ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ. ಇಲ] ಅಯೋಧ್ಯಾಕಾಂಡವು. ೩on ತಂದಿಡಲ್ಪಟ್ಟಿರುವುವು. ಸ್ವೀಕರಿಸಬೇಕು ! ನೀವು ಮಲಗುವುದಕ್ಕೆ ಬೇಕಾದ ಉತ್ತಮವಾದ ಹಾಸಿಗೆಯನ್ನೂ ತರಿಸಿಟ್ಟಿರುವೆನು, ಇದೋ!ಇಲ್ಲಿ ನಿನ್ನ ಕುದು ರೆಗಳಿಗೆ ಬೇಕಾದ ಹುಲ್ಲು, ಹುರುಳಿ, ಮೊದಲಾದ ಆಹಾರಗಳೂ ಸಿದ್ಧವಾ ಗಿರುವುವು”ಎಂದನು. ಇದನ್ನು ಕೇಳಿ ರಾಮನು ಎಲೆ ಸಖನೆ! ಈ ನಿನ್ನ ಮಾತಿ ನಿಂದಲೇ ನಾವು ತೃಪ್ತರಾದೆವು. ನೀನು ಕಾಲುನಡೆಯಿಂದ ಇದುವರೆಗೆ ಬಂದು ನಮ್ಮ ನಿದಿರುಗೊಂಡು, ಇಷ್ಟು ಸ್ನೇಹವನ್ನು ತೋರಿಸಿದೆಯಲ್ಲವೆ? ಇದ ರಿಂದಲೇ ನಮಗೆ ನಿನ್ನ ಸತ್ಕಾರಗಳೆಲ್ಲವೂ ಸೇರಿದಂತಾಯಿತು” ಎಂದು ಹೇಳಿ, ತನ್ನ ಎರಡುತೋಳುಗಳಿಂದಲೂ ಆತನನ್ನ ಪ್ಪಿಕೊಂಡು, 'ಎಲೈ ಮಿತ್ರನೆ ! ಬಂಧುಮಿತ್ರರೊಡಗೂಡಿ ಕ್ಷೇಮದಿಂದಿರುವ ನಿನ್ನನ್ನು ನೋಡಿ ಆನಂದಿಸ ತಕ್ಕ ಅದೃಷ್ಟವು ನನಗೆ ದೈವವಶದಿಂದುಂಟಾಯಿತು! ನಿನ್ನ ರಾಷ್ಟ್ರವು ಸು ಭಿಕ್ಷವಾಗಿರುವುದೆ ? ನಿನ್ನ ಮಿತ್ರರೆಲ್ಲರೂ ಕ್ಷೇಮದಿಂದಿರುವರೆ? ನಿನ್ನ ಬಂಡಾ ರವು ಲೋಪವಿಲ್ಲದೆ ವೃದ್ಧಿಯನ್ನು ಹೊಂದುತ್ತಿರುವುದೆ ? ನೀನು ನನ್ನಲ್ಲಿ ಪ್ರೀತಿಯಿಂದ ತಂದಿಟ್ಟಿರುವ ಈ ಪದಾರ್ಥಗಳನ್ನು ನಾನು ಸ್ವೀಕರಿಸಿದಂತೆ ಯೇ ಭಾವಿಸು! ಇದೆಲ್ಲವನ್ನೂ ನೀನೇ ಪ್ರತಿಗ್ರಹಿಸು. ಈಗ ನಾನು ಇದೊಂ ದನ್ನೂ ಸ್ವೀಕರಿಸಕೂಡದು. ಇದಕ್ಕೆ ಅನಿವಾಯ್ಯಗಳಾದ ಕೆಲವು ಕಾರಣಗ ಳುಂಟು. ಈಗ ನಾನು ಪಿತೃವಾಕ್ಯಪುಪಾನವೆಂಬ ವ್ರತವನ್ನು ಅಂಗೀಕ ರಿಸಿ, ಆತನ ಆಜ್ಞೆಯಂತೆ - ನಾರುಮಡಿಯನ್ನೂ, ಕೃಷ್ಣಾಜಿನವನ್ನೂ, ದರ್ಭೆಗಳನ್ನೂ ಧರಿಸಿ, ಫಲಮೂಲಗಳನ್ನು ತಿನ್ನುತ್ತ ಕಾಡಿನಲ್ಲಿ ತಪೋನಿರ ತನಾಗಿರುವೆನು. ಈ ಕುದುರೆಗಳಿಗೆ ಹುಲ್ಲನ್ನು ಮಾತ್ರ ತರಿಸಿಕೊಟ್ಟರೆ ಸಾ ಕು ! ಬೇರೆ ಯಾವುದನ್ನೂ ಈಗ ನಾನು ನಿನ್ನಿಂದ ಆಪೇಕ್ಷಿಸತಕ್ಕವನಲ್ಲ. ಇಷ್ಟು ಮಾತ್ರವನ್ನು ನೀನು ಮಾಡಿಕೊಟ್ಟರೆ ನನಗೆ ಸಮರಸತ್ಕಾರಗಳನ್ನೂ ಮಾಡಿದಂತಾಗುವುದು. ಈ ಕುದುರೆಗಳಲ್ಲಿ ನನ್ನ ತಂದೆಯಾದ ದಶರಥನಿಗೆ ಬಹಳ ಪ್ರೀತಿಯುಂಟು. ಇವುಗಳನ್ನು ಚೆನ್ನಾಗಿ ಪೋಷಿಸುತ್ತಿದ್ದರೆ ಅದೇ ನನಗೆ ಸಮಸ್ತ ಸತ್ಕಾರವು” ಎಂದನು. ಒಡನೆಯೇ ಗುಹನು ಆ ಕುದುರೆಗಳಿಗೆ ಬೇಕಾದಷ್ಟು ಹುಲ್ಲನ್ನೂ, ನೀರನ್ನೂ ತಂದಿಡುವಂತೆ ತನ್ನ ಕಡೆಯವರಿಗೆ ಆ ಜ್ಞಾಪಿಸಿದರು, ಅಮೆಲೆ ರಾ ಮತ್ತು ನಾರುಬಟ್ಟೆಯನ್ನು ಹೆದೆ ,ಸಾಯಂ ಕಾಲದ ಸಂದ್ಯೋಪಾಸನೆಯನ್ನು ಮುಗಿಸಿಕೊಂಡನು.ಅಷ್ಟರಲ್ಲಿ ಲಕ್ಷಣನು