಸಮದುಃಖಿತನಾದನು, ಕಶೆಯಿಂದ ಹೊಡೆಯಲ್ಪಟ್ಟ ಆನೆಯಂತೆ ಆ ದುಃಖವನ್ನು ಸಹಿಸಲಾರದೆ,ಕಣ್ಮರೆಯಾಗಿ ಹೊರಟುಹೋಗ ಬೇಕೆಂದು ಆತುರಪಡುತಿದ್ದನು. ರಾಮನ ರಥವು ವೇಗವಾಗಿ ಓಡುತ್ತಿದ್ದ ಸ್ಕೂ, ಹಸುವು ತನ್ನ ಕರುವನ್ನು ನೆನೆಸಿಕೊಂಡು ಓಡಿಬರುವಂತೆ, ಕೌಸಲ್ಯ ಯು ಆದನ್ನು ಹಿಂಬಾಲಿಸಿ ತಾನೂ ಓಡಿಬರುತಿದ್ದಳು. ಹೀಗೆ ಮೈತಿಳಿಯದೆ (“ಹಾ ರಾಮಾ! ಹಾ ಸೀತೇ! ಹಾ ಲಕ್ಷಣಾ!”ಎಂದು ಕೌಸಿಯು ಕೂ ಗಿಡುತ್ತಾ ಕಣ್ಣಿನಲ್ಲಿ ನೀರುತುಂಬಿಕೊಂಡು ಓಡಿಬರುತಿದ್ದುದನ್ನೂ, ದುಃಖಾ ತಿಶಯನಂದ ಕಣಿವಾಡುವವಳಂತೆ ನಿಂತಕಡೆಯಲ್ಲಿ ನಿಲ್ಲದೆ, ತನ್ನ ರಥವನ್ನು ಹಿಂಬಾಲಿಸಿ ಬರುತ್ತಿರುವುದನ್ನೂ , ರಾಮನು ಆಗಾಗ ಹಿಂತಿರುಗಿ ನೋಡು ತ ಸಾರಥಿಯನ್ನು ನಡೆನಡೆ” ಎಂದು ಊರೆಪಡಿಸುತಿದ್ದನು. ದಶರಥನು ನಿಲ್ಲುಸಿಲೆಂದು ಹಿಂದೆ ಕೂಗಿಕೊಳ್ಳುತಿದ್ದನು, ಸುಮಂತ್ರನಿಗೆ ಯಾವು ದೊಂದೂ ತೋರಲಿಲ್ಲ. ರಥದ ಹಿಂದುಮುಂದಿನ ಚಕ್ರಗಳ ನಡುವೆ ಸಿಕ್ಕಿ ಕೊಂಡು.ಅತ್ತಿತ್ತ ಚಲಿಸಲಾರದೆ ಭಯದಿಂದ ತತ್ತಳಿಸುತ್ತಿರುವ ಮನುಷ್ಯ ನಂತೆ,ಆ ಸಾರಥಿಯ ಮನಸ್ಸು ಈ ಉಭಯಸಂಕಟದಲ್ಲಿ ಸಿಕ್ಕಿಕೊಂಡು ತಮ್ಮ ಳಿಸುತ್ತಿತ್ತು.ಆಗ ರಾಮನು ಹೀಗೆ ಕಳವಳಿಸುತ್ತಿರುವ ಸಾರಥಿಯನ್ನು ನೋಡಿ 4(ಎಲೆ ಸೂತನೆ! ಇದೇಕೆ ಹೀಗೆ ಭಯಪಡುವೆ? ನೀನುರಥವನ್ನು ನಿಲ್ಲಿಸಬೇಡ!