ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೭೮ ಶ್ರೀಮದ್ರಾಮಾಯಣವು [ಸರ್ಗ, ೪೫, ಮಾನ್ಯನೆಂದು ತಿಳಿಯಬೇಡಿರಿ! ಆತನು ಬಹಳ ಶುಭಚರಿತ್ರವುಳಳ್ಳವನು? ನಿಮ ಗೆ ಪ್ರಿಯವಾದ ಕಾವ್ಯಗಳನ್ನು ಲೋಪವಿಲ್ಲದೆ ನಡೆಸತಕ್ಕವನು. ಆತನು ವಯಸ್ಸಿನಲ್ಲಿ ಬಾಲನಾಗಿದ್ದರೂ ಜ್ಞಾನದಲ್ಲಿ ವೃದ್ಧನು. ಮಹಾವೀರವುಳ್ಳ ವನಾಗಿದ್ದರೂ ಬಹುಮೃದುಸ್ವಭಾವವುಳ್ಳವನು. ಆತನೇ ನಿಮಗೆ ತಕ್ಕ ಪ್ರಭುವು, ಅವನು ನಿಮ್ಮ ಸಮಸ್ತಭಯಗಳನ್ನೂ ಹೋಗಲಾಡಿಸಬಲ್ಲನು. ಸಮಸ್ತರಾಜಗುಣಗಳೂ ಆತನಲ್ಲಿ ತುಂಬಿರುವುವು. ತಂದೆಯಾದ ದಶರಥನ ಆಜ್ಞೆಯಂತೆಯೇ ಆತನು ಯುವರಾಜಪಟ್ಟದಲ್ಲಿಡಲ್ಪಟ್ಟಿರುವನು. ಮುಖ್ಯ ವಾಗಿ, ನಾನಾಗಲಿ, ನೀವಾಗಲಿ, ಭರತಶತ್ರುಸ್ಸು ರಾಗಲಿ ಪ್ರಭುವಾದ ಆ ದಶರಥನಾಜ್ಞೆಯಂತೆ ನಡೆಯಬೇಕಾದುದೇ ನ್ಯಾಯವಲ್ಲವೆ ? ಆದುದರಿಂದ ನಾನು ಕಾಡಿಗೆ ಹೊರಟುಹೋದಮೇಲೆ, ಆತನ ಪ್ರಜೆಗಳಾದ ನೀವು, ಅವ ನ ಆಜ್ಞೆಯನ್ನು ಉಲ್ಲಂಘಿಸಿದ ಪಕ್ಷದಲ್ಲಿ, ಆತನು ಬಹಳವಾಗಿ ಸಂಕಟಪಡು ವನು. ರಾಜಾಧಿರಾಜನಾದ ಆತನಿಗೆ ಮನಸ್ಸಂಕಟವನ್ನುಂಟುಮಾಡುವುದು ನಮಗೆ ನ್ಯಾಯವಲ್ಲ. ನನಗೆ ಪ್ರಿಯವನ್ನು ಮಾಡಬೇಕೆಂಬುದೇ ನಿಮಗೆ ನಿಜ ವಾದ ಅಭಿಪ್ರಾಯವಾಗಿದ್ದಲ್ಲಿ, ದಶರಥನ ಮನೋನುವರ್ತಿಗಳಾಗಿರಿ ! ಇದೇ ನಿಮ್ಮ ಮುಖ್ಯ ಕಾರವು” ಎಂದನು. ಹೀಗೆ ರಾಮನು ಪಿತೃವಾಕ್ಯ ಪರಿಶಾಲನವೆಂಬ ಥರದಲ್ಲಿಯೇ ಸ್ಥಿರವಾಗಿ ನಿಂತು, ಪ್ರಜೆಗಳಿಗೆ ಎಷ್ಟೆಷ್ಟು ಬುದ್ಧಿವಾದಗಳನ್ನು ಹೇಳುತಿದ್ದನೋ, ಪ್ರಜೆಗಳೂ ರಾಮನನ್ನು ಆಷ್ಟೆಷ್ಟು ನಿರ್ಬಂಧಿಸುತ್ತಾ, ಆತನನ್ನೇ ಯುವರಾಜನಾಗಿರಬೇಕೆಂದು ಪ್ರಾಸುತಿ ಈರು. ಆ ಜನರಲ್ಲಿ ಒಬ್ಬೊಬ್ಬರೂ ಕಣ್ಣಿನಲ್ಲಿ ನೀರನ್ನು ಸುರಿಸಿ, ಬಹಳ ದೈನ್ಯದಿಂದ ರಾಮನನ್ನು ಬಿಡದೆ ಹಿಂಬಾಲಿಸುತ್ತಲೇ ಇದ್ದರು. ಇದನ್ನು ನೋಡಿದರೆ, ಆ ರಾಮಲಕ್ಷ್ಮಣರಿಬ್ಬರೂ ತಮ್ಮ ಸದ್ಗುಣಗಳೆಂಬ ಹಗ್ಗ ಳಿಂದ ಆ ಪರವಾನಿಗಳನ್ನು ಕಟ್ಟಿ ಎಳೆದುಕೊಂಡು ಹೋಗುವಂತೆ ತೋರು ತಿತ್ತು. ಆ ಜನಗಳ ಮಧ್ಯದಲ್ಲಿ ಜ್ಞಾನವೃದ್ಯರಾಗಿಯೂ, ವಯೋವೃದ್ಧರಾ ಗಿಯೂ, ತಪೋವೃದ್ಧರಾಗಿಯೂ ಇದ್ದ ಕೆಲವು ಬ್ರಾಹ್ಮಣರು, ತಮ್ಮ ಮಿತಿ ಮೀರಿದ ವಾರ್ಧಕಾವಸ್ಥೆಯಿಂದ ನಡುಗುತ್ತಿರುವ ತಲೆಯುಳ್ಳವರಾಗಿ, ತಾವು ಕೇವಲದುರ್ಬಲರಾಗಿದ್ದರೂ ತಮ್ಮ ಶಕ್ತಿ ಮೀರಿ ಬಹುದೂರದಿಂದಲೇ ಕೂಗಿ