ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SA೬ WA& ಶ್ರೀಮದ್ರಾಮಾಯಣವು [ಸರ್ಗ, ೪೩. ಎಷ್ಮೆ ಕೋಪವಿದ್ದರೂ ಬಿಟ್ಟು, ದಯೆಯಿಂದ ನನ್ನ ಮೈಯ್ಯನ್ನು ನಿನ್ನ ಕೆಯಿಂದ ಸ್ಪರ್ಶಿಸು.ಆದರಿಂದಲಾದರೂ ನನ್ನ ಸಂಕಟವು ಸ್ವಲ್ಪಮಟ್ಟಿಗೆ ತಗ್ಗುವುದೋ ನೋಡುವೆನು”ಎಂದನು. ಹೀಗೆ ಹಾಸಿಗೆಯಲ್ಲಿ ಮಲಗಿ, ರಾಮ ನನ್ನೆ ಹಂಬಲಿಸುತ್ತಿರುವ ರಾಜನನ್ನು ನೋಡಿ, ಕೌಸಲ್ಯಯು ಆತನ ಸಮೀ ಪದಲ್ಲಿ ಬಂದು ಕುಳಿತು,ತಾನೂ ವ್ಯಸನವನ್ನು ತಡೆಯಲಾರದೆ ಆಗಾಗ ನಿಟ್ಟು, ಸಿರನ್ನು ಬಿಡುತ್ತಾ ವಿಲಪಿಸುತಿದ್ದಳು. ಇಲ್ಲಿಗೆ ನಾಲ್ವತ್ತೆರಡನೆಯ ಸರ್ಗವು. w+{** (ಆಸಿಯು ದತರಥನೊಡನೆ ರಾಮನ ಗುಣಗಳ ) ನ್ನು ಹೇಳಿ ದುಃಖಿಸಿದುದು. ww 'ಹಾಗೆಯೇ ಕೌಸಿಯೂ ಪುತ್ರಶೋಕದಿಂದ ಪೀಡಿತಳಾಗಿ, ಹಾಸಿಗೆ ಯಲ್ಲಿ ದುಃಖದಿಂದ ಮಲಗಿರುವ ದಶರಥವನ್ನು ನೋಡಿ, ಆರನೆ ! ಕೈಕೇ ಯಿಯು ಪುರುಷಶ್ರೇಷ್ಠನಾದ ರಾಮನಿಗೆ ತನ್ನ ಕುಟಿಲಸ್ವಭಾವವೆಂಬ ವಿಷ ವನ್ನು ಪ್ರಯೋಗಿಸಿಬಿಟ್ಟಳು. ಪರೆಯನ್ನು ಸುಲಿದ ಹಾವಿನಂತೆ ಇನ್ನು ಅವ ಳು ಸುಖವಾಗಿ ವಿಹರಿಸಬಹುದು.ಒಳಗೆ ವಿಷವನ್ನು ತುಂಬಿಕೊಂಡಿದ್ದರೂ, ಮೇಲೆಮಾತ್ರ ಮನೋಹರಾಕಾರವುಳ್ಳ ಆಕೆಯು, ರಾಮನನ್ನು ಕಾಡುಪಾ ಲುಮಾಡಿ ತನ್ನ ಕೋರಿಕೆಯನ್ನು ಕೈಗೂಡಿಸಿಕೊಂಡುಬಿಟ್ಟಳು, ಮನೆಯೊ ಭಗೆ ಸೇರಿಕೊಂಡಿರುವ ಕೆಟ್ಟ ಹಾವಿನಂತೆ ಇನ್ನು ಮೇಲೆ ನಮಗೂ ಯಾವ ಆ ಸಾಯವನ್ನು ತರುವಳೋ ಎಂದು ಭಯಪಡಬೇಕಾಗಿದೆ! ಭರತನಿಗೆ ಅವಶ್ಯ ವಾಗಿ ರಾಜ್ಯವನ್ನು ಕೊಡಿಸಬೇಕೆಂದು ಆಕಗೆ ಉದ್ದೇಶವಿದ್ದರೂ, ನನ್ನ ಮಗ ನಾದ ರಾಮನನ್ನು ಕಾಡಿಗೆ ಕಳುಹಿಸಿದುದೇಕೋ ಕಾಣೆನು!ಒಂದುವೇಳೆ ರಾ ಮನನ್ನು ಅರಮನೆಗೆ ಸೇರಿಸದೆ, ಆತನಿಗೆ ಅನ್ನವನ್ನೂ ಹಾಕದೆ ಈ ಪಟ್ಟಣದಲ್ಲಿ ಮನೆಮನೆಗೆ ಹೋಗಿ ಭಿಕ್ಷೆಯೆತ್ತಿ ಜೀವಿಸಬೇಕೆಂದು ಹೇಳಿದ್ದರೂ ಉತ್ತಮ ವಾಗಿತ್ತು. ಅಥವಾ ಭರತನಿಗೆ ದಾಸ್ಯವನ್ನು ಮಾಡುತ್ತಿರಬೇಕೆಂದು ಹೇಳಿ ಲ್ಮೀಕಿಯು, ದಶರಥಾದಿಗಳು ಮಾತಾಡಿಕೊಂಡರೆಂಬ ವ್ಯಾಜದಿಂದ, ಮಾತುಮಾತಿಗೂ ತಾನೇ ಆ ಪರತ್ವವನ್ನು 'ಅನುಸಂಧಿಸುವನೇಹೊರತು ಬೇರೆಯಲ್ಲವೆಂದು ಗ್ರಹಿಸ ಬೇಕು.