ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೯೯

"ಕುರುಡುಭಕ್ತಿ" ಎಂದರೇನು ? ಕಣ್ಣಿರುವನಂಬಿಕೆ ಯಾವುದು? ಇಲ್ಲದುಯಾವುದು ? ನಂಬಿಕೆಯೆಲ್ಲಾ ಕುರುಡೆ ! ನಂಬಿದರೆ ನಂಬಿಕೆಯಾಯ್ತು, ಇಲ್ಲದಿದ್ದರೆ ಜ್ಞಾನ ಅಥವಾ ಅನುಭವವಾಯ್ತು. ವಿಜ್ಞಾನಶಾಸ್ತ್ರಕಾರರು ತಮ್ಮ ಗ್ರಂಥಗಳಲ್ಲಿ ಹೇಳಿರುವ ವಿಷಯಗಳೆಲ್ಲವನ್ನೂ ನಮ್ಮ ಅನುಭವಕ್ಕೆ ತಂದುಕೊಂಡೇ ನಂಬುತ್ತೇವೇನು? ಅವರು ಹೇಳುವುದೆಲ್ಲವನ್ನೂ ಮೂಢರಂತೆ, ಕುರುಡರಂತೆಯೇ ನಂಬುವುದಿಲ್ಲವೋ ? ' ತಕ್ಕ ಯಂತ್ರಗಳೂ ಸಾಧನ ಸಾಮಗ್ರಿಗಳೂ ಅನುಭವವೂ ಇದ್ದರೆ, ನಾವೇ ಅವೆಲ್ಲವನ್ನೂ ಅನುಭವಕ್ಕೆ ತಂದುಕೊಳ್ಳಬಹುದು. ಇಲ್ಲವೇ, ಅವರ ಅಥವಾ ಅಂಥವರ ಹತ್ತಿರಕ್ಕೆ ಹೋದರೆ ಅವುಗಳನ್ನು ಪ್ರತ್ಯಕ್ಷವಾಗಿ ತೋರಿಸುವರು.” ಎಂದು ಅದಕ್ಕೆ ಉತ್ತರಕೊಡಬಹುದು. ಹಾಗಾದರೆ ದೇವರವಿಚಾರದಲ್ಲಿ ಬೇಕಾದ ಶ್ರದ್ಧಾಭಕ್ತಿಗಳಿಗೂ ಅದೇ ಉತ್ತರವನ್ನೇ ಹೇಳಿಬಿಟ್ಟರೆ ಸಾಕಾಗಿದೆ.

ಶ್ರೀ ಶ್ರೀ ರಾಮಕೃಷ್ಣ ಪರಮಹಂಸರವರ ಉಪದೇಶವೆಲ್ಲವನ್ನೂ ಇಲ್ಲಿ ಹೇಳುವುದು ಸಾಧ್ಯವಲ್ಲ. ಆದರೆ ಅವರ ಉಪದೇಶದಲ್ಲಿರತಕ್ಕ ಒಂದು ಅನನ್ಯ ಸಾಮಾನ್ಯವಾದ ವಿಶೇಷವು ಮಾತ್ರ ಅವಶ್ಯಕವಾಗಿ ತಿಳಿಯತಕ್ಕದಾಗಿದೆ. ಬಹಳ ಕಾಲದಿಂದಲೂ ದೇವರೊಬ್ಬನೇಯೆಂದು ಹೇಳುತ್ತಿದ್ದರೂ “ ಏಕ೦ಸದ್ವಿಪ್ರಾಬಹುಧಾವದಂತಿ ” ಎಂದು ಹೇಳುತ್ತಿದ್ದರೂ, “ ಸರ್ವದೇವನಮಸ್ಕಾರ: ಕೇಶನಂಪ್ರತಿ ಗಚ್ಛತಿ ” ಎಂದು ಹೇಳುತ್ತಿದ್ದರೂ, ಇದುವರೆಗೆ ಹುಟ್ಟಿದ ಆಚಾರ: ಪುರುಷರು ಯಾರೂ ಎಲ್ಲಾ ಧರ್ಮಗಳ ಅಥವಾ ಮತಗಳ ಉದ್ದೇಶ್ಯವೂ ಒಂದೇ ಎಂಬುದನ್ನು ತಾವು ಕಾರ್ಯತಃ ಅನುಭವಕ್ಕೆ ತಂದುಕೊಂಡು ಪ್ರಪಂಚಕ್ಕೆ ಅದನ್ನು ಇಷ್ಟು ಘಂಟಾಘೋಷವಾಗಿ ಬೋಧಿಸಿರಲಿಲ್ಲ. ಈ ಸರ್ವಧರ್ಮಸಮನ್ವಯವೇ ಅವರಲ್ಲಿ ವಿಶೇಷ. ಜ್ಞಾನ, ಭಕ್ತಿ, ಯೋಗ, ಕರ್ಮ, ಹಿಂದಿನ ಮತ್ತು ಈಚಿನ ಸಮಸ್ತ ಧರ್ಮಗಳು ಇವೆಲ್ಲವುಗಳ ಒಂದು ಅದೃಷ್ಟ ಪೂರ್ವವಾದ ಸಾಮಂಜ