ಪುಟ:Kannada-Saahitya.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಹಿನ್ನುಡಿ

'ತೊರವೆಯ ರಾಮಯಣ' ಎಂದು ಪ್ರಸಿದ್ಧವಾಗಿರುವ ಕನ್ನಡ ರಾಮಾಯಣದಿಂದ ಈ ಕಥೆಯನ್ನಾಯ್ದದೆ. ವಾಲ್ಮೀಕಿ ರಾಮಾಯಣವನ್ನನುಸರಿಸಿ ರಾಮ ಕಥೆಯನ್ನು ಸರ್ವ ಸುಲಭವಾಗಿ ಸಿಗುವ ಸರಳವಾದ ಗ್ರಂಥ ಈ ತೊರವೆಯ ರಾಮಯಣ.

ಇದನ್ನು ಬರೆದ ಕಹಿಯ ಚೆಸರು ನರಹರಿ. ಬಿಜಾಪುರದ ಹತ್ತಿರ ಇರುವ ತೊರವೆಯೆಂಬ ಗ್ರಾಮ ಇವನ ಊರು. ಅಲ್ಲಿನ ಸರಸಿಂಹ ಸ್ವಾಮಿಯ ಅಂಕಿತದಲ್ಲಿ ಕಾವ್ಯ ರಚನೆ ಮಾಡಿದ್ದಾನೆ. ಕವಿಯ ಊರಿನಿಂದ ಗ್ರಂಥಕ್ಕೆ 'ತೊರವೆಯ ರಾಮಯಣ' ಎಂಬ ಹೆಸರು ಬಂದಿದೆ 'ಗದುಗಿನ ಭಾರತ' ಎಂಬಂತೆ.

'ಕುಮಾರ ವಾಲ್ಮೀಕಿ' ಎಂಬುದು ನರತರಿಗೆ ಬಿರುದು. ಇವನು 'ಕುಮಾರವ್ಯಾಸ' ನನ್ನು ಆದರ್ಶವಾಗಿಟ್ಟುಕೊಂಡಂತಿದೆ. ಅವನನ್ನು ಮೆಚ್ಚಿ ಸ್ಮರಿಸಿದ್ದಾನೆ. ಇವನ ಕಾಲ ಸುಮಾರು ಕ್ರಿ. ಶ. ೧೫೦೦.

ತೊರವೆ ರಾಮಾಯಣ ಜನಪ್ರಿಯವಾದ ಕಾವ್ಯ,