ವಿಷಯಕ್ಕೆ ಹೋಗು

ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ
೨೯

ಹತ್ತಿರವಿದ್ದ ವಿಶಾಲಾಕ್ಷೆಯಗುಡಿಗೆ ಕೆಲವರು ಹೆಂಗಸರು ಹೊಗುತ್ತಿರಲು ಗದಾಧರನೂ ಹೊರಟನು. ದಾರಿಯಲ್ಲಿ ಅವರು ಹೇಳುತ್ತಿದ್ದ ದೇವಿಯಮೇಲಣ ಹಾಡುಗಳನ್ನು ಕೇಳುತ್ತಾ ಕೇಳುತ್ತಾ ಅವನ ಅ೦ಗಾ೦ಗಗಳೆಲ್ಲವೂ ನಿಶ್ಚಲವಾದುವು. ಕಣ್ಯಗಳಲ್ಲಿ ದಳದಳನೆ ನೀರುಸುರಿಯುವುದಕ್ಕೆ ಆರಂಭವಾಯಿತು. ಜೊತೆಯಲ್ಲಿದ್ದವರಿಗೆ ಗಾಬರಿಯಾದರೂ ಅವನುಮಾತ್ರ " ದೇವಿಯಧ್ಯಾನ ಮಾಡುತ್ತ ಮಾಡುತ್ತ ಅವಳ ಪಾದ ಪದ್ಯಗಳಲ್ಲಿ ಮನಸ್ಸು ಲಯವಾಗಿ ಹಾಗಾಯಿತು" ಎಂದು ಹೇಳಿದನು.

ಗದಾಧರನಿಗೆ ಆಗಲೇ ಒಂಬತ್ತು ವರ್ಷ ತುಂಬಿಹೋದದನ್ನು ನೋಡಿ ರಾಮಕುಮಾರನು ಅವನಿಗೆ ಉಪನಯನ ಮಾಡಬೇಕೆಂದು ನಿಶ್ಚಯಿಸಿ ಅದಕ್ಕೆ ಬೇಕಾದ ಏರ್ಪಾಡು ಮಾಡುತಿದ್ದನು. ಇವರ ಮನೆಯ ಹತ್ತಿರ ಧನಿ ಎಂಬ ಹೆಂಗಸು ಇದಳೆಂದು ಹಿಂದೆಯೇ ಹೇಳಿದ್ದೇವೆ. ಆಕೆಯು ಕಮ್ಮಾರ ಜಾತಿಯವಳು. ಆದರೆ ಗದಾಧರನು ಹುಟ್ಟಿದಂದಿನಿಂದ ಅವನನ್ನು ಎತ್ತಿ ಆಡಿಸಿ ಅವನಿಗೆ ಬಹು ಬೇಕಾದವಳಾಗಿದ್ದಳು. ಒಂದುದಿವಸ ತಾನು ಗದಾಧರನ ಉಪನಯನ ಕಾಲದಲ್ಲಿ ಅವನಿಗೆ ಭಿಕ್ಷಾ ಮಾತೆಯಾಗಿ ತಾನು ಮೊದಲು ಭಿಕ್ಷವನ್ನು ಹಾಕಬೇಕೆಂದು ಕೇಳಿಕೊ೦ಡಿದಳು. ಗದಾಧರನು ಅವಳ ಅಕೃತ್ರಿಮವಾದ ವಿಶ್ವಾಸಮೆಚ್ಚಿ ಒಪ್ಪಿಕೊಂಡಿದ್ದನು. ಧನಿಯೂ ಅವನ ಮಾತಿನಲ್ಲಿ ನಂಬುಗೆಯಿಟ್ಟು ಕಾಸಿಗೆಕಾಸು ಗಂಟು ಹಾಕಿ ಈ ಸಮಯವನ್ನೆ ಎದುರುನೋಡುತ್ತಿದಳು. ಉಪನಯನ ನಿಶ್ಚಯವಾದದ್ದನ್ನು ನೋಡಿ ಗದಾಧರನೂ ರಾಮಕುಮಾರನೊಡನೆ ಈ ಪ್ರಸ್ತಾಪವನ್ನೆತ್ತಿದನು. ಇದು ವೈದಿಕಾಚಾರಕ್ಕೂ ಸತ್ಸಂಪ್ರದಾಯಕ್ಕೂ ವಿರೋಧವಾಗಿದ್ದದ್ದರಿಂದ ರಾಮಕುಮಾರನು ಒಪ್ಪಲಿಲ್ಲ. ಗದಾಧರನು ಬಿಡಲಿಲ್ಲ. ಅವನು "ನಾನು ಮಿಥ್ಯಾವಾದಿಯಾಗುವೆನಲ್ಲವೆ? ಸುಳ್ಳು ಹೇಳುವವನು ಉಪನಯನ ಮಾಡಿಕೊಳ್ಳುವುದಕ್ಕೆ ಎಂದಿಗೂ ಯೋಗ್ಯ