ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯೦ ಶ್ರೀಮದ್ರಾಮಾಯಣವು [ಸರ್ಗ, ೪೮. ಸಮೂಹಗಳಿಂದ ಕೂಡಿದ ತೋಪುಗಳೂ, ವಿಶೇಷವಾದ ಜಲಸಮೃದ್ಧಿ ಯುಳ್ಳ ಮಹಾನದಿಗಳೂ, ಮನೋಹರವಾದ 'ತಪ್ಪಲುಗಳಿಂದ ಕೂಡಿದ ಪರತಗಳೂ, ರಾಮನ ಮನಸ್ಸಿಗೆ ಎಷ್ಟೋ ಸಂತೋಷವನ್ನುಂಟುಮಾಡು ವುವು. ನಮ್ಮ ರಾಮನು ಯಾವಕಾಡಿನಲ್ಲಿರುವನೋ, ಯಾವ ಬೆಟ್ಟವನ್ನೇರು ವನೋ, ಅವೆಲ್ಲವೂ ತಮ್ಮ ಸಮೀಪಕ್ಕೆ ಬಂದ ರಾಮನನ್ನು ಎಷ್ಟೇ ಪ್ರೀತಿ ಯಿಂದ ಪ್ರಿಯಾತಿಥಿಯಂತೆ ಭಾವಿಸಿ ಪೂಜಿಸದೆ ಬಿಡಲಾರವು. * ರಾಮನು ವನವನ್ನು ಪ್ರವೇಶಿಸಿದೊಡನೆ ಅಲ್ಲಿರತಕ್ಕ , ಹೂಗಿಡಗಳೂ, ಫಲವೃಕ ಗಳೂ, ತಮ್ಮ ಪುಷ್ಟಸಮೃದ್ಧಿಯನ್ನೂ, ಫಲಸಮೃದ್ಧಿಯನ್ನೂ ರಾಮನಿಗೆ ತೋರಿಸಿ, ತಮ್ಮ ಇಂಪಾದ ಭ್ರಮರಧ್ವನಿಯಿಂದ ಆತನನ್ನಾ ನಂದಪಡಿಸ ದಿರಲಾರವು. ಅಲ್ಲಿರತಕ್ಕ ಬೆಟ್ಟಗಳೂಕೂಡ ಋತುವರಗಳನ್ನು ನಿರೀಕ್ಷಿಸದೆ ರಾಮನಲ್ಲಿರತಕ್ಕ ಪ್ರೀತಿಯಿಂದ ಅಕಾಲದಲ್ಲಿಯೂ ಆತನಿಗೆ ಬೇಕಾದ ಪಪ್ಪ ಫಲಗಳನ್ನು ಎಂಟುಮಾಡುವುವು. ಮತ್ತು ಆತನಿಗಾಗಿ ವಿಚಿತ್ರವಾದ ನದಿಗ ಳನ್ನು ಹುಟ್ಟಿಸಿ,ನಿರ್ಮಲವಾದ ನೀರನ್ನು ಒದಗಿಸಿಕೊಡುವುವು. ಆಪರತದ ಮೇಲಿರುವ ವೃಕಗಳೆಲ್ಲವೂ ಸಮಸ್ತವಿಧದಲ್ಲಿಯೂ ನಮ್ಮ ರಾಮನನ್ನು ಸಂ ತೋಷಪಡಿಸುವುವು. ಮುಖ್ಯವಾಗಿ ರಾಮನಲ್ಲಿರುವನೋ ಅಲ್ಲಿ ಭಯವಿಲ್ಲವು. ಆತನಿದ್ದಕಡೆಯಲ್ಲಿ ಪರಾಭವವಿಲ್ಲವು.ಆತನು ಮಹಾಶೂರನು, ಮತ್ತು ಮಹಾ ಬಾಹುವು.ಇದರಮೇಲೆ ಶೂರಾಗ್ರೇಸರನಾದ ದಶರಥನಿಗೆ ಪುತ್ರನಾಗಿಯೂ ಇರುವನು.ಇಂತಹ ಮಹಾತ್ಮನಾದ ರಾಮನಿದ್ದಕಡೆಯಲ್ಲಿ ಯಾವುದೊಂದು ಭಯವೂ ಇರದು.ಇದೆಲ್ಲವೂ ಹಾಗಿರಲಿ ! ನಾವು ಈಗ ಸುಮ್ಮನಿದ್ದರೆ ರಾ ಮನು ಇನ್ನೂ ದೂರಕ್ಕೆ ಹೊರಟುಹೋಗುವನು. ಆದುದರಿಂದ ನಾವೆಲ್ಲ ರೂ ಪುನಃ ಆತನನ್ನು ಹುಡುಕಿಕೊಂಡು ಹೋಗುವುದುತ್ತಮವು. ಮಹಾತ್ಮ ನಾದ ಆತನ ಪಾದಸೇವೆಯೇ ನಮ್ಮ ಸಮಸ್ಯಸೌಖ್ಯಕ್ಕೂ ಮೂಲವು. ನಮ್ಮೆಲ್ಲರಿಗೂ ಆತನೇ ನಾಥನು. ಆತನೇ ಗತಿಯು. ಆತನೇ ನಮಗೆ ಮುಖ್ಯಾ ಧಾರವಾದ ವಸ್ತುವು. (ಎಲೈ ಪ್ರಿಯರೇ!ನಾವೂ ಅವರೊಡನೆಯೇ ಹೊರ * * ವೃಕ್ಷಗಳೆಲ್ಲವೂ ರಾಮನನ್ನೇ ಪರಮಾತ್ಮನನ್ನಾಗಿ ತಿಳಿದು, ತಮ್ಮೊಳಗಿನ ಭ್ರ ಮರಗಳ ಝೇಂಕಾರವೆಂಬ ಮಂತ್ರಗಳನ್ನು ಸ್ಮರಿಸುತ್ತ ತಮ್ಮ ಶಾಲೆಗಳಿಂದ ಕೈಗಳಿಂ ದ ಶಾಂಜಲಿಯನ್ನು ಮಾಡಿ ಆತನನ್ನು ಆರ್ಚಿಸುತ್ತಿದ್ದು ತಂದುಭಾವವು, (ಮಹೇ ಶ್ವರರ್ಥಿಯನ.)