ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಳ ಸರ್ಗ, ೪೭.} ಅಯೋಧ್ಯಾಕಾಂಡವು. ವಾಯಿತು ! ಅಥವಾ ನಮ್ಮ ನಿದ್ರೆಯನ್ನೇಕೆ ನಿಂದಿಸಬೇಕು ! ಆಿತವತ್ಸಲ ನೆಂದು ಪ್ರಸಿದ್ದಿಯನ್ನು ಹೊಂದಿದ ಆ ರಾಮನು,ನಂಬಿಬಂದ ನಮ್ಮನ್ನು ಹೀ ಗೆ ಬಿಟ್ಟು ಹೋಗಬಹುದೇ?ತಂದೆಯು ಹೊಟ್ಟೆಯಲ್ಲಿ ಹುಟ್ಟಿದಮಕ್ಕಳನ್ನು ಕಾ ಪಾಡುವಂತೆ ಆತನು ನಮ್ಮನ್ನು ಕಾಪಾಡುತಿದ್ದನಲ್ಲಾ! ರಘುವಂಶಶ್ರೇಷ್ಠ ನಾದ ಆರಾಮವು ನಮ್ಮನ್ನು ಬಿಟ್ಟು ಹೇಗೆತಾನೇ ಕಾಡಿಗೆ ಹೋದನು? ಈಗ ನಾವು ಇಲ್ಲಿಯೇ ಪ್ರಾಯೋಪವೇಶವನ್ನು ಮಾಡಿ ಸಾಯುವುದೇ ಮೇಲು! ಥವಾ ಮರಣದೀಕ್ಷೆಯನ್ನು ಕೈಕೊಂಡು, ಉತ್ತರಾಭಿಮುಖವಾಗಿ ಹೊರಟು ಮಹಾಪ್ರಸ್ಥಾನವನ್ನು ಮಾಡಿ ಪ್ರಾಣವನ್ನು ಬಿಡುವುದಾದರೂ ಉತ್ತಮವು.' ರಾಮನನ್ನು ಬಿಟ್ಟು ನಾವು ಇನ್ನೂ ಬದುಕಿರುವುದೇಕೆ ? ಅಥವಾ ಇದೊ ಇಲ್ಲಿ ಬೇಕಾದಷ್ಟು ಕಟ್ಟಿಗೆಗಳು ಸಿಕ್ಕುವುವು. ಚಿತೆಯನ್ನೊಡ್ಡಿ ನಾವೆಲ್ಲರೂ ಒಟ್ಟಿಗೆ ಬೆಂಕಿಯಲ್ಲಿ ಬಿದ್ದು ಬಿಡುವೆವೆ? ಹಾಗಿಲ್ಲದೆ ನಾವು ಅಯೋಧ್ಯೆಗೆ ಹಿಂ ತಿರುಗಿದರೆ ಕೇಳಿದವರಿಗೆ ನಾವು ಏನುತ್ತರವನ್ನು ಕೊಡಬಲ್ಲೆವು ? ಮಹಾ ಬಾಹುವಾಗಿ, ಅಸೂಯಾರಹಿತನಾಗಿ, ಸಮಸ್ತಪ್ರಾಣಿಗಳೊಡನೆಯೂ ಪ್ರಿಯವನ್ನೇ ನುಡಿಯತಕ್ಕ ರಾಮನನ್ನು ನಾವೇ ಕಾಡಿನಲ್ಲಿ ಬಿಟ್ಟು ಬಂದೆ ವೆಂದು ಹೇಳಬೇಕಾಗಿರುವುದಲ್ಲವೆ ? ಈ ಮಾತನ್ನು ಹೇಗೆ ತಾನೇ ಬಾಯಿ ಬಿಟ್ಟು ಹೇಳಬಲ್ಲೆವು ! ಅಯೋಧ್ಯೆಯಲ್ಲಿರತಕ್ಕ ಜನರೆಲ್ಲರೂ ಈಗ ದುಃಖಿತ ರಾಗಿದ್ದರೂ, ನಾವು ಹಿಂತಿರುಗಿ ಹೋಗುವವರೆಗೂ ರಾಮನ ಪ್ರತ್ಯಾಗಮ ನವನ್ನು ಕುರಿತು ಸ್ವಲ್ಪ ಮಟ್ಟಿಗಾದರೂ ಆಶೋತ್ತರವನ್ನಿಟ್ಟುಕೊಂಡಿರುವು ದರಲ್ಲಿ ಸಂದೇಹವಿಲ್ಲ. ಈಗ ನಾವೂ ರಾಮನನ್ನು ಬಿಟ್ಟು ಹೋದರೆ, ಆ ಅಯೋ ಧೈಯೆಲ್ಲವೂ ಆಶಾಭಂಗವನ್ನು ಹೊಂದಿ ದುಃಖಿಸುವುದು. ಬಾಲವೃದ್ಧಿ ರೂ ಸಂಕಟದಿಂದ ಗೋಳಿಡುವುದಕ್ಕಾರಂಭಿಸುವರು. ಜಿತೇಂದ್ರಿಯನಾಗಿ ಮಹಾವೀರನೆನಿಸಿಕೊಂಡಿರುವ ರಾಮನೊಡನೆ ಆಗ ಅಯೋಧ್ಯೆಯಿಂದ ಹೊ ರಟುಬಂದೆವು.ಈಗ ಅವನನ್ನು ಬಿಟ್ಟು, ಹೇಗೆತಾನೇ ನಾವು ಆಪಟ್ಟಣಪ್ರ ವೆ ಶವನ್ನು ಮಾಡಬಲ್ಲೆವು? ರಾಮಶೂನ್ಯವಾದ ಆ ಅಯೋಧ್ಯೆಯನ್ನು ನೋಡಿ ನಾವು ಹೇಗೆತಾನೇ ಸಹಿಸಬಲ್ಲೆವು?” ಎಂದು ಅಲ್ಲಿದ್ದ ಜನರೆಲ್ಲರೂ ಎರಡು ತೋಳುಗಳನ್ನೂ ನೀಡಿಕರುವನ್ನು ಕಾಣದ ಹಸುಗಳಂತೆ ಪರಮದುಃಖದಿಂದ