ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S ಶ್ರೀಮದ್ರಾಮಾಯಣವು [ಸರ್ಗ, ೪೬ ವರು. ಆದುದರಿಂದ ನೀನು ಆ ಕಡೆಗೆ ಬಹುವೇಗವಾಗಿ ರಥವನ್ನು ನಡೆಸಿ ಕೊಂಡು ಹೋಗಿ, ಅಲ್ಲಿಂದ ಬೇರೆವಾರಿಯನ್ನು ಹಿಡಿದು, ಇತ್ತಲಾಗಿ ಹಿಂತಿ ರುಗಿ ಬಿಡು! ಮುಖ್ಯವಾಗಿ ನಾನು ಕಾಡಿಗೆ ಹೋದುದು ಈ ಪುರವಾಸಿಗಳಿ ಗೆ ತಿಳಿಯದಂತೆ ಮಾಡು” ಎಂದನು. ಅದರಂತೆಯೇ ಸುಮಂತ್ರನು ತಾನೊ ಬ್ಬನೇ ರಥದಲ್ಲಿ ಕುಳಿತು, ಅದನ್ನು ಉತ್ತರದಿಕ್ಕಿಗೆ ಬಿಟ್ಟುಕೊಂಡುಹೋಗಿ, ಹಿಂತಿರುಗಿ ಬಂದು ರಾಮನಿಗೊಪ್ಪಿಸಿದನು. ಆಮೇಲೆ ಸೀತೆಯೊಡಗೂಡಿ ರಾ ಮಲಕ್ಷ್ಮಣರಿಬ್ಬರೂ ರಥವನ್ನೇರಲು, ಸುಮಂತ್ರನು ಆ ರಥವನ್ನು ತ ಪೋವನಕ್ಕೆ ಅಭಿಮುಖವಾಗಿ ಬಿಡುವುದಕ್ಕೆ ಮೊದಲು, ಪ್ರಯಾಣಕಾಲಕ್ಕೆ ಉಚಿತವಾದ ಶುಭಸೂಚನೆಗಳನ್ನು ಕಾಣಬೇಕೆಂಬುದಕ್ಕಾಗಿ, ಅದನ್ನು ಈ ತರಾಭಿಮುಖವಾಗಿ ತಿರುಗಿಸಿಟ್ಟನು. ಆಮೇಲೆ ಅವರೆಲ್ಲರೂ ಕಾಡಿಗೆ ಅಭಿ ಮುಖವಾಗಿ ಹೊರಟರು. ಇಲ್ಲಿಗೆ ನಾಲ್ವತ್ತಾರನೆಯ ಸರವು. +++: ( ರಾಮನಿಂದ ವಂಚಿಸಲ್ಪಟ್ಟ ಪ್ರಜೆಗಳು ದುಃಖದಿಂದ ) * ( ಅಯೋಧ್ಯೆಗೆ ಹಿಂತಿರುಗಿದುದು. •w ಅಯೋಧ್ಯೆಗೆ ಹಿಂತಿರುಗಿದುದ ಬೆಳಗಾದಕೂಡಲೆ ಅಲ್ಲಿ ಮಲಗಿದ್ದ ಪುರವಾಸಿಗಳೆಲ್ಲರೂ ಎಚ್ಚರ ಗೊಂಡು,ರಾಮನನ್ನು ಕಾಣದೆ, ದುಃಖದಿಂದ ಏನೊಂದೂ ತೋರದೆ, ಸಬ್ಬ ರಾಗಿದ್ದರು.ಒಬ್ಬೊಬ್ಬರ ಕಣ್ಣಿನಲ್ಲಿಯೂ ದುಃಖಬಾಷ್ಪವುಸುರಿಯುತ್ತಿತ್ತು. ಒಬ್ಬೊಬ್ಬರೂ ಅಲ್ಲಲ್ಲಿ ಹುಡುಕುವುದಕ್ಕಾರಂಭಿಸಿದರು. ರಾಮನುಹೋದದಾ ರಿಯನ್ನು ತಿಳಿಸತಕ್ಕ ಚಿಕ್ಕ ವೊಂದೂ ಕಾಣಲಿಲ್ಲ. ಅವರೆಲ್ಲರೂ ದುಃಖ ದಿಂದ ಕಂದಿದ ಮುಖವುಳ್ಳವರಾಗಿ, ರಾಮನ ಅಗಲಿಕೆಯನ್ನು ಸಹಿಸಲಾರದೆ ಬಹುದೈನ್ಯದಿಂದ ವಿಲಪಿಸುತ್ತಾ, ಒಬ್ಬರಿಗೊಬ್ಬರು ವ್ಯಸನವಾರೆಗಳನ್ನು ಹೇಳಿಕೊಳ್ಳುತ್ತಿದ್ದರು. “ಛೇ! ನಮಗೆ ಈ ಹಾಳುನಿದ್ರೆಯೇಕೆ ಬಂದಿತು! ಮ ಹಾಪಾಪಿಷ್ಟವಾದ ಅನಿದ್ರೆಯು ನಮಗೆ ಮೈಮೇಲೆ ಜ್ಞಾನವಿಲ್ಲದಂತೆಮಾಡಿ ದುದರಿಂದಲ್ಲವೇ ಹೀಗಾಯಿತು!ಉಬ್ಬಿದ ಹೆಗಲುಳ್ಳವನಾಗಿಯೂ, ಮಹಾಬಾ ಹುವಾಗಿಯೂ ಇರುವ ರಾಮನನ್ನು ಅಗಲಿಸುವುದಕ್ಕೆ ಈನಿದ್ರೆಯೇ ಕಾರಣ