ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೨೭

ವನ್ನು ಬಿಡಬೇಕೆಂದರೂ ಸಂಸಾರವು ಆಕೆಯನ್ನು ಹೇಗೆ ಬಿಟ್ಟಿತು ? ಗದಾಧರನಿಗೆ ಆಗ ಏಳುವರ್ಷ. ಈಚಿಗೆ ಹುಟ್ಟಿದ ಸರ್ವಮಂಗಳೆ ಎಂಬ ಹುಡುಗಿಗೆ ನಾಲ್ಕು ವರ್ಷ. ಇವರ ಯೋಚನೆ ಹೀಗೆ ತಪ್ಪಿತು ? ಆದರಿ೦ದ ಚ೦ಪ್ರಾದೇವಿಯು ರಘುವೀರನ ಧ್ಯಾನದಲ್ಲಿಯೇ ಹೇಗೊ ಸಂಸಾರದ ಯೋಗಕ್ಷೇಮವನ್ನೆಲ್ಲಾ ನೋಡಿಕೊಳ್ಳುತ್ತಾ ಕಾಲಕಳೆಯ ಬೇಕಾಯಿತು. ಗದಾಧರನು ಈಗಲೂ ಎಂದಿನಂತೆ ಸಂತೋಷಚಿತ್ತನಾಗಿದ್ದಂತೆ ಕಂಡುಬಂದರೂ ಕ್ರಮೇಣ ಚಿಂತಾ ಶೀಲನಾದನು. ಈ ಸಮಯದಲ್ಲಿಯೇ ಎಷ್ಟೋ ಜನರು ಆ ಗ್ರಾಮದ ಹರಣದ ಸ್ಮಶಾನ, ಮಾಣಿಕರಾಜನ ಮಾಸಿನತೋಟ ಮುಂತಾದ ನಿರ್ಜನ ಪ್ರದೇಶದಲ್ಲಿ ಏನೋ ಯೋಚನೆಮಾಡುತ್ತಾ ಅವನು ತಿರುಗುತ್ತಿದ್ದದ್ದನ್ನು ನೋಡುತ್ತಿದ್ದರು. ತಾಯಿಯ ದುಃಖವನ್ನು ನೋಡಿ ಆಕೆಯಲ್ಲಿ ಪ್ರೀತಿಯು ಇನ್ನೂ ಹೆಚ್ಚಾಯಿತು. ಮನೆ ಗೆಲಸ ಗಳಲ್ಲಿಯೂ ಪೂಜೆ ಪುರಸ್ಕಾರಗಳಲ್ಲಿಯೂ ಆಕೆಗೆ ಸಹಾಯಕ ನಾಗಿದ್ದು ಯಾವಾಗಲೂ ಆಕೆಗೆ ಸಮಾಧಾನವಾಗುವಂತೆ ವರ್ತಿಸು ಆದನು. ಯಾವುದರಲ್ಲಿಯ ಮೊದಲಿನಂತೆ ಹಟ ಮಾಡುತ್ತಿರ ಲಿಲ್ಲ. ಏಕೆಂದರೆ ತನಗೆ ಬೇಕಾದದನ್ನು ಚಂದ್ರಾದೇವಿಯು ಮಾಡಿ ಕೊಡಲಾರದೆ ಹೋದರೆ ಹಿಂದಿನ ಸ್ಥಿತಿಯನ್ನು ನೆನಸಿಕೊಂಡು ಆಳುತ್ತಿದಳು. ಇದನ್ನು ಕಂಡರೆ ಅವನಿಗೆ ಬಹಳವಾಗಿ ದುಃಖ ವಾಗುತ್ತಿತ್ತು. ಮುಖ್ಯವಾಗಿ ಪಿತೃವಿಯೋಗದಿಂದ ತಾಯಿಯನ್ನು ಎಂದಿಗೂ ಕೈಬಿಡಬಾರದೆಂದೂ ಸರ್ವವಿಧದಲ್ಲಿಯೂ ಅವಳ ಯೋಗ ಕ್ಷೇಮವನ್ನು ನೋಡಿಕೊಳ್ಳಬೇಕೆಂದೂ ಮನಸ್ಸಿನಲ್ಲಿ ವೃಢಸಂಕಲ್ಪ ವುಂಟಾಯಿತು.

ಮನಸ್ಸು ಸ್ವಲ್ಪ ಸಮಾಧಾನಕ್ಕೆ ಬಂದ ಮೇಲೆ ಮತ್ತೆ ಪಾಠ ಶಾಲೆಗೆ ಹೋಗಲು ಮೊದಲು ಮಾಡಿದನು. ಆದರೆ ಪುರಾಣ ಪುಣ್ಯ ಕಥೆಗಳನ್ನೂ ಭಜನೆಕೀರ್ತನೆಗಳನ್ನೂ ಕೇಳುವುದು ದೇವದೇವಿಯರ ವಿಗ್ರಹಗಳನ್ನೂ ಮಾಡುವುದು ಇವುಗಳ ಮೇಲೆ