ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

WE' ಸರ್ಗ, ೪೨] ಅಯೋಧ್ಯಾಕಾಂಡವು. ಣ್ಣತಮ್ಮಂದಿರಲ್ಲಿದ್ದ ಸಹೋದರಪ್ರೀತಿಯೂ ತಪ್ಪಿಹೋಯಿತು. ಅಲ್ಲಿದ್ದವ ರೆಲ್ಲರೂ ತಮಗೆ ಬೇಕಾದುದೆಲ್ಲವನ್ನೂ ಬಿಟ್ಟು ರಾಮನೊಬ್ಬನನ್ನೇ ಚಿಂತಿಸಿ ಹಂಬಲಿಸುತಿದ್ದರು. ಇದಲ್ಲದೆ ರಾಮನಲ್ಲಿ ವಿಶೇಷಸ್ನೇಹವನ್ನು ಬಳೆಸಿ, ಆತ ನಿಗೆ ಪ್ರಿಯಮಿತ್ರರಾದವರೆಲ್ಲರೂ ಹುಚ್ಚ ಹಿಡಿದವರಂತೆ ಹಿಂದುಮುಂದು ತೋರದೆ, ದುಃಖಾತಿಶಯದಿಂದ ಎದ್ದು ನಿಲ್ಲಲಾರದೆ, ವ್ಯಾಧಿಪೀಡಿತರಂತೆ ಮ ಲಗಿದ್ದರು. ಹೀಗೆ ಮಹಾತ್ಮನಾದ ರಾಮನಿಂದ ಬಿಡಲ್ಪಟ್ಟ ಅಯೋಧ್ಯಾನ ಗರವು, ತ್ರಿಲೋಕಾಧಿಪತಿಯಾದ ಇಂದ್ರನಿಲ್ಲದ ಕಾಲದಲ್ಲಿ ಈ ಭೂಮಂಡಲ ವೆಲ್ಲವೂ ನಿರಾಶ್ರಯವಾಗಿ ವ್ಯಾಕುಲಪಡುವಂತೆ, ಭಯಶಕಗಳಿಂದ ಪೀ ಡಿತವಾಗಿ, ಗಜತುರಗಪದಾತಿಸೈನ್ಯಸಹಿತವಾಗಿ ಕಳವಳಿಸಿ, ದೊಡ್ಡ ಆಕ್ರಂ ದನಧ್ವನಿಯನ್ನು ಮಾಡುತಿತ್ತು. ಇಲ್ಲಿಗೆ ನಾಲ್ವತ್ತೊಂದನೆಯ ಸರ್ಗವು. - ರಾಮನು ಕಾಡಿಗೆ ಹೋದಮೇಲೆ ದಶರಥನ ವಿಲಾಪವು, xw ' ರಾಮನು ಪಟ್ಟಣವನ್ನು ಬಿಟ್ಟು ಹೋಗುತ್ತಿರುವಾಗ, ಆತನ ರಥವೇಗ ದಿಂದುಂಟಾದ ಧೂಳಿನ ರಾಶಿ ಯು ಕಣ್ಣಿಗೆ ಕಾಣುತ್ತಿರುವವರೆಗೂ, ದಶರಥನು ಆ ಕಡೆ ಯನ್ನೇ ನೋಡುತಿದ್ದನೇ ಹೊರತು, ಅಲ್ಲಿ ನಟ್ಟ ದೃಷ್ಟಿಯನ್ನು ಅತ್ತಿತ್ತ ಕದಲಿಸಲೇ ಇಲ್ಲ. ಪ್ರಿಯತ್ರನಾಗಿಯೂ, ಪರಮಧಾರಿಕನಾಗಿಯೂ ಇರುವ ರಾಮನನ್ನು ಕಾಣದೆ ಸಂಕಟಪಡುತ್ತಿರುವ ದಶರಥನಿಗೆ, ಸ್ವಲ್ಪ ಕಾಲದವರೆಗಾದರೂ ಆಪ್ಯಾಯನವನ್ನುಂಟುಮಾಡುಬೇಕೆಂಬುದಕ್ಕಾಗಿ, ಆ ರಾಮನ ರಥದಿಂದ ದೊಡ್ಡ ಥಳಿಯು ಮೇಲಕ್ಕೆದ್ದು, ಆರಾಮನು ಹೋಗ ತಕ್ಕದಾರಿಯನ್ನು ದಶರಥನಿಗೆ ತೋರಿಸುತ್ತಿರುವಂತೆ, ದಶರಥನ ದೃಷ್ಟಿಯು ಬಿಳುವವರೆಗೂ ಆರಜಸ್ಸು ಸುತ್ತಲೂ ವ್ಯಾಪಿಸಿತು. ಕೊನೆಗೆ ರಾಮನ ರಥವೇಗದಿಂದುಂಟಾದ ಆ ರಜೋರಾಶಿಯಕೂಡ ಕಣ್ಣಿಗೆ ಬೀಳದಂತಾಗ ಲು, ದಶರಥನು ಮಹಾವ್ಯಸನದಲ್ಲಿ ಮುಳುಗಿದವನಾಗಿ, ಹಾಗೆಯೇ ಪ್ರಜ್ಞೆ ತಪ್ಪಿ ನೆಲದಮೇಲೆ ಬಿದ್ದನು. ಒಡನೆಯೇ ಕೌಸಿಯು ಆತನನ್ನೆತ್ತಿ ಹಿಡಿಯು ವುದಕ್ಕಾಗಿ ಅವನ ಬಲತೋಳನ್ನು ಹಿಡಿದಳು. ಎಡಭಾಗದಲ್ಲಿ ಕೈಕೇಯಿಯ