ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

822 ಸರ್ಗ, ೪೪. ಅಯೋಧ್ಯಾಕಾಂಡವು, ವೂ ಆಯಾಕಾಲಕ್ಕೆ ತಕ್ಕಂತೆ ಆತನ ಮೈಗೆ ಹಿತಕರವಾದ ಶೀತೋಷ್ಟ ತಿಯನ್ನನುಸರಿಸಿ ತನ್ನ ಬಿರುಸನ್ನು ಬಿಟ್ಟು ಮೆಲ್ಲಗೆ ಬೀಸುವನು. ತಂದೆತಾ ಯಿಗಳು ಪ್ರೀತಿಯಿಂದ ಕೈನೀಡಿ ಮಕ್ಕಳನ್ನಪ್ಪಿಕೊಳ್ಳುವಂತೆ, “ ಚಂದ್ರನು ರಾತ್ರಿಕಾಲಗಳಲ್ಲಿ ಮಲಗಿರುವ ರಾಮನ ಮೈಯ್ಯನ್ನು ತನ್ನ ತಂಪಾದ ಕಿರಣ ಗಳಿಂದ ಆಲಿಂಗಿಸಿ ಸಂತೋಷಪಡಿಸುವನು “ಪೂರದಲ್ಲಿ ರಾಮನು ಶಂಬರಾ ಸುರನ ಮಗನನ್ನು ಕೊಂಬಾಗ, ಬ್ರಹ್ಮನು ಪ್ರಸನ್ನ ನಾಗಿ ಈತನಿಗೆ ಅನೇಕದಿ. ವ್ಯಾಸಗಳನ್ನು ಕೊಟ್ಟಿರುವನಲ್ಲವೆ? ಆದುದರಿಂದ ನಿನ್ನ ಮಗನಾದ ರಾಮನ ಶೌಲ್ಯಕ್ಕೆ ಎಲ್ಲಿಯೂ ತಡೆಯಿರುವುದಿಲ್ಲ. ಕಾಡಿನಲ್ಲಿದ್ದರೂ ಆತನಿಗೆ ಯಾವು ದೊಂದು ಭಯವೂ ಸಂಭವಿಸದು, ಆತನ ಬಾಹುಬಲವೇ ಅವನಿಗೆ ಮುಖ್ಯ ಸಹಾಯಕವಾಗಿರುವುದರಿಂದ, ಅವನು ತನ್ನ ರಕ್ಷಣೆಗಾಗಿ ಬೇರೊಬ್ಬರನ್ನು ಆಶ್ರಯಿಸಬೇಕಾದುದಿಲ್ಲ.ಅವನು ಕಾಡಿನಲ್ಲಿದ್ದರೂ ಅರಮನೆಯಲ್ಲಿದ್ದಂತೆಯೇ ನಿರ್ಭಯನಾಗಿರುವನೆಂದು ತಿಳಿ!ಇಲ್ಲಿ ಭರತನು ಕೋಸಲರಾಜ್ಯದಲ್ಲಿ ಬೇರೂರಿ ನಿಂತಮೇಲೆ, ರಾಮನಿಗೆ ರಾಜ್ಯದ ಆಸೆಯೇ ಇಲ್ಲವೆಂದು ನೀನು ಭ್ರಮೆಗೊಂ ಡಿರಬಹುದು! ಆ ಶಂಕೆಯನ್ನೂ ಬಿಟ್ಟುಬಿಡು. ರಾಮನ ಬಾಣಕ್ಕೆ ಇದಿರಾಗಿ

  • ಇಲ್ಲಿ “ಏತಸ್ಯವಾ ಅಕ್ಷರಸ್ಯ ಪ್ರತಾಸನೇ ಗಾರ್ಗಿಸಲ್ಯಾಚಂದ್ರಮಸ್‌ವಿಧ್ವತ್ ತಿಷ್ಠತ:”ಎಂಬ ಶ್ರುತರವನ್ನೂ ಹಿಸಿಕೊಳ್ಳಬೇಕು.
  • ಇಲ್ಲಿ ಬ್ರಹ್ಮನು ಮಾಡತಕ್ಕ ಕಿಂಚಿತ್ಕಾರವು ಸೂಚಿತವಾಗಿದೆ. ಇದೇ ಕಾಂಡದಲ್ಲಿ ಹಿಂದೆ (ವೈಜಂಗಂತಮಿತಿ ಖ್ಯಾತಂ ಪರಂ ಯತ್ರ ತಿಮಿಧ್ವಜ: ” ಎಂಬುದಾಗಿ, ವೈಜ ಯಂತಪುರದಲ್ಲಿ ತಿಮಿಧ್ವಜನೆಂಬ ನಾಮಾಂತರವುಳ್ಳ ಶಂಬರಾಸುರನೊಡನೆ ದಶರಥನು ಯುದ್ಧ ಮಾಡಿದುದಾಗಿ ಹೇಳಲ್ಪಟ್ಟಿರುವುದು ಈಗ ರಾಮನು ಆತನ ಮಗನನ್ನು ಕೊಂ ದುದಾಗಿ ಹೇಳಲ್ಪಟ್ಟಿದೆ. ಈ ವಿಷಯವು ಮೊದಲು ಹೇಳಲ್ಪಡದಿರುವುದೇಕೆಂದು ಶಂಕೆ ಯುಂಟಾಗಬಹುದು, ಆದರೆ, 'ಯದಾ ವ್ರಜತಿ ಸಂಗ್ರಾಮಂ ಗ್ರಾಮಾರೇ ನಗರ ಸವಾ | ಗಾಸ್ಮಿ ತ್ರಿಸಹಿತೋ ನಾವಿಜಿ ನಿವರ್ತತೇ!!?? “ಯುದ್ಧವು ಸಂಭವಿಸಿ ದಾಗ ತಾನು ಲಕ್ಷಕಸಹಿತನಾಗಿ ಹೊರಟರೆ, ಜಯಹೊಂದದೆ ಹಿಂತಿರುಗುವವನಲ್ಲ' ವೆಂದು ಕಕಾಂಡದಲ್ಲಿಯೇ ಸಾಮಾನ್ಯವಾಗಿ ತಿಳಿಸಲ್ಪಟ್ಟಿರುವುದರಿಂದ, ಅದರಲ್ಲಿ ಈ ವಿಷ ಯವೂ ಅಂತರ್ಗತವಾಗಿರುವುದೆಂದೂ, ಇಲ್ಲಿ ಪ್ರಸ್ತಾವವಶದಿಂದ ವಿಶ್ಲೇಷಿಸಿ ಹೇಳಿದ ದಾಗಿಯೂ ತಿಳಿಯಬೇಕು.